ಕೋಟಿ ನಿರ್ಮಾಪಕ ರಾಮು ರವರು ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಸಿನಿಮಾ ಮಾಡದೇ ಇರುವುದಕ್ಕೆ ಕಾರಣವೇನು ಗೊತ್ತಾ??
ನಮಸ್ಕಾರ ಸ್ನೇಹಿತರೇ ಒಂದು ಕಾಲದಲ್ಲಿ ನಟಿ ಮಾಲಾಶ್ರೀ ಅವರು ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಿದ್ದ ನಟಿ. ಇಂದು ನಾವು ಮಾತನಾಡಲು ಹೊರಟಿರುವುದು ಅವರ ಗಂಡ ನಿರ್ಮಾಪಕ ಕೋಟಿ ರಾಮು ರವರ ಕುರಿತಂತೆ. ಕನ್ನಡ ಚಿತ್ರರಂಗದಲ್ಲಿ ರಾಮು ಫಿಲಂಸ್ ಸಂಸ್ಥೆಯ ಮೂಲಕ ಕೋಟಿ ಕೋಟಿ ಬಜೆಟ್ ನಲ್ಲಿ ಅದ್ದೂರಿಯಾಗಿ ಸಿನಿಮಾ ಮಾಡುವ ಪದ್ಧತಿಯನ್ನು ಪ್ರಾರಂಭಿಸಿದ್ದು ಇದೇ ನಮ್ಮ ಕೋಟಿ ರಾಮು ರವರು. ಕನ್ನಡ ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಟೆಕ್ನಿಷಿಯನ್ಸ್ ನಿರ್ದೇಶಕರಿಗೂ ಕೂಡ ಅಚ್ಚುಮೆಚ್ಚಿನ ನಿರ್ಮಾಪಕರಾಗಿದ್ದರು ಕೋಟಿ ರಾಮು ರವರು.
ನಿರ್ದೇಶಕರ ಕನಸನ್ನು ನನಸು ಮಾಡುವಂತಹ ಜವಾಬ್ದಾರಿಯನ್ನು ನಿರ್ಮಾಪಕರಾಗಿ ಕೋಟಿ ರಾಮುರವರ ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಇದಕ್ಕಾಗಿಯೇ ಎಲ್ಲಾ ನಟರು ಕೂಡ ರಾಮುರವರ ನಿರ್ಮಾಣದ ಸಿನಿಮಾದಲ್ಲಿ ನಟಿಸುವುದಕ್ಕೆ ತಾಮುಂದು ನಾಮುಂದು ಎಂದು ಮುಂದೆ ಬರುತ್ತಿದ್ದರು. ಇನ್ನು ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಸಾಹಸಸಿಂಹ ವಿಷ್ಣುವರ್ಧನ್ ರವರ ಸಿನಿಮಾಗಳು ಎಂದರೆ ಕನ್ನಡ ಪ್ರೇಕ್ಷಕರಿಗೆ ಅಚ್ಚುಮೆಚ್ಚು ಹೌಸ್ಫುಲ್ ಆಗೋದ್ರಲ್ಲಿ ಯಾವುದೇ ಅನುಮಾನವಿರುತ್ತಿರಲಿಲ್ಲ. ದಾದಾ ಜೊತೆ ಸಿನಿಮಾ ಮಾಡೋಕೆ ಯಾರು ತಾನೆ ಇಷ್ಟಪಡುವುದಿಲ್ಲ ಹೇಳಿ.
ಆದರೆ ನಿಮಗೆ ಗೊತ್ತಾ ಕೋಟಿ ರಾಮು ರವರು ಇದುವರೆಗೂ ಕೂಡ ಸಾಹಸಸಿಂಹ ವಿಷ್ಣುವರ್ಧನ್ ರವರ ಜೊತೆಗೆ ಸಿನಿಮಾ ಮಾಡಿಲ್ಲ. ಅದಕ್ಕೆ ಕಾರಣ ಏನು ಎನ್ನುವುದನ್ನು ಕೂಡ ಹೇಳುತ್ತೇವೆ ಬನ್ನಿ. ಹೌದು ಕೋಟಿ ರಾಮು ಅವರಿಗೂ ಕೂಡ ಸಾಹಸಸಿಂಹ ವಿಷ್ಣುವರ್ಧನ್ ಅವರ ಜೊತೆಗೆ ಸಿನಿಮಾ ಮಾಡುವ ಆಸೆ ಇತ್ತು. ಇದಕ್ಕಾಗಿ ಇಬ್ಬರೂ ಕೂಡ ಒಪ್ಪಿಕೊಂಡು ಕಥೆ ಕೂಡ ಫೈನಲ್ ಆಗಿತ್ತು. ಆದರೆ ನಂತರ ಹಾಗೆ ಮಾಡಿದರೆ ಚೆನ್ನಾಗಿತ್ತು ಫಿಲ್ಮನ್ನು ಹೀಗೆ ಮಾಡಬಹುದು ಎಂದು ಚರ್ಚೆ ಮಾಡುತ್ತಾ ಕೊಂಚ ಕಾಲಹರಣವಾಗುತ್ತದೆ. ಇದಾದ ನಂತರ ಮತ್ತೆ ಸಿನಿಮಾ ಮಾಡುವುದಕ್ಕೆ ಇಬ್ಬರೂ ಕೂಡ ಸಿದ್ಧವಾಗುತ್ತಾರೆ ಆದರೆ ಆ ಸಂದರ್ಭದಲ್ಲಾಗಲೇ ವಿಷ್ಣುವರ್ಧನ್ ರವರು ನಮ್ಮನ್ನೆಲ್ಲ ಬಿಟ್ಟು ಸ್ವರ್ಗಸ್ಥರಾಗಿರುತ್ತಾರೆ. ಈಗ ಇಂದು ನಮ್ಮೊಂದಿಗೆ ಕೋಟಿ ರಾಮು ರವರು ಕೂಡ ಇಲ್ಲ. ಇಬ್ಬರು ಬಿಟ್ಟು ಹೋದಂತಹ ಸಿನಿಮಾ ನೆನಪುಗಳಷ್ಟೇ ನಮಗೆ ಬಾಕಿ ಉಳಿದಿರುವುದು.
Comments are closed.