ಇದೇ ಮೊದಲ ಬಾರಿಗೆ ತನ್ನದೇ ಆಭಿಮಾನಿಗಳ ಮೇಲೆ ಗರಂ ಆದ ದರ್ಶನ್, ಅಭಿಮಾನಿಗಳು ಮಾಡಿದ ಕೆಲಸಕ್ಕೆ ಗರಂ ಆಗಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬಗ್ಗೆ ನಾವು ಹೇಳಬೇಕೆಂದಿಲ್ಲ. ಅವರು ಬೇರೆ ಭಾಷೆಗಳಲ್ಲಿ ನಟಿಸಿದ್ದರು ಕೂಡ ಪರಭಾಷೆಗಳಲ್ಲಿ ಕೂಡ ಅವರಿಗೆ ಅಭಿಮಾನಿಗಳಿದ್ದಾರೆ. ಇನ್ನು ಕನ್ನಡದಲ್ಲಂತೂ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ರಾಗಿದ್ದಾರೆ. ಅದರಲ್ಲೂ ಮಾಸ್ ವಿಭಾಗದಲ್ಲಿ ದರ್ಶನ್ ರವರು ಅನಭಿಷಕ್ತ ದೊರೆ ಎಂದು ಹೇಳಬಹುದಾಗಿದೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜಜೀವನದಲ್ಲೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀರೋ ಎಂದರೆ ತಪ್ಪಾಗಲಾರದು.
ತಮ್ಮ ಬಳಿಗೆ ಸಹಾಯ ಕೇಳಿಕೊಂಡು ಬರುವಂತಹ ಎಷ್ಟೋ ಅಭಿಮಾನಿಗಳಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿ ಅದರಿಂದ ಪ್ರಚಾರವನ್ನು ಕೂಡ ಪಡೆಯುವುದಿಲ್ಲ ಅಂತಹ ಒಳ್ಳೆ ಮನಸ್ಸಿನ ವ್ಯಕ್ತಿತ್ವ ದರ್ಶನ್ ಅವರದು. ತಮ್ಮ ಅಭಿಮಾನಿಗಳನ್ನು ಪ್ರೀತಿಯಿಂದ ಸೆಲೆಬ್ರಿಟಿಗಳು ಎಂಬುದಾಗಿ ಕರೆಯುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅಭಿಮಾನಿಗಳನ್ನು ಎಷ್ಟು ಪ್ರೀತಿ ಮಾಡುತ್ತಾರೆ ಅಷ್ಟೇ ತಪ್ಪು ಮಾಡಿದಾಗ ಬುದ್ಧಿಯನ್ನು ಕೊಡಿ ಹೇಳುತ್ತಿರುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇಂದು ಗರಂ ಆಗಿರುವ ಸುದ್ದಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗರಂ ಆಗಿರುವುದು ತಮ್ಮ ಅಭಿಮಾನಿಗಳ ಮೇಲೆ. ಹಾಗಿದ್ದರೆ ನಿಜವಾಗಲೂ ನಡೆದಿರುವ ವಿಚಾರವೇನು ಎಂಬುದರ ಕುರಿತಂತೆ ತಿಳಿದುಕೊಳ್ಳೋಣ ಬನ್ನಿ.
ಹೌದು ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಗಾಡಿಯಲ್ಲಿ ಪ್ರಯಾಣಿಸುತ್ತಿರಬೇಕಾದರೆ ಅಭಿಮಾನಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಗಾಡಿಯಿಂದ ತಮ್ಮ ವಾಹನಗಳಲ್ಲಿ ಗುಂಪುಗುಂಪಾಗಿ ಬಂದಿದ್ದರು. ತಮ್ಮ ನೆಚ್ಚಿನ ನಟನನ್ನು ಕಾಣಲು ಅವರ ಜೊತೆಗೆ ಸೆಲ್ಫಿ ಪಡೆದುಕೊಳ್ಳಲು ಈ ಹರಸಾಹಸವನ್ನು ಅವರು ಮಾಡುತ್ತಿದ್ದರು. ಗಾಡಿಯಿಂದ ಇಳಿದ ದರ್ಶನ್ ರವರು ನಿಮ್ಮಿಂದಾಗಿ ಬೇರೆ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ ಹೇಗೆ ಮಾಡಬೇಡಿ ಎಂಬುದಾಗಿ ಕಾಳಜಿಯಿಂದಲೇ ಬೈದಿದ್ದಾರೆ, ಅದೇ ಸಮಯದಲ್ಲಿ ದಯವಿಟ್ಟು ಇನ್ನು ಮುಂದೆ ಈ ರೀತಿ ಮಾಡಬೇಡಿ ಎಂದಿದ್ದಾರೆ. ತಮ್ಮ ನೆಚ್ಚಿನ ನಟ ಹೇಳಿದ ಮಾತನ್ನು ಶಿರಸಾವಹಿಸಿ ಪಾಲಿಸಿ ಮುಂದೆ ಹೀಗೆ ಮಾಡುವುದಿಲ್ಲ ಎಂಬುದಾಗಿ ಕ್ಷಮೆ ಕೇಳಿದ್ದಾರೆ. ಹಲವಾರು ಕಾರ್ಯಕ್ರಮಗಳ ವೇದಿಕೆಯಲ್ಲಿ ಕೂಡ ಅಭಿಮಾನಿಗಳಿಗೆ ಈ ರೀತಿ ಮಾಡಬೇಡಿ ಎಂಬುದಾಗಿ ದರ್ಶನ್ ಅವರು ಹೇಳಿದ್ದನ್ನು ಕೂಡ ನಾವಿಲ್ಲಿ ನೆನಪಿಸಿಕೊಳ್ಳಬಹುದು.
Comments are closed.