ವಿಷ್ಣುವರ್ಧನ್ ರವರು ಹೀರೋ ಆಗೋದು ಬೇಡ ಎಂದು ನಟಿ ಮಂಜುಳಾ ರವರ ಹಠ ಹಿಡಿದಿದ್ದು ಯಾಕೆ ಗೊತ್ತೇ?? ಅಷ್ಟಕ್ಕೂ ಅಂದು ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ಗತಕಾಲದಲ್ಲಿ ನಡೆದಿರುವಂತಹ ಹಲವಾರು ವಿಚಾರಗಳು ನಮಗೆ ಗೊತ್ತಿರುವುದಿಲ್ಲ. ಆ ವಿಚಾರಗಳನ್ನು ಹಾಗೂ ಘಟನೆಗಳನ್ನು ಕೇಳಿದಾಗೆಲ್ಲ ನಮಗೆ ರೋಮಾಂಚನ ವಾಗುವಂತಹ ಅನುಭವ ನೀಡುವುದು ಗ್ಯಾರಂಟಿ. ನಮ್ಮ ಕನ್ನಡ ಚಿತ್ರರಂಗಕ್ಕೆ ಅದರದ್ದೇ ಆದಂತಹ ಸುವರ್ಣ ಇತಿಹಾಸವಿದೆ. ಇನ್ನು ನಾವು ಆ ಗತಕಾಲದಲ್ಲಿ ಕೆದಕಿ ಒಂದು ವಿಚಾರವನ್ನು ನಿಮ್ಮೆದುರು ಇಡಲು ಬಂದಿದ್ದೇವೆ. ಹೌದು ನಾವು ಮಾತನಾಡಲು ಹೊರಟಿರುವುದು ಕಿಟ್ಟುಪುಟ್ಟು ಚಿತ್ರದ ಕುರಿತಂತೆ.
ಕಿಟ್ಟು ಪುಟ್ಟು ಚಿತ್ರದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಹಾಗೂ ಮಂಜುಳಾರವರು ಒಟ್ಟಿಗೆ ನಟಿಸಿದ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿತ್ತು. ತಮಿಳು ಚಿತ್ರವೊಂದನ್ನು ನೋಡಿದ ದ್ವಾರಕೀಶ್ ರವರು ಈ ಚಿತ್ರವನ್ನು ಮಾಡಬೇಕೆಂಬ ನಿರ್ಧಾರವನ್ನು 1977 ರಲ್ಲಿ ಮಾಡುತ್ತಾರೆ. ನಾಯಕನಾಗಿ ಸಾಹಸಸಿಂಹ ವಿಷ್ಣುವರ್ಧನ್ ರವರನ್ನು ಹಾಗೂ ನಾಯಕಿಯನ್ನಾಗಿ ಮಂಜುಳಾ ರವರನ್ನು ಮಾಡಬೇಕೆಂಬ ನಿರ್ಧಾರವನ್ನು ಕೂಡ ಮಾಡುತ್ತಾರೆ. ನಿರ್ದೇಶಕನಾಗಿ ಸಿ ವಿ ರಾಜೇಂದ್ರನ್ ರವರಿಗೆ ಜವಾಬ್ದಾರಿಯನ್ನು ನೀಡುತ್ತಾರೆ. ಇಂದಿಗೆ ಈ ಚಿತ್ರ ಒಂದು ಕಾಲದಲ್ಲಿ ಇತಿಹಾಸವನ್ನು ಸೃಷ್ಟಿಸಿ ದಂತಹ ಚಿತ್ರ ವಾಗಿರಬಹುದು ಆದರೆ ಆ ಸಮಯದಲ್ಲಿ ಅದರ ಹಿಂದಿನ ಕಥೆ ಬೇರೆ ಇತ್ತು.
ಅದೇನೆಂದರೆ ಚಿತ್ರದ ಪ್ರಾರಂಭದ ಸಮಯದಲ್ಲಿ ನಟಿ ಮಂಜುಳಾ ರವರು ನಾಯಕ ನಟನಾಗಿ ವಿಷ್ಣುವರ್ಧನ್ ರವರು ಬೇಡ ಬದಲಾಗಿ ಶ್ರೀನಾಥ್ ಅವರು ಇರಲಿ ಎಂಬುದಾಗಿ ಹೇಳಿದ್ದಾರಂತೆ. ಅದಕ್ಕೆ ಒಂದು ಕಾರಣ ಕೂಡ ಇತ್ತು ಅದೇನೆಂದರೆ ಅಂದಿನ ಕಾಲದಲ್ಲಿ ಶ್ರೀನಾಥ್ ಹಾಗೂ ಮಂಜುಳಾರವರ ಜೋಡಿ ಸೂಪರ್ ಹಿಟ್ ಆಗಿತ್ತು. ಈ ದೃಷ್ಟಿಯಿಂದಲೇ ಮಂಜುಳಾರವರು ಈ ಸಲಹೆಯನ್ನು ನೀಡಿರುತ್ತಾರೆ. ಆದರೆ ದ್ವಾರಕೀಶ್ ಅವರು ಚಿತ್ರದ ನಿರ್ಮಾಪಕರಾಗಿದ್ದು ಅವರ ನೆಚ್ಚಿನ ನಟ ಹಾಗೂ ಸ್ನೇಹಿತ ಎಂದರೆ ವಿಷ್ಣುವರ್ಧನ್ ರವರು. ಹೀಗಾಗಿ ಮಂಜುಳಾರ ವರಮಾನವನ್ನು ಹೋಲಿಸಿ ಈ ಚಿತ್ರವನ್ನು ಪೂರ್ಣ ಮಾಡುತ್ತಾರೆ ಹಾಗೂ ಬಿಡುಗಡೆಯನ್ನು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆಯುತ್ತಾರೆ. ಈ ವಿಚಾರದ ಕುರಿತು ನಿಮಗೆ ಮೊದಲೇ ಗೊತ್ತಿತ್ತ ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಏನೆಂಬುದು ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.