Neer Dose Karnataka
Take a fresh look at your lifestyle.

ಶಿಖರ್ ಅಲ್ಲ, ವಿದೇಶಿ ಆಟಗಾರನೂ ಅಂತೂ ಅಲ್ಲವೇ ಅಲ್ಲ,ಪಂಜಾಬ್ ನಾಯಕನಾಗುತ್ತಿರುವ ಅನನುಭವಿ ಆಟಗಾರ ಯಾರು ಗೊತ್ತೇ??

36

ನಮಸ್ಕಾರ ಸ್ನೇಹಿತರೇ ಇನ್ನೇನು ಕೆಲವೇ ದಿನಗಳಲ್ಲಿ ಭಾರತ ದೇಶದ ಕ್ರಿಕೆಟ್ ಹಬ್ಬವಾಗಿರುವ ಟಾಟಾ ಐಪಿಎಲ್ ಇದೇ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್ ಅನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಹೌದು ಇನ್ನು ಈಗಾಗಲೇ ಎಲ್ಲಾ ತಂಡಗಳು ಕೂಡ ಸಾಕಷ್ಟು ಬದಲಾವಣೆಗಳಿಂದ ತುಂಬಿಕೊಂಡಿದೆ. ಅದರಲ್ಲೂ ಪ್ರಮುಖವಾಗಿ ಯಾರನ್ನು ಕ್ಯಾಪ್ಟನ್ ಮಾಡುವುದು ಎನ್ನುವುದು ಕೂಡ ಗೊಂದಲಮಯ ವಿಚಾರವಾಗಿದೆ. ಇನ್ನು ಇಂದು ನಾವು ಮಾತನಾಡಲು ಹೊರಟಿರುವುದು ಪಂಜಾಬ್ ಕಿಂಗ್ಸ್ ತಂಡದ ಕುರಿತಂತೆ. ಪಂಜಾಬ್ ಕಿಂಗ್ಸ್ ತಂಡ ಕೂಡ ನಾಯಕನ ಹುಡುಕಾಟದಲ್ಲಿತ್ತು.

ಯಾಕೆಂದರೆ ಈಗಾಗಲೇ ತಂಡವನ್ನು ನಾಯಕನನ್ನಾಗಿ ಮುನ್ನಡೆಸಿದ ಕೆ ಎಲ್ ರಾಹುಲ್ ಅವರು ಈಗಾಗಲೇ ತಂಡವನ್ನು ಬಿಟ್ಟು ಹೊರನಡೆದಿದ್ದಾರೆ. ಈ ಬಾರಿ ಶಿಖರ್ ಧವನ್ ಸೇರಿದಂತೆ ಹಲವಾರು ಖ್ಯಾತನಾಮರನ್ನು ಪಂಜಾಬ್ ಕಿಂಗ್ಸ್ ತಂಡ ಖರೀದಿಸಿತ್ತು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಶಿಖರ್ ಧವನ್ ರವರಿಗೆ ನಾಯಕತ್ವದ ಅನುಭವ ಚೆನ್ನಾಗಿದೆ. ಆದರೆ ಈ ಬಾರಿ ಪಂಜಾಬ್ ಕಿಂಗ್ಸ್ ತಂಡ ಶಿಖರ್ ಧವನ್ ಅವರನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತಿಲ್ಲ. ಹಾಗಾದ್ರೆ ಯಾರಾದರೂ ವಿದೇಶಿ ಆಟಗಾರನನ್ನು ನಾಯಕನನ್ನಾಗಿ ಆಯ್ಕೆ ಮಾಡುತ್ತಿದೆಯಾ ಎಂದು ನೋಡಿದರೆ ಊಹೂ ಅದು ಕೂಡ ಸಾಧ್ಯವಾಗುತ್ತಿಲ್ಲ. ಹಾಗಾದ್ರೆ ಈಬಾರಿ ಯಾರು ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನುವ ಕುರಿತಂತೆ ಪಿ ಟಿ ಐ ಮೂಲಗಳಿಂದ ಈಗ ಕೆಲ ಮಾಹಿತಿಗಳು ಹೊರ ಬಂದಿದ್ದು ಇದು ಬಹುತೇಕ ಫೈನಲ್ ಆದಂತಿದೆ.

ಹೌದು ಪಿಟಿಐ ಮೂಲಗಳ ಪ್ರಕಾರ ಈ ಬಾರಿ ಪಂಜಾಬಿನ ತಂಡವನ್ನು ಮುನ್ನಡೆಸುತ್ತಿರುವುದು ನಮ್ಮ ಕರ್ನಾಟಕದ ಹೆಮ್ಮೆಯ ಕ್ರಿಕೆಟಿಗ ಆಗಿರುವ ಮಯಂಕ್ ಅಗರ್ವಲ್. ಖಂಡಿತವಾಗಿ ಇದೊಂದು ಯೋಗ್ಯವಾದ ನಿರ್ಧಾರ ಎಂದರೆ ತಪ್ಪಾಗಲಾರದು. ಪಂಜಾಬಿನ ತಂಡದ ಪರವಾಗಿ ಹಲವಾರು ವರ್ಷಗಳಿಂದ ಬ್ಯಾಟ್ ಬೀಸುತ್ತಿರುವ ಮಯಾಂಕ್ ಅಗರ್ವಾಲ್ ರವರಿಗೆ ತಂಡದ ಕುರಿತಂತೆ ಬಹುತೇಕ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳುವಷ್ಟು ಸೂಕ್ಷ್ಮ ಅಂಶಗಳನ್ನು ತಿಳಿದುಕೊಂಡಿರುತ್ತಾರೆ. ಅವರಿಗೆ ಇಲ್ಲಿಯವರೆಗೆ ಯಾವುದೇ ಮಾದರಿಯ ಕ್ರಿಕೆಟ್ ನಲ್ಲಿ ನಾಯಕತ್ವದ ಅನುಭವ ಇಲ್ಲದಿದ್ದರೂ ಕೂಡ ಕ್ರಿಕೆಟಿಗನಾಗಿ ಅವರು ತಂಡದ ಆಟಗಾರರ ಅಂಶಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ಈ ಬಾರಿಯ ಐಪಿಎಲ್ ಮಾಯಾಂಕ್ ಅಗರವಾಲ್ ರವರಿಗೆ ಮೊದಲ ನಾಯಕತ್ವದ ಸೀಸನ್ ಆಗಿ ಮಾರ್ಪಡಲಿದೆ.

Leave A Reply

Your email address will not be published.