ಅಗ್ನಿಸಾಕ್ಷಿ ಧಾರಾವಾಹಿಯ ರಾಧಿಕಾ ಪಾತ್ರಧಾರಿ ಈಗ ಹೇಗಿದ್ದಾರೆ ಗೊತ್ತಾ, ನಿಜ ಜೀವನದಲ್ಲಿ ಹೇಗಿರುತ್ತಾರೆ ಗೊತ್ತೆ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗೆ ಕೆಲವು ವರ್ಷಗಳಿಂದ ಕನ್ನಡ ಕಿರುತೆರೆಯ ಧಾರವಾಹಿಗಳು ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರೇಕ್ಷಕ ವರ್ಗಕ್ಕೆ ತಲುಪುತ್ತವೆ ಹಾಗೂ ಪ್ರೇಕ್ಷಕರು ಕೂಡ ಧಾರವಾಹಿಗಳನ್ನು ಇಷ್ಟಪಡುತ್ತಿದ್ದಾರೆ. ಇಂದಿನ ಮಾತನಾಡಲು ಹೊರಟಿರುವುದು ಕೂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸು ನಡೆದಿರುವಂತಹ ಧಾರವಾಹಿ ಕುರಿತಂತೆ. ಹೌದು ನೀವು ಕರೆಕ್ಟಾಗಿ ಗೆಸ್ಟ್ ಮಾಡಿದ್ದೀರಾ ಅನ್ಸುತ್ತೆ. ನಾವು ಮಾತನಾಡುತ್ತಿರುವುದು ಅಗ್ನಿಸಾಕ್ಷಿ ಧಾರವಾಹಿ ಕುರಿತಂತೆ.
ಅಗ್ನಿಸಾಕ್ಷಿ ಧಾರಾವಾಹಿ ಯಲ್ಲಿ ರಾಧಿಕಾ ಪಾತ್ರವನ್ನು ನಿರ್ವಹಿಸಿರುವ ನಟಿಯ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಅಗ್ನಿಸಾಕ್ಷಿ ಯಲ್ಲಿ ಪ್ರೇಕ್ಷಕರ ಮನಸ್ಸನ್ನು ಗೆದ್ದಂತಹ ಹಲವಾರು ಪಾತ್ರಗಳಲ್ಲಿ ರಾಧಿಕಾ ಪಾತ್ರವನ್ನು ನಿರ್ವಹಿಸಿರುವುದು ನಟಿ ಅನುಷಾ ರವರು. ಇವರು ಈ ಧಾರಾವಾಹಿಯಲ್ಲಿ ಕೊನೆಯವರೆಗೂ ಕೂಡ ನಟಿಸಿಕೊಂಡು ಬಂದಿದ್ದರು. ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕವೇ ಇವರು ಜನಪ್ರಿಯತೆಗೆ ಬಂದಿದ್ದು ಹಾಗೂ ಇವರಿಗೆ ಇನ್ನೂ ಹಲವಾರು ಸಿನಿಮಾ ಹಾಗೂ ಬೇರೆ ಬೇರೆ ಭಾಷೆಯ ಧಾರವಾಹಿಗಳಲ್ಲಿ ನಟಿಸಲು ಅವಕಾಶ ಸಿಕ್ಕಿದ್ದು. ಆದರೆ ಹಲವಾರು ಸಮಯಗಳಿಂದ ಕನ್ನಡ ಕಿರುತೆರೆಯಲ್ಲಿ ಕಾಣಿಸಿಕೊಂಡಿಲ್ಲ.
ಇನ್ನು ಇವರ ಗಂಡ ಕೂಡ ಫೇಮಸ್ ಅವರು ಯಾರು ಎಂಬುದನ್ನು ನಾವು ನಿಮಗೆ ಹೇಳುತ್ತೇವೆ ಬನ್ನಿ. ಇನ್ನು ಇವರ ಪತಿಯ ಬಗ್ಗೆ ಹೇಳುವುದಾದರೆ ಇವರ ಹೆಸರು ಮನೋಹರ್. ಇವರಿಬ್ಬರು ಒಂಬತ್ತು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದವರು ಇವರು ಕೂಡ ಕಿರುತೆರೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾರೆ. ಆಗಾಗ ಸಿನಿಮಾ ಕಾರ್ಯಗಳಲ್ಲಿ ಕೂಡ ಕಾಣಿಸಿ ಕೊಳ್ಳುತ್ತಾರೆ. ಇಬ್ಬರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವುದರಿಂದಾಗಿ ಒಬ್ಬರನ್ನೊಬ್ಬರು ಅರಿತುಕೊಂಡು ಜೀವನವನ್ನು ಸಾಗಿಸುತ್ತಾರೆ. ಸಮಯ ಸಿಕ್ಕಾಗಲೆಲ್ಲಾ ಪ್ರವಾಸಿ ಸ್ಥಳಗಳನ್ನು ಸುತ್ತಾಡಿಕೊಂಡು ಬರುತ್ತಾರೆ ಇವರ ಫೋಟೋಗಳನ್ನು ಕೂಡ ನೀವು ನೋಡಬಹುದಾಗಿದೆ. ಇವರ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.