ಮತ್ತೊಂದು ರೀತಿಯಲ್ಲಿ ಹಣಗಳಿಕೆ ಮಾಡಲು ಅವಕಾಶ ನೀಡಿದ ಯೌಟ್ಯೂಬ್, ಅತಿ ಸುಲಭವಾಗಿ ಮನೆಯಿಂದ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಯೂಟ್ಯೂಬ್ ಎನ್ನುವುದು ಆನ್ ಲೈನ್ ನಲ್ಲಿ ಹಣಗಳಿಸುವ ಒಂದು ಉತ್ತಮ ವೇದಿಕೆ , ನಿಮ್ಮಲ್ಲಿ ವಿಶೇಷವಾದ ಪ್ರತಿಭೆ ಇದ್ರೆ, ನಿಮ್ಮದೇ ಆದ ಚಾನೆಲ್ ನ್ನು ಮಾಡಿ ನಿಭಾಯಿಸುವ ತಾಕತ್ತಿದ್ರೆ ದಿನದಿನಕ್ಕೂ ಯೂಟ್ಯೂಬ್ ಮೂಲಕ ಹಣಗಳಿಸಬಹುದು. ಈಗಾಗಲೇ ಲಕ್ಷಾಂತರ ಜನ ಇದರ ಪ್ರಯೋಜನವನ್ನೂ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ತನ್ನ ಯೂಸರ್ಸ್ ಗೆ ಇನ್ನಷ್ಟು ಹಣ ಗಳಿಸುವಂತೆ ಮಾಡುವುದಕ್ಕಾಗಿ ಯೂಟ್ಯೂಬ್ ಹೊಸ ಸೂತ್ರವನ್ನ ಬಿಡುಗಡೆ ಮಾಡಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.
ಹೌದು, ಯೂಟ್ಯೂಬ್‌ನಲ್ಲಿ ಕಂಟೆಂಟ್ ಕ್ರಿಯೆಟರ್ಸ್ ಇನ್ನೂ ಹೆಚ್ಚು ಹಣವನ್ನು ಗಳಿಸಲು ಯೂಟ್ಯೂಬ್ ಹೊಸ ಮಾರ್ಗವನ್ನು ತೋರಿಸಿಕೊಟ್ಟಿದೆ. ಯೂಟ್ಯೂಬ್ ಬಳಕೆದಾರರನ್ನು ಇನ್ನಷ್ಟು ಆಕರ್ಷಿಸಲು ಹೊಸ ಟೂಲ್ ಬಿಡುಗಡೆ ಮಾಡುವುದಾಗಿ ಹೇಳಿಕೆ ನೀಡಿದೆ. ಯೂಟ್ಯೂಬ್ ನಲ್ಲಿ ಈಗ ಹೊಸ ವೀಡಿಯೊ ಎಫೆಕ್ಟ್‌ಗಳು ಮತ್ತು ಶಾರ್ಟ್ಸ್‌ಗಾಗಿ ಎಡಿಟಿಂಗ್ ಟೂಲ್ಸ್‌ಗಳನ್ನು ಪಡೆಯಬಹುದು. ಹಾಗಾಗಿ ಕ್ರಿಯೆಟರ್ಸ್ ಇನ್ನು ಮುಂದೆ ಈ ಟೂಲ್ಸ್ ಗಳ ಮೂಲಕ ಇನ್ನೂ ಉತ್ತಮವಾದ ಶಾರ್ಟ್ ವೀಡಿಯೊಗಳನ್ನು ನಿರ್ಮಾಣ ಮಾಡಬಹುದು. ಶಾರ್ಟ್ ಅನ್ನು ಕ್ರಿಯೆಟ್ ಮಾಡುವ ಮೂಲಕ ವೈಯಕ್ತಿಕ ಕಾಮೆಂಟ್‌ಗಳಿಗೆ ಪ್ರತ್ಯುತ್ತರ ನೀಡುವ ವ್ಯವಸ್ಥೆಯನ್ನೂ ಕೂಡ ಪರಿಚಯಿಸುತ್ತದೆ. ಇದರಿಂದ ಹೆಚ್ಚಿನ ಜನರು ನಿಮ್ಮೊಂದಿಗೆ ಸುಲಭವಾಗಿ ಒನ್ ಟು ಒನ್ ಕಮ್ಯೂನಿಕೆಶನ್ ಮಾಡಬಹುದು. ಅಂದರೆ ನೀವು ಪೋಸ್ಟ್ ಮಾಡಿದ ವಿಡಿಯೋದಲ್ಲಿ ಬಳಕೆದಾರರು ಕಾಮೆಂಟ್ ಮಾಡಿದರೆ, ನಂತರ ನೀವು ವೀಡಿಯೊದೊಂದಿಗೆ ಆ ವ್ಯಕ್ತಿಗೆ ರಿಪ್ಲೇ ಮಾಡಬಹುದು.
ಇನ್ನು ಯೂಟ್ಯೂಬ್ ಮೂಲಕ ಬ್ರ್ಯಾಂಡ್‌ಕನೆಕ್ಟ್ ನಿಂದ ಬ್ರ್ಯಾಂಡೆಡ್ ವಿಷಯವನ್ನು ನಿರ್ಮಿಸುವ ಮಾರ್ಗವೂ ಪರಿಚಯಿಸುತ್ತಿದೆ. ಸೂಪರ್ ಚಾಟ್ ಅನ್ನು ಶಾರ್ಟ್ಸ್‌ಗೆ ಸಂಯೋಜಿಸುತ್ತದೆ. ಶಾರ್ಟ್‌ನಿಂದ ಶಾಪಿಂಗ್ ಮಾಡಬಹುದು. ಇದರಿಂದ ಶಾಪಿಂಗ್ ಮಾಡಬಹುದಾದ ವೀಡಿಯೊಗಳು ಮತ್ತು ಲೈವ್ ಶಾಪಿಂಗ್, ಶಾಪಿಂಗ್ ಅನುಭವ ಹಂಚಿಕೊಳ್ಳಲು ಬಳಕೆದಾರರಿಗೆ ಅವಕಾಶ ನೀಡಲಿದೆ. ಇದಲ್ಲದೆ ಯೂಟ್ಯೂಬ್ ಈ ವರ್ಷ ಹೊಸ ಫೀಚರ್ಸ್ ಅನ್ನು ಲಾಂಚ್ ಮಾಡಲಿದೆಯಂತೆ. ಈ ಫೀಚರ್ಸ್ ಮೂಲಕ ಕ್ರಿಯೆಟರ್ಸ್‌ಗಳು ಒಟ್ಟಿಗೆ ಲೈವ್ ನಡೆಸಬಹುದು. ಇನ್ನು ಸಾಮಾನ್ಯ ಬಳಕೆದಾರರಿಗಾಗಿ ಶೀಘ್ರದಲ್ಲೇ ಯೂಟ್ಯೂಬ್‌ನಲ್ಲಿ ನಲ್ಲಿ “ಗಿಫ್ಟ್ ಮೆಂಬರ್ಸ್” ಎಂಬ ಫೀಚರ್ಸ್ ಅನ್ನು ಬಿಡುಗಡೆ ಮಾಡಲಿದೆ. ಈ ಮೂಲಕ ಲೈವ್‌ಸ್ಟ್ರೀಮ್‌ನಲ್ಲಿ ವೀಕ್ಷಕರಿಗೆ ಮತ್ತೊಂದು ಚಾನಲ್ ಸದಸ್ಯತ್ವವನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ
Comments are closed.