Neer Dose Karnataka
Take a fresh look at your lifestyle.

NPCIL Recruitment 2022: ತಿಂಗಳಿಗೆ ಬರೋಬ್ಬರಿ 45 ಸಾವಿರದ ಹುದ್ದೆಗಳನ್ನು ಭಾರ್ತಿ ಮಾಡಲು ಮುಂದಾದ NPCIL. ಅರ್ಜಿ ಹೇಗೆ ಸಲ್ಲಿಸುವುದು ಗೊತ್ತೇ??

ನಮಸ್ಕಾರ ಸ್ನೇಹಿತರೇ, ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಹೆಸರನ್ನು ನೀವು ಕೇಳಿರಬಹುದು. ಇಲ್ಲಿ ಹಾವು ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಶುರುವಾಗಿದ್ದು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ರ್ಜಿಯನ್ನು ಆಹ್ವಾನಿಸಿದೆ. ಬನ್ನಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೋಡೋಣ.

ಎನ್ ಪಿ ಸಿ ಐ ಎಲ್ ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಖಾಲಿ ಇರುವ ಹುದ್ದೆಗಳು ಒಟ್ಟು 42. ಅವುಗಳಲ್ಲಿ ನರ್ಸ್, ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಮುಖ್ಯ ಹುದ್ದೆಗಳಾಗಿವೆ. ಈಗಾಗಲೇ ಅಂದರೆ ಫೆಬ್ರವರಿ 10ರಿಂದ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಮುಂದಿನ ತಿಂಗಳು ಅಂದರೆ ಮಾರ್ಚ್ 2 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ.

ಖಾಲಿ ಇರುವ ಹುದ್ದೆಗಳು ಹೀಗಿವೆ ಸೈಂಟಿಫಿಕ್ ಅಸಿಸ್ಟೆಂಟ್-ಸಿ(ಸೇಫ್ಟಿ ಸೂಪರ್ವೈಸರ್)- 03 ಹುದ್ದೆಗಳು, ನರ್ಸ್ಎ-02 ಹುದ್ದೆಗಳು, ಅಸಿಸ್ಟೆಂಟ್ ಗ್ರೇಡ್ 1 (ಹೆಚ್ ಆರ್)-13 ಹುದ್ದೆಗಳು, ಅಸಿಸ್ಟೆಂಟ್ ಗ್ರೇಡ್ 1(ಎಫ್&ಎ)-11 ಹುದ್ದೆಗಳು, ಅಸಿಸ್ಟೆಂಟ್ ಗ್ರೇಡ್ 1(ಸಿ &ಎಂಎಂ)-04 ಹುದ್ದೆಗಳು, ಸ್ಟೆನೋಗ್ರಾಫರ್ ಗ್ರೇಡ್ 1- 09ಹುದ್ದೆಗಳು ಒಟ್ಟೂ 42 ಹುದ್ದೆಗಳು ಖಾಲಿ ಇವೆ. ಇನ್ನು ನರ್ಸ್ ಎ ಹುದ್ದೆಗೆ ಪಿಯುಸಿ ಉತ್ತೀರ್ಣರಾಗಿರಬೇಕು, ಜೊತೆಗೆ ನರ್ಸಿಂಗ್ನಲ್ಲಿ 3 ವರ್ಷಗಳ ಡಿಪ್ಲೋಮಾ ಆಗಿರಬೇಕು. ಇನ್ನುಳಿದ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಶೇ.50ರಷ್ಟು ಅಂಕಗಳೊಂದಿಗೆ ಪದವಿ ಪೂರ್ಣಗೊಳಿಸಿರಬೇಕು. 1 ನಿಮಿಷದಲ್ಲಿ 30 ಇಂಗ್ಲಿಷ್ ಪದಗಳನ್ನು ಟೈಪ್ ಮಾಡುವ ಕೌಶಲ್ಯ ಇರಬೇಕು.

ಇನ್ನು ವೇತನದ ಬಗ್ಗೆ ನೋಡುವುದಾದರೆ ಸೈಂಟಿಫಿಕ್ ಅಸಿಸ್ಟೆಂಟ್-ಸಿ(ಸೇಫ್ಟಿ ಸೂಪರ್ವೈಸರ್)-ಮಾಸಿಕ ರೂ. 44,900, ನರ್ಸ್ ಎ-ಮಾಸಿಕ ರೂ 44,900, ಅಸಿಸ್ಟೆಂಟ್ ಗ್ರೇಡ್ 1- ಮಾಸಿಕ ರೂ. 25,500, ಅಸಿಸ್ಟೆಂಟ್ ಗ್ರೇಡ್ 1(ಎಫ್&ಎ)-ಮಾಸಿಕ ರೂ. 25,500, ಅಸಿಸ್ಟೆಂಟ್ ಗ್ರೇಡ್ 1(ಸಿ &ಎಂಎಂ)-ಮಾಸಿಕ ರೂ. 25,500 ಹಾಗೂ ಸ್ಟೆನೋಗ್ರಾಫರ್ ಗ್ರೇಡ್ 1- ಮಾಸಿಕ ರೂ 25,500 ವೇತನವಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾರವಾರದಲ್ಲಿ ಪೋಸ್ಟಿಂಗ್ ಇರುತ್ತದೆ. ಸೈಂಟಿಫಿಕ್ ಅಸಿಸ್ಟೆಂಟ್-ಸಿ(ಸೇಫ್ಟಿ ಸೂಪರ್ವೈಸರ್)- 18-35 ವರ್ಷ, ನರ್ಸ್ ಎ-18-30 ವರ್ಷ, ಅಸಿಸ್ಟೆಂಟ್ ಗ್ರೇಡ್ 1 21ರಿಂದ 28 ವರ್ಷ ವಯಸ್ಸಿನಒಳಗಿನವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ npcilcareers.co.in ಗೆ ಭೇಟಿ ನೀಡಿ.

Comments are closed.