ಯಾವುದೇ ಕಾರಣಕ್ಕೂ ಶ್ರೀ ಲೀಲಾ ರವರ ಜೊತೆ ರೋಮ್ಯಾನ್ಸ್ ಮಾಡಲು ಸಾಧ್ಯವೇ ಇಲ್ಲ ಎಂದ ರವಿ ಮಾಮ, ಯಾಕಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ 80 ಹಾಗೂ 90ರ ದಶಕದಲ್ಲಿ ಲವ್ ಹಾಗೂ ರೋಮ್ಯಾಂಟಿಕ್ ಚಿತ್ರಗಳ ಕುರಿತಂತೆ ಹೇಳಿದಾಗಲೆಲ್ಲ ನಮಗೆ ಮೊದಲಿಗೆ ನೆನಪಿಗೆ ಬರುವುದು ನಮ್ಮೆಲ್ಲರ ನೆಚ್ಚಿನ ರವಿಮಾಮ. ಹೌದು ಗೆಳೆಯರೇ ಪ್ರೇಮಲೋಕ ವನ್ನು ಕಟ್ಟಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ ಹಾಗೂ ಅಜಾತಶತ್ರು ಎಂದು ಹೇಳಬಹುದಾಗಿದೆ. ವಯಸ್ಸು 60 ಆಗುತ್ತ ಬಂದರೂ ಕೂಡ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಇಂದಿಗೂ ಕೂಡ ಸುದ್ದಿಯಲ್ಲಿದ್ದಾರೆ.
ಮೊನ್ನೆಯಷ್ಟೇ ರಿಯಾಲಿಟಿ ಶೋ ಪ್ರೋಮೋ ಚಿತ್ರೀಕರಣದಲ್ಲಿ ಮಕ್ಕಳು ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಕಿಡ್ನಾಪ್ ಮಾಡಿರುವ ವಿಡಿಯೋ ದೊಡ್ಡಮಟ್ಟದಲ್ಲಿ ವೈರಲ್ ಆಗಿತ್ತು. ಈಗ ಮತ್ತೊಂದು ಹೇಳಿಕೆ ವೈರಲ್ ಆಗುತ್ತಿದೆ. ಅದು ವೈರಲ್ ಹಾಕುತ್ತಿರುವುದಕ್ಕೆ ಕಾರಣ ಕೂಡ ನಮ್ಮ ಕ್ರೇಜಿಸ್ಟಾರ್ ರವಿಚಂದ್ರನ್. ಇತ್ತೀಚಿಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಧನ್ವೀರ ಹಾಗೂ ಶ್ರೀಲೀಲಾ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಬೈಟು ಲವ್ ಚಿತ್ರದ ಕಾರ್ಯಕ್ರಮಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಇಬ್ಬರಿಗೂ ಕೂಡ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಹೇಳಿರುವ ಮಾತು ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಅದೇನೆಂದರೆ ಅನುಶ್ರೀ ಅವರು ನೀವು ಶ್ರೀಲೀಲಾ ರವರ ಜೊತೆಗೆ ರೋಮ್ಯಾನ್ಸ್ ಮಾಡುತ್ತೀರಾ ಸಾರ್ ಎಂಬುದಾಗಿ ಕೇಳುತ್ತಾರೆ. ಅದಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಶ್ರೀಲೀಲಾ ರವರ ಜೊತೆಗೆ ರೋಮ್ಯಾನ್ಸ್ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ. ಅದಕ್ಕೆ ಕಾರಣ ಕೂಡ ಇದೆ ಅದೇನೆಂದರೆ ರವಿಚಂದ್ರನ್ ರವರ ಮಗ ಕೂಡ ಅವರ ಜೊತೆಗೆ ಅದೇ ಕಾರ್ಯಕ್ರಮಕ್ಕೆ ಬಂದಿರುತ್ತಾರೆ. ರವಿಚಂದ್ರನ್ ರವರು ಪರೋಕ್ಷವಾಗಿ ನನ್ನ ಮಗ ಶ್ರೀಲೀಲ ಅವರನ್ನು ನೋಡುವುದಕ್ಕೆ ಬಂದಿದ್ದಾನೆ ನಾನು ಹೇಗೆ ರೋಮ್ಯಾನ್ಸ್ ಮಾಡಲು ಸಾಧ್ಯ ಎಂಬುದಾಗಿ ಅರ್ಥವಾಗುವಂತೆ ಹೇಳುತ್ತಾರೆ. ಅವರ ಈ ಹಾಸ್ಯಚಟಾಕಿಯ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Comments are closed.