ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟರು ಪ್ರತಿದಿನಕ್ಕೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ??ಅಬ್ಬಾ ಇಷ್ಟೊಂದಾ??
ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ಸಿನಿಮಾದಲ್ಲಿ ನಾಯಕನಟ, ಕಳ ನಾಯಕರಿಗೆ ಎಷ್ಟು ಪ್ರಾಮುಖ್ಯತೆ ಸಿಗುತ್ತದೆಯೋ ಅಷ್ಟೇ ಪ್ರಾಮುಖ್ಯತೆ ಒಬ್ಬ ಹಾಸ್ಯನಟನಿಗೆ ಕೂಡ ಸಿಗುತ್ತದೆ. ಸಿನಿಮಾ ಹಿಟ್ ಆಗಲು ಹಾಸ್ಯನಟನ ಕೂಡ ಅಷ್ಟೇ ಪ್ರಮುಖವಾದ ಪಾತ್ರವಹಿಸುತ್ತಾನೆ ಎಂದು ಹೇಳಬಹುದು. ಇನ್ನು ಸ್ಟಾರ್ ನಟ ಒಂದು ಸಿನಿಮಾದಲ್ಲಿ ಸಕ್ರಿಯನಾದರೆ, ಹಾಸ್ಯ ನಟರು ಹಲವಾರು ಸಿನಿಮಾಗಳಲ್ಲಿ ಸಕ್ರಿಯರಾಗಿರುತ್ತಾರೆ. ಸಿನಿಮಾದ ಇತರ ಕಲಾವಿದರಿಗೆ ನೀಡುವ ಸಂಭಾವನೆಗೆ ಹಾಸ್ಯ ನಟರಿಗೂ ಕೂಡ ಸಂಭಾವನೆ ನೀಡಲಾಗುತ್ತದೆ.
ಸ್ಟಾರ್ ನಟರಿಗೆ ಒಂದು ಸಿನಿಮಾಗೆ ಇಷ್ಟೊಂದು ಸಂಭಾವನೆ ನೀಡಲಾದರೆ, ಹಾಸ್ಯ ನಟರಿಗೆ ದಿನದ ಲೆಕ್ಕದಲ್ಲಿ ಸಂಭಾವನೆ ನೀಡಲಾಗುತ್ತದೆ. ಇದೀಗಾಗಲೇ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಾಸ್ಯ ನಟರು ಸ್ಟಾರ್ ನಟರಂತೆ ಜನಪ್ರಿಯತೆ ಪಡೆದಿದ್ದಾರೆ. ಅಷ್ಟೇ ಅಲ್ಲದೆ ಅವರಿಗೂ ಕೂಡ ಕೊಟ್ಯಂತರ ಅಭಿಮಾನಿಗಳಿದ್ದಾರೆ. ಹೀಗೆ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ ಗುರುತಿಸಿಕೊಂಡಿರುವ ಅನೇಕ ಕಲಾವಿದರು ಪಡೆದುಕೊಳ್ಳುವ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಈ ಕೆಳಗೆ ನೀಡಲಾಗಿದ್ದು, ಇದನ್ನು ಸಂಪೂರ್ಣವಾಗಿ ಓದಿ.
