Neer Dose Karnataka
Take a fresh look at your lifestyle.

ಶುರುವಾಯಿತು ತಂಡದಲ್ಲಿ ಬದಲಾವಣೆ, ಕೊಹ್ಲಿ ಕೈ ಬಿಟ್ಟಿದ್ದ ಸೂತ್ರವನ್ನು ಮತ್ತೆ ತರಲು ಮುಂದಾದ ರೋಹಿತ್, ಏನು ಗೊತ್ತೇ ಆ ಸೂತ್ರ??

ನಮಸ್ಕಾರ ಸ್ನೇಹಿತರೇ ಭಾರತ ತಂಡದಲ್ಲಿ ಒಂದು ಸಮಯದಲ್ಲಿ 9 ಜನ ಬೌಲರ್ ಇರುತ್ತಿದ್ದರು. ಒಂದು ಪಂದ್ಯದಲ್ಲಂತೂ ವಿಕೇಟ್ ಕೀಪರ್ ರಾಹುಲ್ ದ್ರಾವಿಡ್ ಹಾಗೂ ಬ್ಯಾಟ್ಸ್ಮನ್ ಮಹಮದ್ ಕೈಫ್ ಹೊರತುಪಡಿಸಿದರೇ, ಉಳಿದವರೆಲ್ಲರೂ ಬೌಲಿಂಗ್ ಮಾಡಿದ್ದರು. ಅದಾದ ನಂತರ ನಾಯಕರಾದ ಧೋನಿ, ಮಧ್ಯಮ ಓವರ್ ಗಳಲ್ಲಿ ರೈನಾ, ರೋಹಿತ್, ಕೇದಾರ್ ಜಾಧವ್, ವಿರೇಂದ್ರ ಸೆಹ್ವಾಗ್ ರಿಂದ ಬೌಲ್ ಮಾಡಿಸಿ ಹಲವಾರು ಬಾರಿ ವಿಕೇಟ್ ಕಿತ್ತಿದ್ದರು. ಇದು ಹಲವಾರು ಬಾರಿ ರೆಗ್ಯುಲರ್ ಬೌಲರ್ ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಿತ್ತು.ಹಲವಾರು ಪಂದ್ಯಗಳಲ್ಲಿ ಇದು ಪಂದ್ಯದ ದಿಕ್ಕನ್ನೇ ಬದಲಿಸಿತ್ತು.

ಆದರೇ ನಂತರ ನಾಯಕರಾಗಿ ಬಂದ ವಿರಾಟ್ ಕೊಹ್ಲಿ ಈ ಪದ್ದತಿಯನ್ನೇ ಕೈ ಬಿಟ್ಟಿದ್ದರು. ತಂಡದಲ್ಲಿ ಐವರು ಬೌಲರ್ ಪದ್ದತಿಯನ್ನೇ ಬಹಳ ಪಂದ್ಯಗಳಲ್ಲಿ ಮುಂದುವರೆಸಿದರು. ಕೆಲವೊಮ್ಮೆ ಇದು ವರವಾಗಿ ಪರಿಣಮಿಸಿದರೇ, ಕೆಲವೊಮ್ಮೆ ಶಾಪವಾಯಿತು. ಪಾರ್ಟ್ ಟೈಮ್ ಬೌಲರ್ ಗಳ ಕೊರತೆಯಿಂದ ಕೆಲವು ಪಂದ್ಯಗಳಲ್ಲಿ ಭಾರತ ಸೋಲನ್ನು ಅನುಭವಿಸಬೇಕಾಯಿತು.

ಆದರೇ ಕೊಹ್ಲಿ ಬಿಟ್ಟಿದ್ದ ಪದ್ದತಿಯನ್ನು ಈಗ ಹೊಸ ನಾಯಕ ರೋಹಿತ್ ಶರ್ಮಾ ಮತ್ತೆ ಶುರು ಮಾಡಿದ್ದಾರೆ. ಹೌದು ಕಳೆದ ಏಕದಿನ ಪಂದ್ಯಗಳಲ್ಲಿ ಹಾಗೂ ಟಿ20 ಪಂದ್ಯಗಳಲ್ಲಿ ಆರನೇ ಬೌಲರ್ ಗೆ ಬೌಲಿಂಗ್ ನೀಡಿದ್ದರು. ಜೊತೆಗೆ ಪಾರ್ಟ್ ಟೈಮ್ ಬೌಲರ್ ಗಳಾಗಿರುವ ಸೂರ್ಯ ಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಗೂ ಸಹ ಬೌಲಿಂಗ್ ಅಭ್ಯಾಸ ನಡೆಸಿ ಎಂದು ಸೂಚನೆ ನೀಡಿದ್ದಾರಂತೆ. ಹೀಗಾಗಿ ಮುಂದಿನ ದಿನಗಳಲ್ಲಿ, ಭಾರತ ತಂಡದಲ್ಲಿ ಬೌಲಿಂಗ್ ಬದಲಾವಣೆಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ಅನಿಸುತ್ತದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Comments are closed.