Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಒಂದಾಗುತ್ತಿದೆ ಸಲಗ ಮತ್ತು ಟಗರು, ಕನ್ನಡಲ್ಲಿ ಇತಿಹಾಸ ಸೃಷ್ಟಿಸುವುದು ಗ್ಯಾರಂಟಿ, ವಿಷಯ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ ವುಡ್ ನಲ್ಲಿ ಟಗರು ಮತ್ತು ಸಲಗ ಎರಡು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಣಗಳಿಸಿದ ಚಿತ್ರಗಳು. ಟಗರು ಚಿತ್ರವನ್ನು ಸೂರಿ ನಿರ್ದೇಶಿಸಿದ್ದರೇ, ಸಲಗ ಚಿತ್ರವನ್ನು ದುನಿಯಾ ವಿಜಯ್ ನಿರ್ದೇಶಿಸಿದ್ದರು. ಎರಡೂ ಚಿತ್ರಗಳಲ್ಲಿ ಬಹಳಷ್ಟು ಸಾಮ್ಯತೆ ಇತ್ತು. ಕೆಲವರನ್ನು ಹೊರತುಪಡಿಸಿದರೇ, ಅಲ್ಲಿ ಕೆಲಸ ಮಾಡಿದ ತಂತ್ರಜ್ಞರೇ ಇಲ್ಲಿಯೂ ಸಹ ಕೆಲಸ ಮಾಡಿದ್ದರು. ಈಗ ಆ ಸಲಗ ಮತ್ತು ಟಗರು ಚಿತ್ರಗಳು ಒಂದಾಗುತ್ತಿವೆ. ಹೇಗೆ ಎಂಬುದನ್ನು ತಿಳಿಸುತ್ತೇವೆ ಬನ್ನಿ.

ಟಗರು ಸಿನಿಮಾಗೆ ಸಹ ನಿರ್ದೇಶಕರಾಗಿದ್ದ ಅಭಿ ಈಗ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಎರಡು ಚಿತ್ರಗಳಿಗೆ ಸಂಕಲನ ಮಾಡಿದ್ದ ದೀಪು ಎಸ್ ಕುಮಾರ್ ಈ ಚಿತ್ರಕ್ಕೂ ಸಹ ಸಂಕಲನಕಾರರಾಗಿದ್ದಾರೆ. ಇನ್ನು ಸಲಗ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಸಾಹಸ ನಿರ್ದೇಶಕರಾಗಿ ವಿನೋದ್ ಮತ್ತು ಜಾಲಿ ಬಾಸ್ಟಿನ್ ಇದ್ದಾರೆ. ಸಂಗೀತ ನಿರ್ದೇಶಕರಾಗಿ ಎಂದಿನಂತೆ ಚರಣ್ ರಾಜ್ ಮುಂದುವರೆಯಲಿದ್ದಾರೆ. ಸ್ಪೆಷಲ್ ಇಫೆಕ್ಟ್ ಕೆಲಸ ರಾಜನ್ ರವರದ್ದು. ಹೀಗಾಗಿ ಸಲಗ ಮತ್ತು ಟಗರು ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರು ಒಟ್ಟಾಗಿ ಈ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವ ಕಾರಣ , ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.