ಕಾಮಿಡಿ ಕಿಲಾಡಿಗಳು ಎಂಬ ರಿಯಾಲಿಟಿ ಶೋ ಮೂಲಕ ಹಾಸ್ಯ ಪಾತ್ರಗಳಲ್ಲಿ ಜನಪ್ರಿಯತೆ ಪಡೆದ ನಟ ಶಿವರಾಜ್ ಕೆ ಆರ್ ಪೇಟೆ. ಇವರು ಕನ್ನಡದ ಆಯೋಗ್ಯ ಸಿನಿಮಾದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಇದೀಗಾಗಲೇ ಇವರು 29ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ತಮ್ಮ ಮಾತುಗಳ ಮೂಲಕ ಜನರನ್ನು ನಕ್ಕುನಲಿಸುವ ಈ ಹಾಸ್ಯನಟ ಪ್ರತಿದಿನಕ್ಕೆ 20 ರಿಂದ 30 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದೇ ರೀತಿ ‘ಜನುಮದ ಜೋಡಿ’ ಎಂಬ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಿನಿ ಜರ್ನಿ ಆರಂಭಿಸಿದ ನಟ ಮಂಡ್ಯ ರಮೇಶ್. ಇವರು ಕೂಡ ಸುಮಾರು 150ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇವರು ಪ್ರತಿ ದಿನಕ್ಕೆ 50 ಸಾವಿರ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಇನ್ನು ಕನ್ನಡದ ಬಿಗ್ ಬಾಸ್ ಹಾಗೂ ಮಜಾ ಟಾಕೀಸ್ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದ ಹಾಸ್ಯ ನಟ ಕುರಿ ಪ್ರತಾಪ್. ಸಿಕ್ಸರ್ ಎಂಬ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಪಾದಾರ್ಪಣೆ ಮಾಡಿದ ನಟ ಪ್ರತಾಪ್. ಇವರು ಕೂಡ 140 ಕ್ಕಿಂತ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಹಾಸ್ಯ ಪಾತ್ರದಲ್ಲಿ ಜನಪ್ರಿಯತೆ ಪಡೆದಿರುವ ನಟ ಕುರಿ ಪ್ರತಾಪ್ ಅವರು ಪ್ರತಿ ದಿನಕ್ಕೆ 75 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ. ನಟ ಜಗ್ಗೇಶ್ ಅಭಿನಯದ ಮಠ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯತೆ ಪಡೆದ ನಟ ತಬಲಾ ನಾಣಿ. ಇವರು ಇಲ್ಲಿಯವರೆಗೆ 60ಕ್ಕಿಂತ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದು, 75 ಸಾವಿರದಿಂದ 1 ಲಕ್ಷ ರೂಪಾಯಿವರೆಗೆ ಸಂಭಾವನೆ ಪಡೆಯುತ್ತಾರೆ.
ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ಜನಪ್ರಿಯತೆ ಪಡೆದು ನಂತರ ಹಾಸ್ಯಪಾತ್ರಗಳಲ್ಲಿ ಕೂಡ ಜನರ ಮನಸ್ಸನ್ನು ಗೆದ್ದ ನಟ ರಂಗಾಯಣ ರಘು. ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದರು ಎಂದರೆ ಅವರು ಪ್ರತಿ ಸಿನಿಮಾದಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರು ಪ್ರತಿ ದಿನಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇನ್ನು 2011 ರಲ್ಲಿ ತೆರೆಕಂಡ ಯಶ್ ಅಭಿನಯದ ಕಿರಾತಕ ಸಿನಿಮಾದ ಮೂಲಕ ಜನಪ್ರಿಯತೆ ಪಡೆದ ಹಾಸ್ಯ ನಟ ಚಿಕ್ಕಣ್ಣ. ಅಂದಿನಿಂದ ಇಂದಿನವರೆಗೆ ಅವರು ತುಂಬಾ ಬ್ಯುಸಿ ಆಗಿರುವ ನಟ ಎಂದೇ ಹೇಳಬಹುದು.
ಇವರು ತಮ್ಮ 11 ವರ್ಷದ ಸಿನಿಪಯಣದಲ್ಲಿ 70ಕ್ಕಿಂತ ಹೆಚ್ಚಿನ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು ದಿನಕ್ಕೆ ಎರಡರಿಂದ ಮೂರು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದೇ ರೀತಿ ಕನ್ನಡ ಚಿತ್ರರಂಗದಲ್ಲಿ ಹಾಸ್ಯನಟರಾಗಿ, ಗಾಯಕನಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿರುವ ನಟ ಸಾಧು ಕೋಕಿಲ. ಇವರು ಚಿತ್ರರಂಗಕ್ಕೆ ಕಾಲಿಟ್ಟು ದಶಕಗಳೇ ಕಳೆದಿದ್ದರೂ ಕೂಡ ಇಂದಿಗೂ ಕೂಡ ಇವರಿಗೆ ಬೇಡಿಕೆ ಇದೆ. ಇನ್ನು ಇವರು ಕೂಡ ಪ್ರತಿದಿನಕ್ಕೆ ಎರಡರಿಂದ ಮೂರು ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇನ್ನು ಈ ಹಾಸ್ಯ ನಟರಲ್ಲಿ ನಿಮಗೆ ಯಾರು ತುಂಬಾ ಇಷ್ಟ ಎಂಬುದನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.
Comments are closed.