ಇದ್ದಕ್ಕಿದ್ದಂತೆ ನಿಮ್ಮ ಖಾತೆಗೆ ಲಕ್ಷ ಲಕ್ಷ ಹಣ ಬಂದರೆ ಏನು ಮಾಡಬೇಕು ಗೊತ್ತೇ?? ಹೇಗೆಂದರೆ ಹಾಗೆ ಖರ್ಚು ಮಾಡುವುದರಲ್ಲ. ಜಸ್ಟ್ ಹೀಗೆ ಮಾಡಿ ಸಾಕು.
ನಮಸ್ಕಾರ ಸ್ನೇಹಿತರೇ, ಜೀವನದಲ್ಲಿ ಸಾಕಷ್ಟು ಬಾರಿ ಆಕಸ್ಮಿಕ ಘಟನೆಗಳು ನಡೆದು ಬಿಡುತ್ತವೆ. ಹಾಗಾಗಿಯೇ ಹೇಳುವುದು ಜೀವನ ಹೀಗೇ ಅಂತ ಊಹಿಸುವುದಕ್ಕೆ ಸಾಧ್ಯವೇ ಇಲ್ಲ ಅಂತ. ಉದಾಹರಣೆಗೆ ನಿಮ್ಮ ಬ್ಯಾಂಕ್ ಖಾತೆಗೆ ಗೊತ್ತಿಲ್ಲದೆ ಎಷ್ಟೋ ಹಣ ಜಮಾ ಆಗುತ್ತದೆ ಎಂದುಕೊಳ್ಳಿ. ಅದು ಯಾರು ಕಳುಹಿಸಿದ್ದು, ಯಾಕೆ ಕಳುಹಿಸಿದ್ದು ಏನೂ ನಿಮಗೆ ಗೊತ್ತಿರುವುದಿಲ್ಲ. ಆಗ ಏನು ಮಾಡುತ್ತೀರಿ! ಆ ಹಣ ವನ್ನು ಬಳಸಲು ಮುಂದಾಗುತ್ತೀರಿ ಎಂದಾದರೆ ಅದರಿಂದ ಮುಂದೆ ಸಮಸ್ಯೆ ಎದುರಿಸಬೇಕಾಗುತ್ತೆ ಎಚ್ಚರ. ಹಾಗಾಗಿ ಅಕಸ್ಮಾತ್ ಆಗಿ ನಿಮ್ಮ ಖಾತೆಗೆ ಹಣ ಬಂದ್ರೆ ಏನು ಮಾಡಬೇಕು ಎಂಬುದನ್ನು ನಾವು ಹೇಳ್ತೇವೆ
’ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ’ ಎನ್ನುವ ಹಾಗೆ ಯಾರದ್ದೋ ಹಣ ನಿಮ್ಮ ಖಾತೆಗೆ ಬಂದಾಕ್ಷಣ ಅದು ನಿಮ್ಮದಾಗುವುದಿಲ್ಲ. ಹಾಗೆ ಬಂದ ಹಣವನ್ನು ತಪ್ಪಿಯೂ ಉಪಯೋಗಿಸಿಕೊಳ್ಳಬೇಡಿ. ಇದು ಯಾವುದೇ ಕಾರಣಕ್ಕೂ ನಿಮ್ಮ ಹಣವಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಖಾತೆಗೆ ಬಂದ ಹಣ ಕಾನೂನುಬದ್ಧವಾಗಿ ನಿಮ್ಮದೇ ಆಗಿದ್ದರೂ ನೈತಿಕವಾಗಿ ನಿಮ್ಮದಲ್ಲ ಅಲ್ವೇ! ಹಲವು ಬಾರಿ ತಾಂತ್ರಿಕ ದೋಷಗಳಿಂದ ಅಥವಾ ಸಿಬ್ಬಂದಿಯ ತಪ್ಪಿನಿಂದ ಆ ಹಣ ನಿಮ್ಮ ಖಾತೆಗೆ ವರ್ಗಾವಣೆ ಆಗಿರುವ ಸಾಧ್ಯತೆಗಳಿರುತ್ತವೆ. ಹೀಗಾದಾಗ ನಿಮ್ಮ ಖಾತೆಯಿಂದ ಹಣವನ್ನು ಬ್ಯಾಂಕ್ ಹಿಂಪಡೆಯುತ್ತದೆ.
