Neer Dose Karnataka
Take a fresh look at your lifestyle.

ಕೊನೆಗೂ ಬಹು ದಿನಗಳ ಆಸೆಯನ್ನು ಈಡೇರಿಸಿದ ಬಿಸಿಸಿಐ, ಕನ್ನಡಿಗರಿಗೆ ಸಿಹಿ ಸುದ್ದಿ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೇಟ್ ಗೆ ಕನ್ನಡಿಗರ ಹಾಗೂ ಕರ್ನಾಟಕದ ಕೊಡುಗೆ ಬಹಳ ದೊಡ್ಡದು. ಹಲವಾರು ಪ್ರಮುಖ ಆಟಗಾರರನ್ನು ನೀಡಿದೆ. ಕರ್ನಾಟಕದ ಬೆಂಗಳೂರಿನಲ್ಲಿ ಮಾತ್ರ ಅಂತಾರಾಷ್ಟ್ರೀಯ ಕ್ರಿಕೆಟ್ ನಡೆಯುತ್ತಿದೆ. ಉಳಿದೆಡೆ ಕ್ರೀಡಾಂಗಣಗಳಿದ್ದರೂ ರಣಜಿ ಕ್ರಿಕೆಟ್ ಮಾತ್ರ ನಡೆಯುತ್ತಿದೆ. ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿ ಇರುವ ಎನ್.ಸಿ.ಎ ಕ್ರಿಕೇಟಿಗರಿಗೆ ಪುನಶ್ಚೇತನ ನೀಡುವ ಸಂಸ್ಥೆಯಾಗಿದೆ.

ಈಗ ಅದನ್ನು ಇನ್ನಷ್ಟು ವಿಸ್ತ್ರತವಾಗಲು ಈಗ ಬಿಸಿಸಿಐ ದೊಡ್ಡ ಯೋಜನೆಯೊಂದನ್ನು ರೂಪಿಸಿದೆ. ಬೆಂಗಳೂರು ಹೊರವಲಯದ ಜಕ್ಕೂರಿನ ಎರೋ ಡಿಫೆನ್ಸ್ ಬಳಿ 50 ಎಕರೆ ಪ್ರದೇಶವನ್ನು ಬರೋಬ್ಬರಿ 99 ವರ್ಷಕ್ಕೆ ಲೀಸ್ ತೆಗೆದುಕೊಂಡಿದ್ದು, ಅಲ್ಲಿ ಅಭ್ಯಾಸ ಹಾಗೂ ಆಟಗಾರರ ಪುನಶ್ಚೇತನಕ್ಕೆಂದು ಹೊಸ ಎನ್.ಸಿ.ಎ ನಿರ್ಮಿಸಲು ಮುಂದಾಗಿದೆ. ಈ ಬಗ್ಗೆ ಸೋಮವಾರ ಗುದ್ದಲಿ ಪೂಜೆ ನೇರವೇರಿಸಿದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕಾರ್ಯದರ್ಶಿ ಜಯ್ ಷಾ ಬೆಂಗಳೂರಿನಲ್ಲಿ ವಿಶ್ವದರ್ಜೆಯ ಎನ್.ಸಿ.ಎ ಕೇಂದ್ರ ನಿರ್ಮಿಸುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ.ನೂತನ ಎನ್.ಸಿ.ಎ ಕೇಂದ್ರದಲ್ಲಿ 3 ಕ್ರಿಕೇಟ್ ಮೈದಾನಗಳು ಹಾಗೂ 40 ಅಭ್ಯಾಸ ಪಿಚ್ ಗಳು ಇರಲಿವೆ.

ಈ ಮೈದಾನದಲ್ಲಿ ರಣಜಿ ಪಂದ್ಯಗಳನ್ನು ಏರ್ಪಡಿಸಲಾಗುವುದು ಎಂದು ಹೇಳಿದೆ. ಇದರ ಜೊತೆ ಅಭ್ಯಾಸಕ್ಕೆಂದು ಮೀಸಲಾಗಿರುವ 40 ಪಿಚ್ ಗಳ ಪೈಕಿ 20 ಪಿಚ್ ಗಳು ಹೊನಲು ಬೆಳಕಿನ ಅಭ್ಯಾಸಕ್ಕೆಂದು ರಚಿಸಲಾಗಿದೆ. ಒಟ್ಟು 16 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಬರುವ ಈ ಕ್ರೀಡಾ ಸಮುಚ್ಛಯದಲ್ಲಿ ಆಧುನಿಕ ತಂತ್ರಜ್ಞಾನ ಇರುವ ಜಿಮ್, ಕ್ರಿಕೇಟಿಗರ ವಸತಿಗೆಂದು 243 ಕೊಠಡಿಗಳು, ಆಟಗಾರರ ಮಕ್ಕಳಿಗೆ ಶಿಶುವಿಹಾರ, ಉಷ್ಣಾಂಶ ನಿಯಂತ್ರಿಸಬಲ್ಲ ಈಜುಕೋಳ ಇರಲಿದೆಯಂತೆ. ಇದರ ಜೊತೆ ಶಾಪಿಂಗ್ ಕಾಂಪ್ಲೆಕ್ಸ್, ಸಿನಿಮಾ ಹಾಲ್, ಬ್ಯಾಂಕ್ , ಆಸ್ಪತ್ರೆ, ಫಾರ್ಮಸಿ, ಫುಡ್ ಕೋರ್ಟ್ ಸಹ ಇರಲಿದೆಯಂತೆ. ಒಟ್ಟಿನಲ್ಲಿ ಬೆಂಗಳೂರಿನ ಗರಿಮೆಗೆ ಈ ಹೊಸ ಎನ್.ಸಿ.ಎ ಕೇಂದ್ರ ಮತ್ತಷ್ಟು ಮೆರುಗುಹೆಚ್ಚಿಸಬಹುದು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.