ನಿಮ್ಮ ಮೊಬೈಲ್ ನಲ್ಲಿ ನೆಟ್ವರ್ಕ್ ಸಮಸ್ಯೆಯಿಂದ ಜಿಯೋ ನೆಟ್ವರ್ಕ್ ಸ್ಲೋ ಆಗಿದ್ಯಾ?? ಜಸ್ಟ್ ಹೇಗೆ ಸಾಕು, ನೆಟ್ವರ್ಕ್ ಸರಿಹೋಗಿ ಸ್ಪೀಡ್ ಹೆಚ್ಚಾಗುತ್ತದೆ.
ನಮಸ್ಕಾರ ಸ್ನೇಹಿತರೇ ಒಳ್ಳೆಯ ರೀತಿಯ ಆಫರ್ ನಿಂದಾಗಿ ಹಾಗೂ ಉತ್ತಮ ಗುಣಮಟ್ಟದ ಇಂಟರ್ನೆಟ್ ಸೇವೆಯಿಂದಾಗಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ರಿಲಯನ್ಸ್ ಸಂಸ್ಥೆ ಅಗ್ರಸ್ಥಾನದಲ್ಲಿ ಕಾಣಸಿಗುತ್ತದೆ. ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ದಿನದಿಂದಲೂ ಕೂಡ ಜಿಯೋ ಸಂಸ್ಥೆ ಇಂದಿನವರೆಗೂ ಅನಭಿಷಕ್ತ ರಾಜನಾಗಿ ಮೆರೆಯುತ್ತಿದೆ ಎಂದರೆ ತಪ್ಪಾಗಲಾರದು. ಅದಾಗಿಯೂ ಕೂಡ ನಿಮ್ಮ ಮೊಬೈಲ್ನಲ್ಲಿ ಕೆಲವೊಮ್ಮೆ ಜಿಯೋ ನೆಟ್ವರ್ಕ್ ನಿಧಾನಗತಿಯಲ್ಲಿ ಬರುವುದನ್ನು ಗಮನಿಸಿರುತ್ತೀರಿ.
ಕೆಲವೊಮ್ಮೆ ನೆಟ್ವರ್ಕ್ ಕವರೇಜ್ ನಲ್ಲಿ ಪ್ರಾಬ್ಲಮ್ ಇರುತ್ತದೆ. ಆದರೆ ಕೇವಲ ನೆಟ್ವರ್ಕ್ ಸಮಸ್ಯೆ ಮಾತ್ರವಲ್ಲದೆ ನಿಮ್ಮ ಫೋನಿನಲ್ಲಿ ಕೂಡ ಕೆಲವೊಂದು ಸಮಸ್ಯೆಗಳು ಇರುತ್ತವೆ. ಹೌದು ಕೆಲವೊಮ್ಮೆ ನಿಮ್ಮ ಫೋನಿನ ಎಪಿಎನ್ ಸೆಟ್ಟಿಂಗ್ ಗಳು ಸರಿಯಾಗಿಲ್ಲ ಎಂದರೆ ಇತರ ಸಮಸ್ಯೆಗಳನ್ನು ಅನುಭವಿಸುವುದ ಕಾಮನ್. ಎಪಿಎನ್ ಸೆಟ್ಟಿಂಗ್ ಅನ್ನು ಹೇಗೆ ಮಾಡಬಹುದು ಎನ್ನುವುದರ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇವೆ ಬನ್ನಿ. ಮೊದಲಿಗೆ ನಿಮ್ಮ ಸ್ಮಾರ್ಟ್ ಫೋನ್ ನ ಸೆಟ್ಟಿಂಗ್ ಗೆ ಹೋಗಬೇಕು. ಮೊಬೈಲ್ ನೆಟ್ವರ್ಕ್ ಗೆ ಹೋಗಿ ಜಿಯೋ ಸಿಂ ಸ್ಲೊಟ್ ಗೆ ತೆರಳಿ ಎಪಿಎನ್ ಅನ್ನು ತೆರೆಯಬೇಕು.
ನಂತರ ಅಲ್ಲಿ ಕಾಣಿಸುವ ರಿಸೆಟ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಮೊಬೈಲ್ ನೆಟ್ವರ್ಕ್ ಆಪ್ಶನ್ ಗೆ ಹೋದ ನಂತರ ಅಲ್ಲಿ ಕಾಣುವ ಸಿಂ ಹಾಗೂ ಮೊಬೈಲ್ ನೆಟ್ವರ್ಕ್ ವಿಭಾಗಕ್ಕೆ ಹೋಗಿ ಜಿಯೋ 4ಜಿ ಸಿಮ್ ಆಯ್ಕೆ ಮಾಡಿದ ನಂತರ ಆಕ್ಸೆಸ್ ಪಾಯಿಂಟ್ಗಳನ್ನು ಆಕೆ ಮಾಡಿದ ನಂತರ ಡಿಪಾರ್ಟ್ ನಲ್ಲಿ ಇಂಟರ್ನೆಟ್ ಜಿಯೋ ನೆಟ್ ಎನ್ನುವುದನ್ನು ನೀವು ನೋಡಬಹುದಾಗಿದೆ. ಈ ಎಪಿಎನ್ ನಲ್ಲಿ jionet ಎಂದು ಹೊಂದಿಸಿ. ಈಗ ಮಾಡಿದ ನಂತರ ಸರಿ ಬಟನನ್ನು ಪ್ರೆಸ್ ಮಾಡಿ. ಇದೀಗ ಎಪಿಎನ್ ಅನ್ನು ಮೊಬೈಲ್ ಡೇಟಾ ಪ್ರವೇಶಕ್ಕಾಗಿ ಕಾನ್ಫಿಗರ್ ಮಾಡಲಾಗಿರುತ್ತದೆ. ಇದಾದ ನಂತರ ನೀವು ಜಿಯೋ ಇಂಟರ್ನೆಟ್ ಸೇವೆಯನ್ನು ವೇಗವಾಗಿ ಪಡೆದುಕೊಳ್ಳಬಹುದಾಗಿದೆ. ಆಪಲ್ ಫೋನ್ ಗಳಲ್ಲಿ ಇದನ್ನು ಮಾಡುವ ಅಗತ್ಯವಿಲ್ಲ ಯಾಕೆಂದರೆ ಮೊದಲಿನಿಂದಲೇ ಡಿವೈಸ್ ಇದನ್ನು ಕಾನ್ಫಿಗರ್ ಮಾಡಿರುತ್ತದೆ.
Comments are closed.