ಜಿಯೋ ಗೆ ಮತ್ತೊಮ್ಮೆ ಠಕ್ಕರ್, ಅಧಿಕ ಡೇಟಾ ಪ್ಲಾನ್ ಬಿಡುಗಡೆ ಮಾಡಿದ ಏರ್ಟೆಲ್, ದರ ಕಡಿಮೆ ಬೆನ್ನಲ್ಲೇ ಈದೀಗ ಮತ್ತೊಂದು ಆಫರ್. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ನಂಬರ್ ವನ್ ಸ್ಥಾನಕ್ಕಾಗಿ ಜಿಯೋ ಹಾಗೂ ಏರ್ಟೆಲ್ ಸಂಸ್ಥೆಗಳ ನಡುವೆ ಜಿದ್ದಾಜಿದ್ದಿ ತಾರಕಕ್ಕೇರಿದೆ ಎಂದು ಹೇಳಬಹುದಾಗಿದೆ.
ಏರ್ಟೆಲ್ ಸಂಸ್ಥೆ ರಿಚಾರ್ಜ್ ಪ್ಲಾನ್ ಗಳ ಬೆಲೆಯನ್ನು ಏರಿಸಿದರು ಕೂಡ ಅವುಗಳ ಜೊತೆಗೆ ಹಲವಾರು ಆಕರ್ಷಕ ಆಫರ್ ಗಳನ್ನು ಕೂಡ ಗ್ರಾಹಕರಿಗೆ ನೀಡುವ ಮೂಲಕ ಆಕರ್ಷಿಸಲು ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಎರಡು ಆಕರ್ಷಕ ಆಫರ್ ಗಳನ್ನು ತನ್ನ ಗ್ರಾಹಕರಿಗೆ ಪರಿಚಯಿಸಿದೆ. ಅವುಗಳ ಕುರಿತಂತೆ ಇಂದಿನ ಲೇಖನಿಯಲ್ಲಿ ವಿವರವಾಗಿ ತಿಳಿಯೋಣ ಹಾಗೂ ನೀವು ಒಂದು ವೇಳೆ ಏರ್ಟೆಲ್ ಗ್ರಾಹಕರಾಗಿದ್ದರೆ ಇದನ್ನು ಪ್ರಯತ್ನಿಸಬಹುದಾಗಿದೆ.
599 ರೂಪಾಯಿ ರೀಚಾರ್ಜ್ ಪ್ಲಾನ್; ಈ ಪ್ರಿಪೇಯ್ಡ್ ಪ್ಲಾನ್ ನಲ್ಲಿ 28 ದಿನಗಳ ವ್ಯಾಲಿಡಿಟಿ ಇರುತ್ತದೆ. ಎಫ್ ಯು ಪಿ ಇಲ್ಲದೆ ಅನ್ಲಿಮಿಟೆಡ್ ಕರೆಗಳನ್ನು ಮಾಡಬಹುದಾಗಿದೆ. ದೈನಂದಿನ 3gb ಇಂಟರ್ನೆಟ್ ಡೇಟಾ ಹಾಗೂ 100 ಉಚಿತ ಎಸ್ಎಂಎಸ್ ಗಳು ಕೂಡ ಸಿಗಲಿದೆ. ಹಾಟ್ ಸ್ಟಾರ್ ಏರ್ಟೆಲ್ ಎಕ್ಸ್ ಸ್ಟ್ರೀಮ್ ವಿಂಕ್ ಮ್ಯೂಸಿಕ್ ಫಾಸ್ಟ್ಯಾಗ್ ಕೂಡ ದೊರೆಯಲಿದೆ.
666 ರೂಪಾಯಿಗಳ ಪ್ಲಾನ್; ಈ ರಿಚಾರ್ಜ್ ಪ್ಲಾನ್ 77 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದ್ದು ಇಲ್ಲಿ ಕೂಡ ಅನಿಯಮಿತ ಕರೆಗಳು ಲಭ್ಯವಿರುತ್ತದೆ. ಪ್ರತಿದಿನ 1.5 ಜಿಬಿ ಇಂಟರ್ನೆಟ್ ಡೇಟಾ ಹಾಗೂ 100 ಮೆಸೇಜ್ ಗಳನ್ನು ಕೂಡ ಉಚಿತವಾಗಿ ಪಡೆಯಲಿದ್ದಾರೆ. ಏರ್ಟೆಲ್ ನ ಎಕ್ಸ್ ಸ್ಟ್ರೀಮ್ ವಿಂಕ್ ಮ್ಯೂಸಿಕ್ ಹಾಗೂ ಫಾಸ್ಟ್ಯಾಗ್ ನಲ್ಲಿ ಕ್ಯಾಶ್ಬ್ಯಾಕ್ ಸೇವೆಗಳನ್ನು ಪಡೆಯ ಬಹುದಾಗಿದೆ. ಇನ್ನು ಮತ್ತೊಂದು ಪ್ಲಾನ್ ಕೂಡ ಇದರಲ್ಲಿ ಕಂಡುಬರುತ್ತದೆ. ಇದು 449 ರೂಪಾಯಿಯ ಪ್ಲಾನ್ ಆಗಿದೆ. ಈ 2 ಆಫರ್ ಗಳಲ್ಲಿ ಸಿಗುವಂತಹ ಎಲ್ಲಾ ಆಫರ್ಗಳು ಅದೇ ರೀತಿಯಲ್ಲಿ ಸಿಗಲಿದ್ದು. ಇಲ್ಲಿರುವ ಬದಲಾವಣೆ ಎಂದರೆ ಇದು 28 ದಿನಗಳ ಗಾಲಿ ಡ್ಯೂಟಿಯನ್ನು ಹೊಂದಿದ್ದು ಇಲ್ಲಿ ದೈನಂದಿನ 2.5 ಜಿಬಿ ಡೇಟಾವನ್ನು ಪಡೆಯಬಹುದಾಗಿದೆ. ಏರ್ಟೆಲ್ ನ ಆಫರ್ ಗಳ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.
Comments are closed.