ತನ್ನ ಮಗಳನ್ನು ಮದುವೆಯಾಗುವ ಹುಡುಗ ಈ ಷರತ್ತುಗಳನ್ನು ಒಪ್ಪಲೇ ಬೇಕು ಎಂದು ಷರತ್ತು ಹಾಕಿದ ಶಾರುಖ್, ಯಾವ್ಯಾವು ಷರತ್ತು ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗವನ್ನು ನಮ್ಮ ಭಾರತ ಚಿತ್ರರಂಗದ ರಂಗುರಂಗಿನ ದುನಿಯಾ ಎಂಬುದಾಗಿ ಕರೆಯಲಾಗುತ್ತದೆ. ಬಾಲಿವುಡ್ ಚಿತ್ರರಂಗವನ್ನು ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಶ್ರೀಮಂತ ಚಿತ್ರರಂಗ ಎಂದು ಕರೆಯಬಹುದಾದಂತಹ ಐಷಾರಾಮಿ ಯನ್ನು ಹೊಂದಿರುವ ಚಿತ್ರರಂಗ ಎಂದು ಕರೆದರು ಕೂಡ ತಪ್ಪಿಲ್ಲ. ನಾವು ಹೇಳಲು ಹೊರಟಿರುವುದು ಕೂಡ ಇದೇ ಬಾಲಿವುಡ್ ಚಿತ್ರರಂಗವನ್ನು ಮಾಡಿರುವಂತಹ ನಾಯಕನೊಬ್ಬನ ಕುರಿತಂತೆ. ಹೌದು ಈತ ದೆಹಲಿಯಿಂದ ಮುಂಬೈಗೆ ಬಂದು ಕಷ್ಟಪಟ್ಟು ತನ್ನ ಪ್ರತಿಭೆ ಮೂಲಕ ಯಾರ ಸಹಾಯವಿಲ್ಲದೆ ಈಗ ಬಾಲಿವುಡ್ ಚಿತ್ರರಂಗದಲ್ಲಿ ಕಿಂಗ್ ಖಾನ್ ಆಗಿ ಮೆರೆಯುತ್ತಿದ್ದಾರೆ.
ಹೌದು ನಾವು ಮಾತನಾಡುತ್ತಿರುವುದು ಶಾರುಖ್ ಖಾನ್ ಅವರ ಅವರ ಕುರಿತಂತೆ. ಶಾರುಖ್ ಖಾನ್ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟಾಗ ಧರ್ಮೇಂದ್ರ ಅಮಿತಾಬ್ ಬಚ್ಚನ್ ರಂತಹ ಬಾಲಿವುಡ್ ಚಿತ್ರರಂಗದ ತಿಮಿಂಗಲಗಳು ಇದ್ದರು. ಅವರ ನಡುವಲ್ಲಿಯು ಕೂಡ ಇಷ್ಟೊಂದು ಹೆಸರು ಸಂಪಾದಿಸುವುದಕ್ಕೆ ಕೇವಲ ಅವರ ಪರಿಶ್ರಮ ಮಾತ್ರ ಕಾರಣ ಎಂದು ಹೇಳಬಹುದು. ಒಂದು ಸಮಯದಲ್ಲಿ ತಿನ್ನಲು ಒಂದು ಹೊತ್ತಿನ ಊಟಕ್ಕೂ ಕೂಡ ಗತಿ ಇರಲಿಲ್ಲ. ಆದರೆ ಇಂದು ಅದೆಷ್ಟು ಜನರ ಪಾಲಿಗೆ ಬೆಳಕಾಗಿದ್ದಾರೆ. ಇಂದಿಗೂ ಅವರ ಚಿತ್ರಗಳು ಬಾಕ್ಸ್ ಆಫೀಸ್ ನಲ್ಲಿ ಫೈಲ್ ಆದರೂ ಕೂಡ ಅವರ ಡೇಟ್ಸ್ ಗಾಗಿ ನಿರ್ಮಾಪಕರು ಅವರ ಮನೆಯ ಮುಂದೆ ಕ್ಯೂನಲ್ಲಿ ನಿಲ್ಲುತ್ತಾರೆ. ಅಷ್ಟರ ಮಟ್ಟಿಗೆ ಶಾರುಖ್ ಖಾನ್ ರವರ ಮಾರುಕಟ್ಟೆ ಎನ್ನುವುದು ಉನ್ನತ ಮಟ್ಟದಲ್ಲಿದೆ.
ಇದಕ್ಕಾಗಿ ಅವರನ್ನು ಭಾರತೀಯ ಚಿತ್ರರಂಗದ ಅತ್ಯಂತ ಶ್ರೀಮಂತ ನಟ ಹಾಗೂ ಬಾಲಿವುಡ್ ಚಿತ್ರರಂಗದ ಬಾದಶಾಹ ಎಂದು ಕರೆಯುತ್ತಾರೆ. ಶಾರುಖ್ ಖಾನ್ ಅವರ ವೈವಾಹಿಕ ಜೀವನಕ್ಕೆ ಬರುವುದಾದರೆ ಅವರದು ಲವ್ ಮ್ಯಾರೇಜ್ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಗೌರಿ ಖಾನ್ ಶಾರುಖ್ ಖಾನ್ ರವರ ಕಷ್ಟದ ಸಮಯದಲ್ಲಿ ಕೂಡ ಅವರ ಹೆಗಲಿಗೆ ಹೆಗಲಾಗಿ ನಿಂತು ಇಂದು ಅವರಿಬ್ಬರು ಬೆಸ್ಟ್ ಜೋಡಿ ಎಂಬುದಾಗಿ ಎಲ್ಲರಿಂದ ಕರೆಸಿಕೊಳ್ಳುತ್ತಿದ್ದಾರೆ. ಇನ್ನು ಅವರಿಗೆ ಸುಹಾನಾ ಖಾನ್ ಎನ್ನುವ 21 ವರ್ಷದ ಮಗಳು ಕೂಡ ಇದ್ದಾಳೆ. ಶಾರುಖ್ ಖಾನ ರವರ ಮಗಳು ಎನ್ನುವ ಕಾರಣಕ್ಕಾಗಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಭಿಮಾನಿಗಳು ಕೂಡ ಇದ್ದಾರೆ.
