ಸಿಹಿ ಸುದ್ದಿ ಎಂದಿದ್ದ ಮೋಹಕತಾರೆ ರಮ್ಯಾ ಅವರ ಮದುವೆಯೋ, ಸಿನಿಮಾ ಎಂಟ್ರಿಯೋ ಅವರೇ ಹೇಳಿದ್ದಾರೆ ಕೇಳಿ. ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಸ್ಯಾಂಡಲ್ ವುಡ್ ನ ಮೋಹಕ ತಾರೆ ನಟಿ ರಮ್ಯಾ ಎವರ್ ಗ್ರೀನ್ ನಟಿ. ಅವರು ಚಿತ್ರರಂಗಕ್ಕೆ ಬಂದ ಆರಂಭದಿಂದಲೂ ದೊಡ್ಡ ಅಭಿಮಾನಿ ಬಳಗವನ್ನೇ ಗಳಿಸಿಕೊಂಡವರು. ರಮ್ಯಾ ನಟನೆಯನ್ನು ಬಿಟ್ಟು ರಾಜಕೀಯಕ್ಕೆ ಧುಮುಕಿದ್ದು ಅಭಿಮಾನಿಗಳಿಗೆ ತುಸು ಬೇಸರ ಮೂಡಿಸಿದ್ದು ಸುಳ್ಳಲ್ಲ.
ಆದರೆ ನಟಿ ರಮ್ಯಾ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಕನ್ನಡದ ಹೊಸ ಹೊಸ ಚಿತ್ರಗಳ ಬಗ್ಗೆ, ಹಾಡುಗಳ ಬಗ್ಗೆ ತಮ್ಮ ಖಾತೆಯಲ್ಲಿ ಬರೆದುಕೊಳ್ಳುವುದರ ಮೂಲಕ ಮತ್ತೆ ಜನರಿಗೆ ಹತ್ತಿರವಾಗಿದ್ದಾರೆ. ಚಂದನವನದ ಹಲವಾರು ಸಮಾರಂಭಗಳಲ್ಲಿ ನಟಿ ರಮ್ಯಾ ಭಾಗವಹಿಸುತ್ತಿದ್ದು, ಇತ್ತೀಚಿಗೆ ನಟಿ ಅಮೂಲ್ಯ ಅವರ ಸೀಮಂತ ಕಾರ್ಯಕ್ರಮದಲ್ಲಿ ಅವರಿಗೆ ದುಬಾರಿ ಸೀರೆ ಗಿಫ್ಟ್ ಮಾಡಿದ್ದು ತುಂಬಾನೇ ಸುದ್ದಿಯಾಗಿತ್ತು.
ನಟಿ ರಮ್ಯಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಮದುವೆಗೆ ಸಂಬಂಧಿಸಿದ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು ರಮ್ಯಾ ಮದುವೆಯಾಗುತ್ತಿದ್ದಾರಾ ಅನ್ನುವ ಕುತೂಹಲವನ್ನು ಹುಟ್ಟುಹಾಕಿದೆ. ಅವರು ಇಂಗ್ಲೀಷ್ ನಲ್ಲಿ ಹಂಚಿಕೊಂಡ ಪೋಸ್ಟ್ ನ ಅರ್ಥವೆಂದರೆ, ಕೇವಲ ಭಾವನಾತ್ಮಕ ಪ್ರಬುದ್ಧತೆಯನ್ನು ಹೊಂದಿರುವ ಸಂಗಾತಿಯನ್ನು ಹುಡುಕುವುದು ಮಾತ್ರವಲ್ಲ, ಬದ್ಧತೆಯನ್ನು ಹೊಂದಿರುವ ಸಂಗಾತಿಯನ್ನು ಹುಡುಕಬೇಕು. ಕೇವಲ ಸಂಬಂಧಕ್ಕೆ ಮಾತ್ರವಲ್ಲ, ತಮ್ಮನ್ನು ತಾವು ಸರಿಪಡಿಸಿಕೊಳ್ಳುವ ಮೂಲಕ ಹೆಚ್ಚಾಗಿ ಪ್ರೀತಿಸಬಹುದು, ಪ್ರಾಮಾಣಿಕವಾಗಿರಬಹುದು ಹಾಗೂ ಉತ್ತಮ ಸಂಬಂಧವನ್ನು ಹೊಂದಬಹುದು.
ಇನ್ನು ಸ್ಯಾಂಡಲ್ ವುಡ್ ಸುಂದರಿ ಮದುವೆಯಾವಾಗ ಎನ್ನುವ ವಿಚಾರ ಅಭಿಮಾನಿಗಳನ್ನು ಹೆಚ್ಚು ಕಾಡ್ತಾ ಇದೆ. ಈವರೆಗೆ ನಟಿ ರಮ್ಯಾ ಮತ್ತೆ ಸಿನಿಮಾಗೆ ಕಂಬ್ಯಾಕ್ ಮಾಡ್ಲೀ ಅನ್ನೋದು ಹಲವರ ಆಶಯವಾಗಿತ್ತು. ಅಭಿಮಾನಿಗಳ ಈ ಆಸೆಗೆ ಅಸ್ತು ಎಂದ ರಮ್ಯಾ, ಈಗಾಗಲೇ ಹಲವು ಕಥೆಗಳನ್ನು ಕೇಳಿದ್ದೇನೆ, ಒಂದೊಳ್ಳೆ ಕಥೆ ಮೂಲಕ ಬೆಳ್ಳಿತೆರೆಗೆ ಬರುತ್ತೇನೆ ಎಂದು ಘೋಷಿಸಿದ್ದಾರೆ. ಇದಂತೂ ಅಭಿಮಾನಿಗಳಿಗೆ ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಷ್ಟು ಸಂತೋಷವನ್ನು ತಂದುಕೊಟ್ಟಿದೆ. ಸದ್ಯ ಸ್ಯಾಂಡಲ್ ವುಡ್ ಪ್ರೇಮಿಗಳು ರಮ್ಯಾ ಬರುವಿಕೆಗಾಗಿ ಕಾದು ಕುಳಿತಿದ್ದಾರೆ.
Comments are closed.