ಬರ್ತಿದ್ದಾಳೆ ಚಿ.ಸೌ. ಸ್ವಪ್ನ ಸುಂದರಿ: ನೋಡಲು ಮರೆಯದಿರಿ ಮರೆತು ನಿರಾಶರಾಗದಿರಿ, ಹೊಸ ಅವತಾರ ಎತ್ತಿದ ನಾಗಿಣಿ.
ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಜನ ಕಿರುತೆರೆಯ ಧಾರಾವಾಹಿಗಳನ್ನು ಇಷ್ಟಪಡೋದೆ ಅದರಲ್ಲಿ ಆಗಾಗ ಬರುವ ಟ್ವಿಸ್ಟ್ ಗಳಿಂದ. ನಾಳೆ ಏನಾಗತ್ತೋ ಅನ್ನುವ ಕುತೂಹಲವನ್ನು ಧಾರಾವಾಹಿಯಲ್ಲಿ ಈ ಕಾರಣಕ್ಕಾಗಿಯೇ ಹುಟ್ಟುಹಾಕುತ್ತಾರೆ. ಇಂಥ ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುವ ಮೂಲಕ, ಜನರ ಬಾಯಲ್ಲಿ ಆ ಬಗ್ಗೆಯೇ ಮಾತುಗಳು ಓಡಾಡುತ್ತಿರುವ ಧಾರಾವಾಹಿ. ನಾಗಿಣಿ.
ಹೌದು ನಾಗಿಣಿ ಧಾರಾವಾಹಿ ತನ್ನ ಫಸ್ಟ್ ಹಾಗೂ ಸೆಕೆಂಡ್ ಇನ್ನಿಂಗ್ಸ್ ಮುಗಿಸಿ, ಇದೀಗ ಭರ್ಜರಿ ಟ್ವಿಸ್ಟ್ ಗಳ ಮೂಲಕ ತನ್ನ ಮೂರನೇ ಇನ್ನಿಂಗ್ಸ್ ಶುರುಮಾಡುತ್ತಿದೆ. ಜೀಕನ್ನಡದಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ನಾಗಿಣಿಯಲ್ಲಿ ದೀಪಿಕಾ ದಾಸ್ ಅತ್ಯದ್ಭುತವಾಗಿ ನಟಿಸಿ, ಮೊದಲನೆ ಭಾಗ ಮುಕ್ತಾಯವಾಗಿತ್ತು. ನಂತರ ನಾಗಿಣಿ-2 ನಲ್ಲಿ ನಮೃತಾ ಕೂಡ ಅಷ್ಟೇ ಜವಾಬ್ದಾರಿಯಿಂದ ನಟಿಸಿ ಸಾಮಾನ್ಯ ಮನುಷ್ಯ ಹಾಗೂ ನಾಗಿಣಿ ಎರಡೂ ಪಾತ್ರಗಳನ್ನು ಅತ್ಯಂತ ಉತ್ತಮವಾಗಿ ನಿಭಾಯಿಸಿದ್ದಾರೆ. ಇದೀಗ ನಾಗಿಣಿ ತಂಡ ಹೊಸ ಆರಂಭಕ್ಕೆ ನಾಂದಿ ಹಾಡಿದೆ. ನಾಗಿಣಿ ಇನ್ನು ಮುಂದೆ ಸ್ವಪ್ಮ ಸುಂದರಿಯಾಗಿ ಎಲ್ಲರನ್ನೂ ಕಾಡಲಿದ್ದಾಳೆ.
ನಟಿ ನಮೃತಾ ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅತ್ಯಂತ ವಿನಯದ ನಟನೆಯ ಮೂಲಕ ಇನ್ನಷ್ಟು ಮುದ್ದಾಗಿ ಕಾಣಿಸುತ್ತಿದ್ದ ಶಿವಾನಿ ಅಲಿಯಾಸ್ ನಮೃತಾ, ತ್ರಿಶೂಲ್ ನನ್ನು ಮದುವೆಯಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದಳು. ತನ್ನ ಆದಿಶೇಷ ಇವನೇ ಎಂದು ಗೊತ್ತಾದ ಮೇಲಂತೂ ತ್ರಿಶೂಲ್ ನನ್ನು ಮನಸಾರೆ ಪ್ರೀತಿಸಿದ್ದಳು. ಕೊನೆಯಲ್ಲಿ ತನ್ನ ಹೆಂಡತಿ ಶಿವಾನಿಯೇ ನಾಗಕನ್ನಿಕೆ ಎಂದು ಗೊತ್ತಾದರೂ ಆಕೆಯ ಮೇಲಿನ ಪ್ರೀತಿಯಿಂದ ಆಕೆಯನ್ನು ಇದ್ದಹಾಗೇ ಒಪ್ಪಿಕೊಂಡಿದ್ದನು.
ಮಂತ್ರವಾದಿಯ ವಶಕ್ಕೆ ಸಿಲುಕಿ, ಶಿವಾನಿ ದೇಹವನ್ನೇ ಮಂತ್ರವಾದಿಯ ಅಗ್ನಿಗೆ ಆಹುತಿಯಾಗಿತ್ತು. ಶಿವಾನಿಯನ್ನು ಎಷ್ಟೇ ಉಳಿಸಿಕೊಳ್ಳಲು ಪ್ರಯತ್ನಿಸಿದರೂ ಆಗಲಿಲ್ಲ. ಆದರೆ ಆಕೆಯ ಆತ್ಮ ಮಾತ್ರ ಇನ್ನೂ ಜೀವಂತವಾಗಿದೆ ಎಂದು ತೋರಿಸಿ, ಇದೀಗ ಹೊಸ ಅಧ್ಯಾಯವನ್ನು ಆರಂಭ ಮಾಡುತ್ತಿದೆ ಧಾರಾವಾಹಿ ತಂಡ. ನಟಿ ನಮೃತಾ ಪಕ್ಕಾ ನಾಟಕದ ಹಿರೋಯಿನ್ ಗೆಟಪ್ ನಲ್ಲಿ ಇರುವ ಪೋಸ್ಟರ್ ನ್ನು ವಾಹಿನಿ ಈಗಾಗಲೇ ಬಿಡುಗಡೆ ಮಾಡಿದೆ. ನಮೃತಾ ಅವರ ಈ ರಗಟ್ ಲುಕ್ ಎಲ್ಲರಿಗೂ ಇಷ್ಟವಾಗಿದೆ. ಇನ್ನು ಈ ಹೊಸ ಅಧ್ಯಾಯದಲ್ಲಿ ಯಾವ ರೀತಿ ನಾಗಕನ್ನಿಕೆ ಕಾಣಿಸಿಕೊಳ್ಳುತ್ತಾಳೆ ಎನ್ನುವುದನ್ನು ನೀವು ತಪ್ಪದೇ ಧಾರಾವಾಹಿಯ ಎಲ್ಲಾ ಎಪಿಸೋಡ್ ಗಳನ್ನೂ ನೋಡಬೇಕು!
Comments are closed.