Neer Dose Karnataka
Take a fresh look at your lifestyle.

ಪಾಂಡ್ಯ ,ಶಾರ್ದುಲ್, ಚಾಹರ್, ವೆಂಕಿ ಯಾರೂ ಅಲ್ಲ, ಈತನಿಗೆ ಅವಕಾಶ ನೀಡಿ ಈತನೇ ಬೆಸ್ಟ್ ಆಲ್-ರೌಂಡರ್ ಆಗುತ್ತಾನೆ ಎಂದ ಗವಾಸ್ಕರ್, ಯಾರಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಈಗಾಗಲೇ ನೀವೆಲ್ಲ ನೋಡಿರುವಂತೆ ಐಪಿಎಲ್ ನಿಂದಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ಹಲವಾರು ಯುವ ಪ್ರತಿಭೆಗಳು ದೊರೆತಿವೆ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ಕೂಡ ನೀಡಿದ್ದಾರೆ.

ಮೊದಲಿನಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡಕ್ಕೆ ಫಾಸ್ಟ್ ಬೌಲಿಂಗ್ ಆಲ್-ರೌಂಡರ್ ಕೊರತೆಯಿತ್ತು. ಅದಕ್ಕೆ ಹಾರ್ದಿಕ್ ಪಾಂಡ್ಯ ಶಾರ್ದುಲ್ ಠಾಕೂರ್ ದೀಪಕ್ ಚಹರ್ ಹಾಗು ವೆಂಕಟೇಶ್ ಅಯ್ಯರ್ ಅವರಂತಹ ಹಲವಾರು ಜನರು ಬಂದರು ಕೂಡ ಎರಡೂ ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬಲ್ಲ ಅಂತಹ ಆಟಗಾರ ಸಿಕ್ಕಿಲ್ಲ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಹಾರ್ದಿಕ್ ಪಾಂಡ್ಯ ಈಗಾಗಲೇ ಈ ಸ್ಥಾನವನ್ನು ಅತ್ಯುತ್ತಮವಾಗಿ ನಿಭಾಯಿಸಿದ್ದರು. ಆದರೆ ಅವರಿಗೆ ಪದೇಪದೇ ಕಾಡುತ್ತಿರುವ ಇಂಜುರಿ ಯಿಂದಾಗಿ ಅವರು ಈಗಾಗಲೇ ತಂಡದಿಂದ ಹೊರಬಿದ್ದಿದ್ದಾರೆ. ಈ ಬಾರಿಯ ಐಪಿಎಲ್ ನ ಪಂದ್ಯಾಟದ ಪ್ರದರ್ಶನ ಮೇರೆಗೆ ಅವರು ಮುಂದಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಸೇರ್ಪಡೆಯಾಗುತ್ತಾರೋ ಇಲ್ಲವೇ ಎಂಬುದನ್ನು ಕಾದು ನೋಡಬೇಕಾಗಿದೆ. ಇನ್ನೂ ಇದೆ ವಿಚಾರದ ಹಿನ್ನೆಲೆಯಲ್ಲಿ ಸುನೀಲ್ ಗಾವಸ್ಕರ್ ರವರು ಈ ಸ್ಥಾನವನ್ನು ತುಂಬಬಲ್ಲ ಅಂತಹ ಸಮರ್ಥ ಆಟಗಾರನೊಬ್ಬನ ಕುರಿತಂತೆ ಹೇಳಿದ್ದಾರೆ. ಹಾಗಿದ್ದರೆ ಆ ಆಟಗಾರ ಯಾರು ಎಂಬುದನ್ನು ಮೊದಲು ತಿಳಿದುಕೊಳ್ಳೋಣ ಬನ್ನಿ.

ಸುನೀಲ್ ಗಾವಸ್ಕರ್ ಅವರು ಹೇಳುವ ಪ್ರಕಾರ ಹಿಮಾಚಲ ಮೂಲದ ಆಟಗಾರರಾಗಿರುವ ರಿಷಿ ಧವನ್ ಅವರು ಈ ಸ್ಥಾನಕ್ಕೆ ಸಮರ್ಥ ಆಟಗಾರ ಎಂಬುದಾಗಿ ಹೇಳಿದ್ದಾರೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡದಲ್ಲಿ ಹಲವಾರು ವರ್ಷಗಳ ಹಿಂದೆ ಹಾಡಿರುವ ರಿಷಿ ಧವನ್ ರವರು ಕಳೆದ ಬಾರಿಯ ವಿಜಯ್ ಹಜಾರೆ ಟ್ರೋಫಿ ಯಲ್ಲಿ ಹಿಮಾಚಲಪ್ರದೇಶ ತಂಡ ಗೆಲ್ಲುವಂತೆ ತಂಡವನ್ನು ಮುನ್ನಡೆಸಿದ್ದಾರೆ. ಟೂರ್ನಮೆಂಟಿನಲ್ಲಿ ಎರಡನೇ ಅತ್ಯಂತ ಹೆಚ್ಚು ರನ್ ಗಳಿಸಿರುವ ಬ್ಯಾಟ್ಸ್ಮನ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಕ್ರಿಕೆಟ್ ತಂಡಕ್ಕೆ ಆಡಲು ರಿಷಿ ಧವನ್ ಅವರಿಗೆ ಅವಕಾಶ ನೀಡಿದರೆ ಖಂಡಿತವಾಗಿಯೂ ಎರಡು ವಿಭಾಗದಲ್ಲಿ ಅತ್ಯುತ್ತಮವಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು ಎಂಬುದಾಗಿ ಸುನಿಲ್ ಗವಾಸ್ಕರ್ ಅವರು ಹೇಳಿದ್ದಾರೆ.

Comments are closed.