ಇನ್ನು ಸ್ವತಃ ಶಾರುಖ್ ಖಾನ್ ರವರೆ ಸಂದರ್ಶನವೊಂದರಲ್ಲಿ ಹೇಳಿರುವಂತೆ ಶಾರುಖ್ ಖಾನ್ ಅವರ ಕೆಲವೊಂದು ಷರತ್ತುಗಳನ್ನು ಒಪ್ಪಿದರೆ ಮಾತ್ರ ಸುಹಾನಾ ಖಾನ್ ಅವರ ಜೊತೆಗೆ ಅಥವಾ ಪ್ರೀತಿ ಮಾಡಲು ಸಾಧ್ಯ ಎಂಬುದಾಗಿ ಹೇಳಿದ್ದಾರಂತೆ. ಒಂದು ವೇಳೆ ಸುಹಾನಾ ಖಾನ್ ರವರನ್ನು ಯಾರಾದರೂ ಪ್ರೀತಿಸಲು ಬಯಸಿದರೆ ಶಾರುಖ್ ಖಾನ್ ರವರ ಈ ಶರತ್ತುಗಳನ್ನು ಫಾಲೋ ಮಾಡಲೇಬೇಕು. ಈ ಶರತ್ತುಗಳಲ್ಲಿ ಪಾಸಾದರೆ ಮಾತ್ರ ಆಕೆಯನ್ನು ಮದುವೆ ಆಗಬಹುದಂತೆ. ಹಾಗಿದ್ದರೆ ಆ ಶರತ್ತುಗಳು ಏನೆಂಬುದು ತಿಳಿಯೋಣ ಬನ್ನಿ.
ಮೊದಲಿಗೆ ಸುಹಾನ ಳನ್ನು ಪ್ರೀತಿ ಮಾಡುವವನು ಒಂದೊಳ್ಳೆ ಕೆಲಸದಲ್ಲಿ ಇರಬೇಕು. ಮಗಳ ಮೇಲೆ ಹೇಗೆ ಕಾಳಜಿಯಿಂದ ಕಣ್ಣಿಟ್ಟಿರುತ್ತಾರೆಯೋ ಅದೇ ರೀತಿ ಅವಳನ್ನು ಪ್ರೀತಿಸುವವನ ಮೇಲು ಕೂಡ ಒಂದು ಕಣ್ಣನ್ನು ಶಾರುಖ್ ಖಾನ್ ರವರು ಇಟ್ಟಿರುತ್ತಾರೆ. ಯಾವುದಾದರೂ ಸಮಸ್ಯೆಯಲ್ಲಿ ಮಗಳು ಸಿಕ್ಕಿಬಿದ್ದರೆ ಮೊದಲಿಗೆ ಕಿಂಗ್ ಖಾನ್ ತರಾಟೆಗೆ ತೆಗೆದುಕೊಳ್ಳುವುದು ಅವಳ ಬಾಯ್ ಫ್ರೆಂಡ್ ಅಥವಾ ಮದುವೆಯಾಗುವನನ್ನು. ಒಂದು ವೇಳೆ ಮಗಳಿಗೆ ಏನಾದರೂ ಕಷ್ಟ ಆಗಿದ್ದು ಗೊತ್ತಾದರೆ ಅವಳನ್ನು ಮದುವೆಯಾಗಿರುವ ಗಂಡನನ್ನು ಅಥವಾ ಬಾಯ್ ಫ್ರೆಂಡ್ ಅನ್ನು ಯಾವ ಮಟ್ಟಕ್ಕೆ ಹೋಗಿ ಏನು ಬೇಕಾದರೂ ಮಾಡಲು ಕೂಡ ಕಿಂಗ್ ಖಾನ್ ಸಿದ್ಧವಾಗಿದ್ದಾರೆ.
ಇನ್ನು ಹೈರಾಣಾಗುವ ವಿಚಾರವೇನೆಂದರೆ ತನ್ನ ಮಗಳಾಗಿರುವ ಸುಹಾನಾ ಖಾನ್ ರವರ ಬಾಯ್ಫ್ರೆಂಡ್ ಅನ್ನು ಶಾರುಖ್ ಖಾನ್ ಅವರು ಖಂಡಿತವಾಗಿ ಇಷ್ಟಪಡಲು ಸಾಧ್ಯವೇ ಇಲ್ಲವಂತೆ. ಇವೆಲ್ಲ ನಿಯಮ ಹಾಗೂ ಒಪ್ಪಂದಗಳನ್ನು ಒಪ್ಪಿ ಇದರಲ್ಲಿ ಪಾಸಾದರೆ ನೀವು ಇಡೀ ವಿಶ್ವದ ಅತ್ಯಂತ ಶ್ರೀಮಂತ ನಟನ ಮಗಳಿಗೆ ಗಂಡನಾಗಿ ಆಯ್ಕೆಯಾಗಬಹುದು. ಈ ವಿಚಾರ ಹಾಗೂ ನಿಯಮಗಳ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.
Comments are closed.