Neer Dose Karnataka
Take a fresh look at your lifestyle.

ನೀವು ಜೀವನದಲ್ಲಿ ಯಶಸ್ಸು ಕಾಣಲು ಬಯಸಿದ್ದರೆ ಕೊನೆಯವರೆಗೂ ನೆನಪಿಟ್ಟುಕೊಳ್ಳಿ, ಯಶಸ್ಸು ಕಂಡಿತಾ ನಿಮ್ಮದಾಗುತ್ತದೆ. ಏನು ಗೊತ್ತೇ?

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟ ನಷ್ಟಗಳು, ನೋವು ನಲಿವುಗಳು, ಸೋಲು-ಗೆಲುವುಗಳು ಇದ್ದೇ ಇರುತ್ತವೆ. ಅಷ್ಟೇ ಅಲ್ಲದೆ ಹಲವಾರು ಜನರ ಮಾತುಗಳು ಕೂಡ ನಮ್ಮ ಜೀವನದ ಹಾದಿಯನ್ನು ಬದಲಾಯಿಸಬಲ್ಲದು. ನಮ್ಮನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಜನರು ಇದ್ದರೆ, ನಮ್ಮ ಬಗ್ಗೆ ಕೆಟ್ಟದ್ದನ್ನು ಮಾತನಾಡಿ ನಮ್ಮನ್ನು ನಿರುತ್ಸಾಹ ಗೊಳಿಸುವ ಜನರು ಕೂಡ ಇದ್ದಾರೆ. ಆದರೆ ನಾವು ನಮ್ಮ ದುಡಿಮೆ ಹಾಗೂ ನಮ್ಮ ತಾಳ್ಮೆಯನ್ನು ನಮ್ಮ ಜೀವನದ ಕೊನೆಯವರೆಗೂ ಕಾಪಾಡಿಕೊಂಡು ಹೋಗಬೇಕು.

ಪ್ರತಿಯೊಬ್ಬರಿಗೂ ಕೂಡ ಕಷ್ಟದ ಕಾಲದನಂತರ ಸುಖದ ಕಾಲ ಬಂದೇ ಬರುತ್ತದೆ. ಇನ್ನು ನಮ್ಮ ಬಗ್ಗೆ ಯಾರಾದರೂ ಕೆಟ್ಟದ್ದನ್ನು ಮಾತನಾಡಿದರೆ ಈ ಜಗತ್ತು ಅವರನ್ನೇ ಕೆಟ್ಟದಾಗಿ ನೋಡಬೇಕು. ಇದನ್ನೆಲ್ಲ ಹೊರತುಪಡಿಸಿ ನಾವು ನಮ್ಮ ಜೀವನದ ಗುರಿಯನ್ನು ನೋಡುತ್ತಾ ಮುಂದೆ ಸಾಗಬೇಕು. ಅಷ್ಟೇ ಅಲ್ಲದೆ ನಮ್ಮ ಗುರಿಯನ್ನು ಸಾಧಿಸುವ ಹಠ ನಮ್ಮಲ್ಲಿರಬೇಕು. ನಮ್ಮ ಜೀವನದ ಪ್ರತಿಯೊಂದು ದಿಕ್ಕಿನಲ್ಲೂ ಕೂಡ ಅನೇಕ ರೀತಿಯ ಮಾತನಾಡುವ ಜನರಿದ್ದಾರೆ. ಆದರೆ ನಮ್ಮ ದೃಷ್ಟಿ ನಮ್ಮ ಗುರಿಯ ಮೇಲಿರಬೇಕು.

ಇನ್ನು ನೀವು ನೋಡಿರುವ ಹಾಗೆ ನದಿಗಳು ಯಾವತ್ತಿಗೂ ಕೂಡ ಮುಂದೆ ಸಾಗುತ್ತಲೇ ಇರುತ್ತವೆ. ಅವು ಸಮುದ್ರ ಸೇರುವವರೆಗೆ ನಿಲ್ಲುವುದಿಲ್ಲ. ಅದೇ ರೀತಿ ನಾವು ಕೂಡ ಕಳೆದುಹೋದ ಜೀವನದ ಬಗ್ಗೆ ಚಿಂತಿಸದೆ ನಮ್ಮ ಭವಿಷ್ಯದ ಜೀವನದ ಕಡೆ ನಮ್ಮ ಗಮನವನ್ನು ನೀಡಬೇಕು. ಇನ್ನು ನಮ್ಮ ಸಂಬಂಧಗಳನ್ನು ಗಟ್ಟಿಯಾಗಿ ಏರಿಸಿ ಕೊಳ್ಳಬೇಕೆಂದರೆ ನಾವು ಕೆಲವೊಮ್ಮೆ ಕಿವುಡರಾಗಿ, ಮೂಕರಾಗಿ ಹಾಗೂ ಕುರುಡರಾಗಿ ಇರಬೇಕಾಗುತ್ತದೆ. ಮರಳಿನ ಮೇಲೆ ಮರಳು ಎಂದು ಬರೆಯಬಹುದು ಆದರೆ ನೀರಿನ ಮೇಲೆ ನೀರು ಎಂದು ಬರೆಯಲು ಸಾಧ್ಯವೇ..? ಜೀವನದ ಆಸೆಗಳು ಕೂಡ ಹಾಗೆಯೇ. ಕೆಲವು ಈಡೇರಿದರೆ ಮತ್ತೆ ಕೆಲವು ಈಡೇರುವುದಿಲ್ಲ. ಈ ಜಗತ್ತಿನಲ್ಲಿ ಯಾರೂ ಕೂಡ ಒಳ್ಳೆಯವರಲ್ಲ.. ಅದೇ ರೀತಿ ಯಾರೂ ಕೂಡ ಕೆಟ್ಟವರಲ್ಲ. ಸಮಯಕ್ಕೆ ತಕ್ಕಂತೆ ಕಾಲ ಬದಲಾದಂತೆ ಅವರವರ ಅನುಕೂಲಕ್ಕೆ ಅವರು ಬದಲಾಗುತ್ತಾರೆ.

