ಧನಂಜಯ್ ಜೊತೆ ಮದುವೆ ಕುರಿತು ಕೇಳಿದ್ದಕ್ಕೆ ಖುದ್ದು ನಾನೇ ಅಧಿಕೃತವಾಗಿ ತಿಳಿಸ್ತೀನಿ ಎಂದ ನಟಿ ಅಮೃತಾ ಅಯ್ಯಂಗಾರ್. ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ 2021 ಇಸವಿಯಲ್ಲಿ ಸಾಕಷ್ಟು ಸಿನಿಮಾಗಳು ಬಿಡುಗಡೆಯಾಗಿದ್ದವು. ಆದರೆ ಈ ಸಿನಿಮಾಗಳ ಪೈಕಿ ಯಲ್ಲಿ ಅತ್ಯಂತ ಹೆಚ್ಚು ಸೌಂಡ್ ಮಾಡಿರೋದು ಎಂದರೆ ಡಾಲಿ ಧನಂಜಯ್ ನಟನೆಯ ಬಡವ ರಾಸ್ಕಲ್ ಚಿತ್ರ. ಸ್ವತಃ ಡಾಲಿ ಧನಂಜಯ್ ರವರು ನಿರ್ಮಾಪಕನಾಗಿ ಕಾಣಿಸಿಕೊಂಡಿರುವ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡ ಮಟ್ಟದ ಯಶಸ್ಸು ಗಳಿಸಿದೆ. ಬಡವ ರಾಸ್ಕಲ್ ಚಿತ್ರ ನಾಯಕನಾಗಿ ಧನಂಜಯ್ ರವರಿಗೆ ಹಾಗೂ ನಾಯಕಿಯಾಗಿ ಅಮೃತ ಅಯ್ಯಂಗಾರ್ ಅವರಿಗೆ ಕೂಡ ಹೆಸರನ್ನು ತಂದುಕೊಟ್ಟಿದೆ. ಇದೇ ಯಶಸ್ಸು ಇವರಿಬ್ಬರು ಒಟ್ಟಿಗೆ ಮದುವೆಯಾಗುವ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು ಮಾಡುತ್ತಿದೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಅಮೃತ ಅಯ್ಯಂಗಾರ್ ಅವರು ಲವ್ ಮಾಕ್ಟೇಲ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಪ್ರೇಕ್ಷಕರಿಗೆ ಪರಿಚಿತರಾದವರು. ಇದಾದ ನಂತರ ಕೆಲವು ಸಿನಿಮಾಗಳಲ್ಲಿ ಕೂಡ ಕಾಣಿಸಿದ್ದರು. ಯಾವಾಗ ಬಡವ ರಾಸ್ಕಲ್ ಚಿತ್ರದ ಅನ್ನೌನ್ಸ್ಮೆಂಟ್ ಆಗಿತ್ತೋ ಆವಾಗಿನಿಂದ ಧನಂಜಯ್ ಹಾಗೂ ಅಮೃತ ಅಯ್ಯಂಗಾರ್ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಈಗಂತೂ ಈ ಸಿನಿಮಾ ಸೂಪರ್ ಹಿಟ್ ಆಗಿದ್ದು ಇವರಿಬ್ಬರು ಪಕ್ಕ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಹೆಚ್ಚಾಗಿ ಕಾಣುತ್ತಿವೆ.
ಬಡವ ರಾಸ್ಕಲ್ ಚಿತ್ರವಂತೂ ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 50 ದಿನಗಳನ್ನು ಅದ್ದೂರಿಯಾಗಿ ಪೂರೈಸಿದೆ. ಚಿತ್ರದ ಯಶಸ್ಸಿನಿಂದ ಧನಂಜಯ್ ಹಾಗೂ ಅಮೃತ ಅಯ್ಯಂಗಾರ್ ಇಬ್ಬರು ಕೂಡ ಸಂತೋಷವಾಗಿದ್ದಾರೆ ಎಂದು ಹೇಳಬಹುದಾಗಿದೆ. ಇನ್ನು ಮೊನ್ನೆಯಷ್ಟೇ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಅಮೃತ ಅಯ್ಯಂಗಾರ್ ಅವರಿಗಾಗಿ ಕವಿತೆಯನ್ನು ರಚಿಸಿ ಹಾಡಿರುವ ವಿಚಾರದಿಂದಾಗಿ ಇವರಿಬ್ಬರ ನಡುವೆ ಲವ್ವಿಡವ್ವಿ ನಡೆಯುತ್ತಿದೆ ಎಂಬುದಾಗಿ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಇದಕ್ಕಾಗಿ ಇಬ್ಬರು ಜೋಡಿಗಳಿಗೆ ಎಲ್ಲರೂ ಶುಭಹಾರೈಸಿದ್ದಾರೆ.