ಒಂದು ವೇಳೆ ನೀವು ಹಣವನ್ನು ನಿಮ್ಮ ಸ್ವಂತಕ್ಕೆ ಬಳಸಿಕೊಂಡಿದ್ದರೆ, ಬ್ಯಾಂಕ್ ಕೇಳಿದಾಗ ಮರು ಪಾವತಿಸಬೇಕಾಗುತ್ತದೆ. ಆಗ ಹಣ ಹಿಂತಿರುಗಿಸದೇ ಇದ್ದರೂ ಸಮಸ್ಯೆಯಾಗುತ್ತದೆ ಗೊತ್ತಿಲ್ಲದೇ ಹಣ ನಿಮ್ಮ ಖಾತೆ ಸೇರಿದ್ರೆ ನಿಮ್ಮ ಬ್ಯಾಂಕ್ ಶಾಖೆಗೆ ಮಾಹಿತಿ ನೀಡಿ. ನಿಮ್ಮ ಬ್ಯಾಂಕ್ ಖಾತೆಗೆ ಹಣ ಹೇಗೆ ಮತ್ತು ಯಾರಿಂದ ಬಂದಿದೆ ಎಂಬುದರ ಬಗ್ಗೆ ಮಾಹಿತಿ ಪಡೆದುಕೊಳ್ಳಿ. ಹಾಗೆ ಅಚಾನಕ್ ಆಗಿ ಬಂದ ಮೊತ್ತವು ಕೆಲವು ಅಕ್ರಮ ವಹಿವಾಟಿಗೆ ಸಂಬಂಧಿಸಿದ್ದೂ ಆಗಿರಬಹುದು. ಬ್ಯಾಂಕ್ ನಿಂದ ಮಾಹಿತಿ ಪದೇದರೆ ಅದು ಗೊತ್ತಾಗುತ್ತದೆ. ಹೀಗೆ ಮಾಡುವುದರಿಂದ ಕಾನೂನು ತೊಂದರೆಗಳಲ್ಲಿ ನೀವು ಸಿಲುಕಿಕೊಳ್ಳುವುದರಿಂದ ತಪಿಸಿಕೊಳ್ಳಬಹುದು.
ಈ ಹಿಂದೆ ಇಂಥ ಹಲವು ಪ್ರಕರಣಗಳು ವರದಿಯಾಗಿವೆ. ಬ್ಯಾಂಕ್ ಹೀಗೆ ಬಂದ ಹಣವನ್ನು ಖಾತೆಯಿಂದ ಮಾಹಿತಿ ನೀಡಿ ಹಣ ಹಿಂಪಡೆದುಕೊಂಡಿದೆ. ಈಗ ಆನ್ ಲೈನ್ ನಲ್ಲಿಯೇ ಹಣದ ವಹಿವಾಟು ನಡೆಸಲಾಗುತ್ತದೆ ಹಾಗಾಗಿ ಸಾಕಷ್ಟು ಬಾರಿ ಒಂದೇ ಒಂದು ಮೊಬೈಲ್ ಸಂಖ್ಯೆ ತಪ್ಪಾಗಿ ನಮೂದಿಸುವುದರ ಮೂಲಕ ಯಾರಿಗೋ ಸೇರಬೇಕಾಗಿದ್ದ ಹಣ ಇನ್ಯಾರಿಗೋ ಸೇರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ಮಾನವೀಯತೆಯ ಜೊತೆಗೆ ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕಾದ್ದು ಅತ್ಯಗತ್ಯ.
Comments are closed.