Neer Dose Karnataka
Take a fresh look at your lifestyle.

ಮಗಳ ಹುಟ್ಟುಹಬ್ಬವನ್ನು ಕಿಚ್ಚ ಸುದೀಪ್ ಹಾಗು ಪತ್ನಿ ಪ್ರಿಯ ಸುದೀಪ್ ವಿಶೇಷವಾಗಿ ಹೇಗೆ ಆಚರಣೆ ಮಾಡಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ನಟನೆಯ ವಿಚಾರಕ್ಕೆ ಬಂದರೆ ನಮ್ಮ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರನ್ನು ಮೀರಿಸುವ ಇನ್ನೊಬ್ಬ ನಟ ಇಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ತಮ್ಮ ನಟನೆಯ ವಿಚಾರದಿಂದಲೇ ಇಂದು ಪಂಚ ಭಾಷೆಗಳಲ್ಲಿ ತಮ್ಮ ಛಾಪನ್ನು ಮೂಡಿಸಿರುವುದು. ಯಾವುದೇ ಪಾತ್ರಗಳನ್ನು ಕೂಡ ನೀರು ಕುಡಿದಷ್ಟು ಸುಲಭವಾಗಿ ನಟಿಸಬಲ್ಲ ರು ಎನ್ನುವುದಕ್ಕೆ ರಾಜಮೌಳಿ ನಿರ್ದೇಶನದ ಈಗ ಚಿತ್ರವೇ ಜೀವಂತ ಸಾಕ್ಷಿ ಅಲ್ಲವೇ.

ಇನ್ನು ಇತ್ತೀಚೆಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣದ ಕುರಿತಂತೆ ಜಾಗತಿಕವಾಗಿ ಹಲವಾರು ನಿರೀಕ್ಷೆಗಳು ಮೂಡಿವೆ. ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೇರಳದ ಮೂಲದವರಾಗಿರುವ ಪ್ರಿಯಾ ರಾಧಾಕೃಷ್ಣನ್ ಅವರನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಮದುವೆಯಾಗಿದ್ದಾರೆ. ಇನ್ನು ಇವರಿಗೆ ಸಾನ್ವಿ ಅನ್ನುವ ಮಗಳು ಕೂಡ ಇದ್ದಾರೆ. ಹಲವಾರು ಸಂದರ್ಶನಗಳಲ್ಲಿ ಸಾನ್ವಿ ಅವರೇ ನನ್ನ ಜೀವನದ ಅಮೂಲ್ಯ ಭಾಗ ಎನ್ನುವುದಾಗಿ ಸುದೀಪ್ ರವರು ಹೇಳಿದ್ದಾರೆ.

ಇನ್ನು ತಮ್ಮ ಮಗಳ 17ನೇ ವರ್ಷದ ಜನ್ಮದಿನಾಚರಣೆಯನ್ನು ಇತ್ತೀಚಿಗೆ ವಿಶೇಷವಾಗಿ ಆಚರಿಸಿದ್ದಾರೆ. ಹೌದು ಗೆಳೆಯರೆ ಕಳೆದ ಬಾರಿ ಮಗಳಿಗಾಗಿ ಒಂದು ಹಾಡನ್ನು ಜನ್ಮದಿನದ ಉಡುಗೊರೆಯಾಗಿ ಮಾಡಿದ್ದರು. ಈ ಬಾರಿ ತಮ್ಮ ಕೈಯಾರೆ ಕೇಕನ್ನು ತಯಾರಿಸಿ ಮಗಳೊಂದಿಗೆ ವಿಶೇಷವಾಗಿ ಜನ್ಮದಿನಾಚರಣೆ ಆಚರಿಸಿಕೊಂಡಿದ್ದಾರೆ. ಇನ್ನು ಮಗಳು ಸಾನ್ವಿ ಚಿತ್ರಕಲೆ ಹಾಗೂ ಹಾಡುಗಾರಿಕೆಯಲ್ಲಿ ಈಗಾಗಲೇ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಅಪ್ಪನಂತೆ ಮಗಳು ಕೂಡ ಪ್ರತಿಭಾನ್ವಿತೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

Comments are closed.