ಗರ್ಲ್ ಫ್ರೆಂಡ್ ಮಾಡಿಕೊಳ್ಳುವುದು ಹೇಗೆ ಎಂದು ಟ್ರೇನಿಂಗ ಕೊಡುತ್ತಲೇ ಈಕೆ. ಪ್ರೀತಿ ಹೇಗೆ ಮಾಡಬೇಕು ಎಂದು ಹೇಳಿಕೊಡಲು ಎಷ್ಟು ದುಡ್ಡು ಕೊಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿಗಷ್ಟೆ ಫೆಬ್ರವರಿ 14ರಂದು ಬಹುತೇಕ ಎಲ್ಲಾ ಜೋಡಿಗಳು ವ್ಯಾಲೆಂಟೈನ್ಸ್ ಡೇ ಅನ್ನು ಆಚರಿಸಿಕೊಂಡಿದ್ದಾರೆ. ಇನ್ನು ಕೆಲವರು ಫೆಬ್ರವರಿ ಹದಿನಾಲ್ಕರಂದು ತಮ್ಮ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಫೆಬ್ರವರಿ 14 ಬಂತು ಎಂದರೆ ಸಾಕು ಈ ವಿಚಾರಗಳು ಹೆಚ್ಚಾಗಿ ಸುದ್ದಿ ಮಾಡುತ್ತವೆ.
ಇನ್ನು ಕೆಲವರು ಇನ್ನೂ ಕೂಡ ಸಿಂಗಲ್ ಆಗಿ ಇರುತ್ತಾರೆ. ಅವರಿಗೆ ಈಗಾಗಲೇ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ಹೊಂದಿರುವವರು ರೇಗಿಸುತ್ತಲೇ ಇರುತ್ತಾರೆ. ಅದರಲ್ಲೂ ಹುಡುಗರಿಗೆ ಹುಡುಗಿಯರನ್ನು ಪಟಾಯಿಸಲು ನಿನಗೆ ಟ್ಯೂಷನ್ ಬೇಕಾ ಎಂಬುದಾಗಿ ಕೂಡ ರೇಗಿಸುತ್ತಾರೆ. ಇನ್ನು ಇಂದಿನ ವಿಚಾರದಲ್ಲಿ ಕೂಡ ನಾವು ಮಾತನಾಡಲು ಬರುತ್ತಿರುವುದು ಇದೇ ವಿಷಯದ ಕುರಿತಂತೆ. ಕೆಲವರಿಗೆ ಹುಡುಗಿಯರೊಂದಿಗೆ ಹೇಗೆ ಪ್ರೀತಿಯ ವಿಚಾರದಲ್ಲಿ ವ್ಯವಹರಿಸಬೇಕು ಎನ್ನುವುದರ ಕುರಿತಂತೆ ಜ್ಞಾನವಿರುವುದಿಲ್ಲ. ನಿಮಗೆ ಇನ್ನು ನಾವು ಹುಡುಗಿಯರನ್ನು ಪಟಾಯಿಸಲು ಟ್ಯೂಷನ್ ಕೊಡುವ ಹುಡುಗಿಯ ಕುರಿತಂತೆ ಹೇಳಲು ಹೊರಟಿದ್ದೇವೆ. ಈಕೆ ಹೆಸರು ಕೆಜಿಯಾ ನೋಬೆಲ್ ಈಕೆ ಒಬ್ಬ ಬ್ರಿಟಿಷ್ ಮಾಡೆಲ್.
ಈಕೆ 15ನೇ ವರ್ಷದವಳಿರಬೇಕಾದರೆ ಶಿಕ್ಷಣಕ್ಕೆ ಟಾಟಾ ಹೇಳಿದ್ದಳು. ಒಮ್ಮೆ ಹೀಗೆ ಬಾರಿನಲ್ಲಿ ಕುಳಿತಿರಬೇಕಾದರೆ ಒಬ್ಬ ವ್ಯಕ್ತಿ ಬಂದು ಸಿಂಗಲ್ ಹುಡುಗರು ಹುಡುಗಿಯರ ಜೊತೆಗೆ ಹೇಗೆ ಚಾಟ್ ಮಾಡಬಹುದು ಎಂಬುದಾಗಿ ಫೀಡ್ಬ್ಯಾಕ್ ನೀಡುತ್ತಿದೆ ಎಂಬುದಾಗಿ ಕೇಳುತ್ತಾನೆ. ಈ ಸಂದರ್ಭದಲ್ಲಿ ಆಕೆಗೆ ಯಾಕೆ ಇದನ್ನು ಬಿಸಿನೆಸ್ ಮಾಡಬಾರದು ಎಂಬುದಾಗಿ ಅಂದುಕೊಳ್ಳುತ್ತಾಳೆ. ನೋಬೆಲ್ ಕೂಡಲೇ ಈ ಕುರಿತಂತೆ ಕಾರ್ಯಪ್ರವೃತ್ತರಾಗುತ್ತಾಳೆ. ಈಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಯೂಟ್ಯೂಬ್ನಲ್ಲಿ ಸಾಕಷ್ಟು ಜನ ಫಾಲೋವರ್ಸ್ ಕೂಡ ಇದ್ದಾರೆ. ಇನ್ನು ಇವಳ ಒಂದು ಗಂಟೆಯ ಲವ್ ಕೋಚಿಂಗ್ ಗೆ ಬರೋಬ್ಬರಿ 30 ಸಾವಿರ ರೂಪಾಯಿ ಶುಲ್ಕವನ್ನು ಪಡೆಯುತ್ತಾಳೆ. ದುಬಾರಿಯಾದರೂ ಕೂಡ ಇವಳ ಬಳಿ ಟ್ರೈನಿಂಗ್ ಪಡೆಯಲು ಬರುವ ಗ್ರಾಹಕರಿಗೆ ಏನು ಕಮ್ಮಿ ಇಲ್ಲ.
Comments are closed.