Neer Dose Karnataka
Take a fresh look at your lifestyle.

ನಮ್ಮ ನಿಮ್ಮೆಲ್ಲರ ನೆಚ್ಚಿನ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರ ನಿಜವಾದ ವಯಸ್ಸೆಷ್ಟು ಗೊತ್ತಾ?? ನೀವು ನಂಬಲು ಕೂಡ ಸಾಧ್ಯವಿಲ್ಲ.

ನಮಸ್ಕಾರ ಸ್ನೇಹಿತರೇ ನಮ್ಮ ದಕ್ಷಿಣ ಭಾರತ ಚಿತ್ರರಂಗದ ನಟಿಯರು ಈಗಾಗಲೇ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸುವ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ಪರಿಚಯ ಹಾಗೂ ಜನಪ್ರಿಯತೆಯನ್ನು ವಿಸ್ತರಿಸಿಕೊಂಡಿದ್ದಾರೆ. ನಮ್ಮ ನಟಿಯರ ನಟನೆ ಹಾಗೂ ಸೌಂದರ್ಯ ಎಷ್ಟರಮಟ್ಟಿಗೆ ಜನರನ್ನು ಮೋಡಿ ಮಾಡಿದೆ ಎಂದರೆ ಅವರ ನಿಜವಾದ ವಯಸ್ಸನ್ನು ಊಹಿಸಲು ಕೂಡ ಪ್ರೇಕ್ಷಕರಿಗೆ ಸಾಧ್ಯವಾಗುವುದಿಲ್ಲ. ಇಂದು ನಾವು ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರ ನಿಜವಾದ ವಯಸ್ಸಿನ ಕುರಿತಂತೆ ನಿಮಗೆ ಹೇಳಲು ಹೊರಟಿದ್ದೇವೆ.

ನಾವು ಹೇಳಲು ಹೊರಟಿರುವ ನಾಯಕ ನಟಿಯರ ವಯಸ್ಸಿನ ಕುರಿತಂತೆ ಕೇಳಿ ನೀವು ಕೂಡ ಆಶ್ಚರ್ಯ ಪಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಭಾರತೀಯ ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ತಮನ್ನಾ ರವರ ವಯಸ್ಸು 32 ವರ್ಷ. ಇತ್ತೀಚಿಗಷ್ಟೇ ವಿವಾಹ ವಿಚ್ಛೇದನ ನೀಡುವ ಮೂಲಕ ಸುದ್ದಿಯಾಗಿರುವ ಸಮಂತ ಅವರ ನಿಜವಾದ ವಯಸ್ಸು 34 ವರ್ಷ ವಯಸ್ಸು. ಇವರಿಬ್ಬರು ಮೂವತ್ತರ ಗಡಿಯನ್ನು ದಾಟಿ ದ್ದಾರೆ ಎಂದು ನಂಬುವುದೇ ಕಷ್ಟವಾಗಿಬಿಟ್ಟಿದೆ. ಇತ್ತೀಚಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಇಬ್ಬರು ನಟಿಯರ ಎಂದರೆ ಒಬ್ಬರು ರಶ್ಮಿಕ ಮಂದಣ್ಣ ಹಾಗೂ ಇನ್ನೊಬ್ಬರು ಸಾಯಿಪಲ್ಲವಿ. ರಶ್ಮಿಕ ಮಂದಣ್ಣ ಅವರಿಗೆ 25 ವರ್ಷ ವಯಸ್ಸಾದರೆ ಸಾಯಿಪಲ್ಲವಿ ರವರಿಗೆ 26 ವರ್ಷ ವಯಸ್ಸು.

ದಕ್ಷಿಣ ಭಾರತ ಚಿತ್ರರಂಗದ ಸ್ಟಾರ್ ನಟಿಯ ರಾಗಿರುವ ಕಾಜಲ್ ಅಗರ್ವಾಲ್ ಹಾಗೂ ಶ್ರುತಿ ಹಾಸನ್ ಅವರದು ಒಂದೇ ವಯಸ್ಸು. ಹೌದು ಗೆಳೆಯರೇ ಈ ಇಬ್ಬರು ನಟಿಯರದ್ದು 36 ವರ್ಷ ವಯಸ್ಸು. ಇನ್ನು ದಕ್ಷಿಣ ಭಾರತ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂಬ ಖ್ಯಾತಿಗೆ ಒಳಗಾಗಿರುವ ನಮ್ಮ ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ ಅವರ ವಯಸ್ಸು ಕೂಡ ನಿಮ್ಮನ್ನು ದಿಗ್ಭ್ರಮೆಗೆ ಒಳಪಡಿಸುವುದು ಗ್ಯಾರಂಟಿ. ಅವರು ನೋಡಲು ಮೂವತ್ತರ ಹರೆಯದ ನಟಿಯಂತೆ ಕಂಡರೂ ಕೂಡ ಅವರ ವಯಸ್ಸು 40 ಆಗಿದೆ. ನಮ್ಮ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಟಿಯರ ವಯಸ್ಸಿನ ಕುರಿತಂತೆ ನಿಮಗೆ ಏನು ಅನ್ನಿಸುತ್ತಿದೆ ಎಂಬುದನ್ನು ಕಾಮೆಂಟ್ ಬಾಕ್ಸಲ್ಲಿ ತಿಳಿಸಿ.

Comments are closed.