ನಾವು ನಮ್ಮ ಜೀವನದಲ್ಲಿ ಪ್ರೀತಿ ಮತ್ತು ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳಬಾರದು. ಏಕೆಂದರೆ ಪ್ರೀತಿ ಎಲ್ಲರ ಮೇಲೆ ಹುಟ್ಟುವುದಿಲ್ಲ. ನಂಬಿಕೆ ಎಲ್ಲರ ಮೇಲೆ ಇರುವುದಿಲ್ಲ. ಇನ್ನು ನಮ್ಮ ಜೀವನದಲ್ಲಿ ನಮಗೆ ಒಳ್ಳೆಯದು ಇಲ್ಲ ಎಂದು ಅಂದುಕೊಳ್ಳಬೇಡಿ. ಏಕೆಂದರೆ ನಮ್ಮ ಜೀವನದಲ್ಲಿ ನಾವು ಮಾಡುವ ತಪ್ಪುಗಳು ನಮಗೆ ಅದೆಷ್ಟೋ ಪಾಠಗಳನ್ನು ಹೇಳಿಕೊಡುತ್ತವೆ. ಜೀವನದಲ್ಲಿ ಸಾಧನೆ ಎಂಬ ಶಿಲೆಯನ್ನು ಕೆತ್ತಲು, ಗುರಿಯ ಹಾದಿಯಲ್ಲಿ ಎದುರಾಗುವ ಅವಮಾನಗಳೆಲ್ಲವೂ ಕೂಡ ಒಂದೊಂದು ಉಳಿಪೆಟ್ಟು ಇದ್ದಂತೆ. ಬದುಕು ಬದಲಾಗುತ್ತದೆ, ಸ್ನೇಹಿತರು ದೂರವಾಗುತ್ತಾರೆ ಆದರೆ ನಮ್ಮ ಬದುಕು ಮಾತ್ರ ನಿಲ್ಲುವುದಿಲ್ಲ. ಇನ್ನು ನೀವು ಬೇರೆಯವರು ಮಾಡುವ ತಪ್ಪುಗಳಿಂದ ಪಾಠವನ್ನು ಕಲಿಯಬೇಕಾಗುತ್ತದೆ. ಏಕೆಂದರೆ ಎಲ್ಲ ತಪ್ಪುಗಳನ್ನು ನೀವೇ ಮಾಡುವ ದೊಡ್ಡ ಜೀವನ ನಿಮ್ಮ ಬಳಿ ಇಲ್ಲ.

ನೀವು ಮಾಡುವ ಕೆಲಸದಲ್ಲಿ ಯಶಸ್ಸನ್ನು ಕಂಡುಕೊಳ್ಳಲು ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಬೇಕು. ಬೇಕು ಎಂದಾಗ ಇರಲ್ಲ.. ಬೇಡ ಎಂದಾಗ ಹೋಗಲ್ಲ.. ಬಯಸುವಾಗ ಸಿಗಲ್ಲ.. ಸಿಗುವಾಗ ಬಯಸಲ್ಲ.. ಹತ್ತಿರವಿದ್ದಾಗ ದೂರಮಾಡಲು ನೋಡುತ್ತೇವೆ.. ದೂರವಾದಾಗ ಹತ್ತಿರ ಹೋಗಲು ನೋಡುತ್ತೇವೆ.. ಇದುವೇ ಜೀವನ. ಎಲ್ಲಿ ಹುಟ್ಟಬೇಕು ಎಂಬುದು ನಮ್ಮ ಕೈಯಲ್ಲಿ ಇರುವುದಿಲ್ಲ. ಆದರೆ ಎಲ್ಲಿಗೆ ಮುಟ್ಟಬೇಕು ಎಂಬುದು ನಮ್ಮ ಕೈಯಲ್ಲಿ ಇರುತ್ತದೆ.

ಜೀವನ ಚಿಕ್ಕದಾಗಿದೆ ನಿಮ್ಮನ್ನು ನಗಿಸುವ ಹಾಗೂ ನಿಮ್ಮನ್ನು ಪ್ರೀತಿಸುವ ಜನರೊಂದಿಗೆ ನಿಮ್ಮ ಜೀವನವನ್ನು ಖರ್ಚು ಮಾಡಿ. ತಪ್ಪು ಎನ್ನುವುದು ಪುಟದ ಒಂದು ಪುಸ್ತಕ ಮಾತ್ರ.. ಸಂಬಂಧ ಎನ್ನುವುದು ಒಂದು ಪುಸ್ತಕ ಇದ್ದಂತೆ. ಆದ್ದರಿಂದ ಆ ಪುಟಕ್ಕಾಗಿ ಇಡೀ ಪುಸ್ತಕವನ್ನು ಕಳೆದುಕೊಳ್ಳಬೇಡಿ. ಪ್ರೀತಿಗಾಗಿ ಯಾರನ್ನು ಬಿಡಿಸಬಾರದು ಸ್ನೇಹಕ್ಕಾಗಿ ಯಾರನ್ನು ಬೇಡಬಾರದು. ಒಮ್ಮೆ ಬೇಡವೆಂದ ಮೇಲೆ ಅವರ ಹಿಂದೆ ಹೋಗಬಾರದು. ಹಾಗೇನಾದರೂ ಹೋದರೆ ನೋವು ನಿಶ್ಚಿತ.. ಅವಮಾನ ಖಚಿತ. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.