Neer Dose Karnataka
Take a fresh look at your lifestyle.

ಮುಂದೆ ಕೊಹ್ಲಿ ರವರ ಮೂರನೇ ಸ್ಥಾನವನ್ನು ತುಂಬುವ ಆಟಗಾರನನ್ನು ಆಯ್ಕೆ ಮಾಡಿದ ಎಂ.ಎಸ್.ಕೆ.ಪ್ರಸಾದ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತ ಅಂಡರ್ 19 ವಿಶ್ವಕಪ್ ಗೆದ್ದ ಮೇಲೆ ಹಲವಾರು ಕಿರಿಯ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಅದರಲ್ಲೂ ನಿರ್ಣಾಯಕ ಎನಿಸಿದ್ದ ಸೆಮಿಫೈನಲ್ ನಲ್ಲಿ ಬಹುಬೇಗನೇ ತಂಡದ ವಿಕೆಟ್ ಬಿದ್ದರೂ, ಮೂರನೇ ವಿಕೆಟ್ ಗೆ ದಾಖಲೆಯ ಜತೆಯಾಟ ನಡೆಸಿದ್ದ ನಾಯಕ ಯಶ್ ಧುಲ್ ಮತ್ತು ಉಪನಾಯಕ ಶೇಖ್ ರಶೀದ್ ಆಡಿದ ಇನ್ನಿಂಗ್ಸ್ ಅತ್ಯಂತ ಸ್ಮರಣೀಯವಾಗಿತ್ತು. ಇನ್ನು ಫೈನಲ್ ನಲ್ಲಿಯೂ ಸಹ ಎರಡನೇ ಎಸೆತದಲ್ಲಿ ಮೊದಲ ವಿಕೇಟ್ ಬಿದ್ದರೂ, ಛಲಬಿಡದೇ ಆಡಿ , ಅರ್ಧಶತಕಗಳಿಸಿ ತಂಡದ ಗೆಲುವಿಗೆ ಭದ್ರ ಬುನಾದಿ ಹಾಕಿದ್ದು, ಉಪನಾಯಕ ಶೇಖ್ ರಶೀದ್.

ಇನ್ನು ಮೂಲತಃ ಆಂದ್ರದ ಶೇಖ್ ರಶೀದ್,ಭಾರತ ತಂಡದ ಮಾಜಿ ವಿಕೇಟ್ ಕೀಪರ್ ಎಂ.ಎಸ್.ಕೆ. ಪ್ರಸಾದ್ ರವರ ಗರಡಿಯಲ್ಲಿ ಪಳಗಿದವರು. ಇನ್ನು ಶಿಷ್ಯನ ಬಗ್ಗೆ ಭರಪೂರ ಹೊಗಳಿರುವ ಎಂ.ಎಸ್.ಕೆ ಪ್ರಸಾದ್, ಶೇಖ್ ರಶೀದ್ ಗೆ ಅದ್ಭುತವಾದ ಬ್ಯಾಟಿಂಗ್ ಕೌಶಲ್ಯವಿದೆ. ಪರಿಸ್ಥಿತಿಗೆ ಅನುಗುಣವಾಗಿ ಬ್ಯಾಟ್ ಬೀಸುವ ಸಾಮರ್ಥ್ಯವಿದೆ.

ಭವಿಷ್ಯದಲ್ಲಿ ಭಾರತ ತಂಡದ ಮೂರನೇ ಕ್ರಮಾಂಕದ ಬ್ಯಾಟ್ಸಮನ್ ಆಗಲು ಎಲ್ಲಾ ಅರ್ಹತೆಯನ್ನು ಹೊಂದಿದ್ದಾರೆ. ರಾಹುಲ್ ದ್ರಾವಿಡ್ ರೀತಿಯಲ್ಲಿ ಇವರು ಸಹ ಮೂರನೇ ಕ್ರಮಾಂಕದಲ್ಲಿ ಆಡುವ ವಿಶ್ವಾಸ ನಮಗಿದೆ ಎಂದು ಹೇಳಿದರು. ಸದ್ಯ ಭಾರತದ ಪರ ಏಕದಿನ ಮತ್ತು ಟಿ 20 ಯಲ್ಲಿ ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದರೇ, ಟೆಸ್ಟ್ ಕ್ರಿಕೇಟ್ ನಲ್ಲಿ ಚೇತೇಶ್ವರ ಪೂಜಾರ ಮೂರನೇ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಆಂದ್ರ ತಂಡದ ಮೂಲಕ ರಣಜಿ ಆಡಲಿರುವ ಶೇಖ್ ರಶೀದ್, ಒಂದು ವೇಳೆ ರಣಜಿಯಲ್ಲಿಯೂ ಸಹ ಉತ್ತಮ ಪ್ರದರ್ಶನ ನೀಡಿದರೇ, ಭಾರತ ತಂಡಕ್ಕೆ ಸೇರ್ಪಡೆಯಾಗುವ ಎಲ್ಲಾ ಸಾಧ್ಯತೆಗಳು ಇವೆ‌. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.