ಇಬ್ಬರ ನಡುವೆ ಪ್ರೀತಿ ಇದೆ ಇಬ್ಬರು ಮದುವೆಯಾಗಲಿದ್ದಾರೆ ಎಂಬುದಾಗಿ ಜನರು ಸಾಮಾಜಿಕ ಜಾಲತಾಣಗಳಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಇನ್ನು ಇತ್ತೀಚೆಗಷ್ಟೇ ಲವ್ ಮಾಕ್ಟೇಲ್ ಚಿತ್ರದ ಯಶಸ್ಸಿನ ನಂತರ ಲವ್ ಮಾಕ್ಟೇಲ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಇದು ಈಗಾಗಲೇ ಯೂಟ್ಯೂಬ್ ನಲ್ಲಿ ಮೊದಲ ಸ್ಥಾನದಲ್ಲಿ ಟ್ರೆಂಡಿಂಗ್ ನಲ್ಲಿ ಮಿಂಚುತ್ತಿದೆ. ಹೀಗಾಗಿ ಈ ಕುರಿತಂತೆ ಅಮೃತ ಅಯ್ಯಂಗಾರ್ ರವರು ಸುದ್ದಿ ಗೋಷ್ಠಿಯಲ್ಲಿ ಕೂಡ ಇದರ ಕುರಿತಂತೆ ಸಂತೋಷವನ್ನು ಹಂಚಿಕೊಂಡಿದ್ದಾರೆ. ಇದಕ್ಕಿಂತ ಮುಂಚೆ ಅಮೃತಾ ಅಯ್ಯಂಗಾರ್ ಅವರೇ ಆಗಲಿ ಅಥವಾ ಧನಂಜಯ್ ರವರೆ ಆಗಲಿ ಇದರ ಕುರಿತಂತೆ ಮಾತನಾಡಿರಲಿಲ್ಲ. ಇನ್ನು ಮದುವೆ ಕುರಿತಂತೆ ಪ್ರತಿಕ್ರಿಯಿಸುತ್ತಾ ಅಮೃತ ಅಯ್ಯಂಗಾರ್ ಅವರು ಕೆಲವೊಂದು ಮಾತನಾಡಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿಕೊಡುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಧನಂಜಯ್ ಅವರು ನಿಮಗೆ ಪ್ರೊಪೋಸ್ ಮಾಡಿದ್ದಾರೆ ಇದರ ಕುರಿತಂತೆ ನೀವೇನು ಹೇಳುತ್ತೀರಾ ಎಂಬುದಾಗಿ ಮಾಧ್ಯಮದವರು ಪ್ರಶ್ನೆ ಕೇಳಿದ್ದಾರೆ. ಹಾಗೆ ಇದಕ್ಕೆ ಉತ್ತರವನ್ನು ನೀಡುತ್ತಾ ಅಮೃತ ಅಯ್ಯಂಗಾರ್ ಅವರು ಧನಂಜಯ್ ರವರು ಸಿನಿಮಾದಲ್ಲಿ ರೋಮ್ಯಾಂಟಿಕ್ ದೃಶ್ಯಗಳಲ್ಲಿ ಅವರು ತುಂಬಾ ವೀಕು ಅದಕ್ಕಾಗಿಯೇ ಈ ಟಾಸ್ಕ್ ಮಾಡಿದ್ದರು ಆ ಕಾರಣದಿಂದ ನನಗೆ ಪ್ರೊಪೋಸ್ ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.
ಅದು ಕೇವಲ ಟಾಸ್ಕ್ ಮಾತ್ರ ಆಗಿತ್ತು ಅದಕ್ಕಿಂತ ಹೆಚ್ಚಾಗಿ ಇನ್ನೇನು ಆಗಿರಲಿಲ್ಲ. ಆದರೆ ಅದರ ಪ್ರೊಮೊ ಕಟ್ ಹೇಗಿತ್ತು ಎಂದರೆ ಅದು ನಿಜವಾಗಿಯೂ ಲವ್ ಪ್ರಪೋಸ್ ಅಂತೆ ಆಗಿತ್ತು. ಇದನ್ನು ನೋಡಿ ನನ್ನ ಸ್ನೇಹಿತರು ಮಗ ಸಂಬಂಧಿಕರೆಲ್ಲ ಫೋನ್ ಮಾಡಿ ಕೇಳಿದ್ದರು. ಇನ್ನು ನಾನು ಸಿನಿಮಾ ಕರಿಯರ್ ನಲ್ಲಿ ಕಣ್ಣು ಬಿಡುತ್ತಿದ್ದೇನೆ ಅಷ್ಟೇ ಸಾಧಿಸೋಕೆ ತುಂಬಾನೇ ಇದೆ ಆತರ ಏನಾದರೂ ಆಗಿದ್ದರೆ ನಾನು ಅಧಿಕೃತವಾಗಿ ಹೇಳುತ್ತಿದ್ದೆ. ಇದು ಕೇವಲ ಕಾರ್ಯಕ್ರಮದ ಟಾಸ್ಕ್ ಅಷ್ಟೇ ಎಂಬುದಾಗಿ ಅಮೃತ ಅಯ್ಯಂಗಾರ್ ಅವರು ಈ ಪ್ರಕರಣಕ್ಕೆ ಸಮರ್ಥನೆ ನೀಡಿದ್ದಾರೆ. ಈ ವಿಚಾರದ ಕುರಿತಂತೆ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.
Comments are closed.