Neer Dose Karnataka
Take a fresh look at your lifestyle.

ಭಾರತದ ತನ್ನ ಅದೃಷ್ಟದ ಕ್ರೀಡಾಂಗಣದ ನೆನಪಿಗಾಗಿ ಮಗಳು ಹುಟ್ಟಿದ ತಕ್ಷಣ ವೆಸ್ಟ್ ಇಂಡೀಸ್ ಆಟಗಾರ ಹೋಲ್ಡರ್ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಎಲ್ಲರಿಗೂ ಪ್ರಿಯವಾದ ದೇಶ. ಒಮ್ಮೆ ಇಲ್ಲಿಯ ವಾತಾವರಣಕ್ಕೆ ಸೆಟ್ ಆದರೇ, ಇಲ್ಲಿಯ ನೆನಪುಗಳು ಸದಾ ಕಾಡುತ್ತಲೇ ಇರುತ್ತವೆ.ಇನ್ನು ಕ್ರಿಕೇಟಿಗರಿಗಂತೂ ನಮ್ಮ ದೇಶ ಸ್ವರ್ಗ.ಇಲ್ಲಿನ ಅಭಿಮಾನಿಗಳ ಬೆಂಬಲ, ಶುಭ ಹಾರೈಕೆಗಳಿಗೆ, ವಿದೇಶದ ಕ್ರಿಕೇಟಿಗರಂತು ಫಿದಾ ಆಗುತ್ತಾರೆ. ಸೌತ್ ಆಫ್ರಿಕಾ ತಂಡದ ಶ್ರೇಷ್ಠ ಫೀಲ್ಡರ್ ಆಗಿದ್ದ ಜಾಂಟಿ ರೋಡ್ಸ್, ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದರು.

ಅವರು ಭಾರತದ ಜನರ ಪ್ರೀತಿಯನ್ನು ನೋಡಿ, ತಮ್ಮ ಮಗಳಿಗೆ ಇಂಡಿಯಾ ರೋಡ್ಸ್ ಎಂದು ಹೆಸರಿಟ್ಟಿದ್ದರು. ಈಗ ಅದೇ ರೀತಿ ಭಾರತದ ಮೇಲಿನ ಪ್ರೀತಿಯನ್ನು ಮತ್ತೊಬ್ಬ ಕ್ರಿಕೇಟರ್ ತೋರಿಸಿದ್ದಾರೆ. ಹೌದು ಆತ ಬೇರೆ ಯಾರೂ ಅಲ್ಲ ವೆಸ್ಟ್ ಇಂಡೀಸ್ ನ ಆಲ್ ರೌಂಡರ್ ಕಾರ್ಲೋಸ್ ಬ್ರಾಥ್ ವೈಟ್. ನಿಮಗೆ ನೆನಪಿರಬಹುದು, 2016 ರ ಈಡನ್ ಗಾರ್ಡನ್ಸ್ ನಲ್ಲಿ ನಡೆದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ , ಇಂಗ್ಲೆಂಡ್ ವಿರುದ್ದ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಸಿಡಿಸಿ ಜಯ ತಂದುಕೊಟ್ಟರು.

ಅಂದಿನಿಂದ ಬ್ರಾಥ್ ವೈಟ್ ರವರ ಕ್ರಿಕೇಟ್ ವೃತ್ತಿ ಜೀವನವೇ ಬದಲಾಯಿತು.ಆ ಸ್ಮರಣೀಯ ಇನ್ನಿಂಗ್ಸ್ ಆಡಿದ್ದು, ಅವರು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ. ಆ ಕಾರಣಕ್ಕಾಗಿ, ಆ ನೆನಪನ್ನು ಸ್ಮರಣೀಯವನ್ನಾಗಿಸಲು, ಈಗ ಜಗತ್ತೇ ಮೆಚ್ಚುವ ಕೆಲಸ ಮಾಡಿದ್ದಾರೆ. ಹೌದು ಕಾರ್ಲೋಸ್ ಬ್ರಾಥ್ ವೈಟ್ ಗೆ ಈಗ ಮಗಳು ಜನಿಸಿದ್ದಾಳೆ. ಅವರು ತಮ್ಮ ಮಗಳಿಗೆ ಈಡನ್ ರೋಸ್ ಬ್ರಾಥ್ವೈಟ್ ಎಂದು ಹೆಸರಿಟ್ಟಿದ್ದಾರೆ. ಬ್ರಾಥ್ವೈಟ್ ರವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭರಪೂರ ಅಭಿನಂದನೆಯ ಮಹಾಪೂರ ಹರಿದು ಬರುತ್ತಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.