ದಿನಕ್ಕೆ ಬರೋಬ್ಬರಿ 15 ಲೀಟರ್ ಹಾಲು ಕುಡಿಯುವ ಗಜೇಂದ್ರನ ಬಗ್ಗೆ ನಿಮಗೆ ಗೊತ್ತೇ?? ಬೆಲೆ ಎಷ್ಟು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಈ ಗಜೇಂದ್ರನ ಹೆಸರು ಕೇಳಿದರೆ ಸಾಕು ಕರ್ನಾಟಕ ಹಾಗೂ ಮಹಾರಾಷ್ಟ್ರದ ಜನಗಳು ಒಮ್ಮೆ ತಿರುಗಿ ನೋಡುತ್ತಾರೆ. ಆತನ ಮೈಕಟ್ಟು, ಹಾವಭಾವ.. ಆಹಾ.. ಅದೆಷ್ಟು ಸುರದ್ರೂಪಿ ಆಗಿದ್ದಾನೆ ಗೊತ್ತಾ! ಆತನೇ ಗಜೇಂದ್ರ. ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದ ವಿಲಾಸ್ ನಾಯಕ್ ಎಂಬವರು ಸಾಕಿ ಬೆಳೆಸುತ್ತಿರುವ ಗಜೇಂದ್ರ ಬರೋಬ್ಬರಿ ಒಂದೂವರೆ ಟನ್ ತೂಕವಿರುವ ಒಂದು ಕೋಣ! ಹೌದು ನಾವು ಹೇಳ್ತಾ ಇರೋದು ಒಂದು ಕೋಣದ ಬಗ್ಗೆ. ಈ ಗುಣವನ್ನು ಒಮ್ಮೆ ನೀವು ನೋಡಿದ್ರೆ ಆಶ್ಚರ್ಯಪಡುತ್ತೀರಿ.
ಇದು ವಿಲಾಸ್ ಅವರು ಅತ್ಯಂತ ಪ್ರೀತಿಯಿಂದ ಬೆಳೆಸಿರುವ ಕೊಬ್ಬಿದ ಕೋಣ ಎಂದರೆ ತಪ್ಪಾಗಲಿಕ್ಕಿಲ್ಲ. ಬೆಳಗಾವಿಯ ವಿಲಾಸ್ ಅವರು ಹೈನುಗಾರಿಕೆಯನ್ನು ನೆಚ್ಚಿಕೊಂಡು ವ್ಯಾಪಾರ ಮಾಡುತ್ತಿರುವ ಒಬ್ಬ ರೈತ. ಈತ ಗಜೇಂದ್ರನ ತಾಯಿಯನ್ನು ಬರೋಬ್ಬರಿ 1 ಲಕ್ಷದ 40ಸಾವಿರ ರೂಪಾಯಿ ಕೊಟ್ಟು ನಾಲ್ಕು ವರ್ಷದ ಹಿಂದೆ ಖರೀದಿಸಿದ್ದರಂತೆ. ಆ ಆಕಳಿಗೆ ಹುಟ್ಟಿದ ಗಜೇಂದ್ರ ಈ ಪಾಟಿ ಬೆಳೆಯುತ್ತಾನೆ ಎಂದು ವಿಲಾಸ್ ಕೂಡ ಊಹಿಸಿರಲಿಲ್ಲವಂತೆ.
ಇನ್ನು ಗಜೇಂದ್ರನಿಗೆ ದಿನಕ್ಕೆ 15 ಲೀಟರ್ ಹಾಲು ಕುಡಿಯಲು, ಹಾಗೂ ಪಶು ಆಹಾರಗಳು ಕಬ್ಬು ಮೊದಲಾದವುಗಳನ್ನು ವಿಲಾಸ್ ಕೊಡುತ್ತಾರೆ. ಇತ್ತೀಚಿಗೆ ಮಹಾರಾಷ್ಟ್ರದ ಸಾಂಗ್ಲಿಯ ತಸಗಂವ್ ಎಂಬಲ್ಲಿ ನಡೆದ ಪಶು ಮೇಳದಲ್ಲಿ ಗಜೇಂದ್ರನಿಗೆ 80 ಲಕ್ಷ ಕೊಟ್ಟು ಕೊಂಡುಕೊಳ್ಳಲು ವ್ಯಾಪಾರಿಗಳು ಮುಂದೆ ಬಂದಿದ್ದರೂ ಅದನ್ನು ವಿಲಾಸ್ ಮಾರಾಟ ಮಾಡದೆ ತನ್ನಲ್ಲೇ ಇರಿಸಿಕೊಂಡಿದ್ದಾರೆ. ಗಜೇಂದ್ರ ಎಂದರೆ ವಿಲಾಸ್ ಗೆ ಅಪಾರ ಪ್ರೀತಿ.
ಐವತ್ತಕ್ಕೂ ಹೆಚ್ಚು ಎಮ್ಮೆಗಳನ್ನು ಇಟ್ಟುಕೊಂಡು ಹೈನುಗಾರಿಕೆ ಮಾಡುತ್ತಿರುವ ವಿಲಾಸ್ ಅವರು ಅದರ ಜೊತೆಜೊತೆಗೆ ಗಜೇಂದ್ರನನ್ನು ಬಹಳ ಪ್ರೀತಿಯಿಂದ ಸಾಕುತ್ತಿದ್ದಾರೆ. ಸದ್ಯ ಸಖತ್ ಫೇಮಸ್ ಆಗಿರುವ ಗಜೇಂದ್ರನನ್ನು ನೋಡಲು ರಾಜ್ಯಗಳಿಂದ ಹಾಗೂ ಪರ ರಾಜ್ಯಗಳಿಂದ ಜನರು ಬರುತ್ತಿದ್ದಾರೆ. ವಿಲಾಸ್ ಕೂಡ ಸಂತೋಷದಿಂದಲೇ ಗಜೇಂದ್ರ ಅವರನ್ನು ಜನರಿಗೆ ತೋರಿಸುತ್ತಾರೆ. ಜನ ಅವರ ಹೈನುಗಾರಿಕೆಯನ್ನು ಕೂಡ ಬಹಳಷ್ಟು ಮೆಚ್ಚಿಕೊಂಡಿದ್ದಾರೆ. ನಗರಗಳಲ್ಲಿ ಇಂದು ಸಾಕು ಪ್ರಾಣಿಗಳಾದ ನಾಯಿ-ಬೆಕ್ಕು ಗಳನ್ನು ಹಾಕಿ ಅವುಗಳ ಮೇಲೆ ಲಕ್ಷಾಂತರ ರೂಪಾಯಿ ಇನ್ವೆಸ್ಟ್ ಮಾಡುವ ಜನಗಳ ಮಧ್ಯೆ ವಿಲಾಸ್ ಕೋಣವನ್ನು ಸಾಕಿ ಎಲ್ಲರ ನಡುವೆ ವಿಭಿನ್ನವಾಗಿ ಮತ್ತು ವಿಶೇಷವಾಗಿ ನಿಲ್ಲುತ್ತಾರೆ.
Comments are closed.