ನಟಿ ಶ್ರೀಲೀಲಾ ದತ್ತು ಏನೋ ತೆಗೆದುಕೊಂಡರು, ಆದರೆ ಮಗಳು ಮಾಡಿದ ಈ ಕೆಲಸ ನೋಡಿ ಶ್ರೀಲೀಲಾ ರವರ ಅಮ್ಮ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಜನಮೆಚ್ಚುಗೆಯನ್ನು ಪಡೆಯುತ್ತಿರುವ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ ಎಂದರೆ ಅದು ಶ್ರೀಲೀಲಾ ಎಂದರೆ ಅತಿಶಯೋಕ್ತಿಯಲ್ಲ. ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುವ ಮೂಲಕ ಎಲ್ಲರ ಮನಸ್ಸನ್ನು ಗೆಲ್ಲಲು ಪ್ರಾರಂಭಿಸಿರುವ ಶ್ರೀಲೀಲಾ ರವರು ಈಗಾಗಲೇ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೆಳ್ಳಿ ಸಂದಡಿ ಚಿತ್ರದ ಮೂಲಕ ತೆಲುಗು ಸಿನಿಮಾ ರಂಗದ ಪ್ರೇಕ್ಷಕರನ್ನು ಕೂಡ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಈಗಾಗಲೇ ತೆಲುಗಿನಿಂದ ಮೂರು ಸಿನಿಮಾಗಳ ಆಫರ್ ಕೂಡ ಬಂದಿದೆ. ಇತ್ತೀಚಿಗಷ್ಟೇ ಶ್ರೀಲೀಲಾ ರವರ ಬೈಟು ಲವ್ ಸಿನಿಮಾ ಕೂಡ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗಿ ಅಪೂರ್ವ ಜನಮನ್ನಣೆಯನ್ನು ಪಡೆದುಕೊಳ್ಳುತ್ತಿದೆ. ಚಿತ್ರದಲ್ಲಿ ಶ್ರೀಲೀಲಾ ಹಾಗೂ ಧನ್ವೀರ್ ರವರ ಕಾಂಬಿನೇಷನ್ ಸಕತ್ತಾಗಿ ಮೂಡಿಬಂದಿದೆ. ಇನ್ನು ಇದೆ ಚಿತ್ರದ ಸಮಾರಂಭದಲ್ಲಿ ಶ್ರೀಲೀಲಾ ಹಾಗೂ ಧನ್ವೀರ್ ಇಬ್ಬರು ಕೂಡ ಅನಾಥ ಹಾಗೂ ಅಸಹಾಯಕ ಮಕ್ಕಳನ್ನು ದತ್ತು ಪಡೆದು ಕೊಂಡಿದ್ದಾರೆ.
ಇದರ ಕುರಿತಂತೆ ವೇದಿಕೆಯಲ್ಲಿ ಶ್ರೀಲೀಲಾ ರವರ ತಾಯಿ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶ್ರೀ ಲೀಲಾ ರವರ ತಾಯಿ ಒಬ್ಬರು ವೈದ್ಯೆ. ಈ ಕುರಿತಂತೆ ತಮ್ಮ ಮಗಳ ಒಳ್ಳೆಯ ಕೆಲಸಕ್ಕಾಗಿ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ನೀವೆಲ್ಲ ನನ್ನ ಮಗಳಿಗೆ ಪ್ರೀತಿಯನ್ನು ನೀಡಿದ್ದೀರಿ ನನ್ನ ಮಗಳು ಈ ಮೂಲಕ ಇನ್ನಷ್ಟು ಪ್ರೀತಿಯನ್ನು ಹಂಚಲಿ ಎಂಬುದಾಗಿ ಹೇಳಿಕೊಂಡಿದ್ದಾರೆ. ಶ್ರೀಲಿಲ ಹಾಗೂ ಧನ್ವೀರ್ ಸೇರಿದಂತೆ ಬೈ ಟೂ ಲವ್ ಮಾಡಿರುವ ಈ ಒಳ್ಳೆಯ ಕೆಲಸದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.
Comments are closed.