ಸೂರ್ಯ ಹಾಗೂ ದೀಪಕ್ ನಂತರ ಗಾಯಕ್ಕೆ ತುತ್ತಾದ ರಿತುರಾಜ್ ಗಾಯಕ್ವಾಡ್, ಯುವ ಕನ್ನಡಿಗನಿಗೆ ತಂಡದಲ್ಲಿ ಅವಕಾಶ, ಆ ಅದೃಷ್ಟಶಾಲಿ ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭಾರತೀಯ ಕ್ರಿಕೆಟ್ ತಂಡ ಈಗಾಗಲೇ ಈ ಬಾರಿ ರೋಹಿತ್ ಶರ್ಮ ರವರ ನಾಯಕತ್ವದಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಗಮನಾರ್ಹ ಪ್ರದರ್ಶನವನ್ನು ನೀಡುತ್ತಿದೆ. ಆದರೆ ಇದರ ನಡುವಲ್ಲಿ ಹಲವಾರು ಆಟಗಾರರ ಗಾಯದ ಸಮಸ್ಯೆ ಕೂಡ ತಂಡವನ್ನು ಬೆಂಬಿಡದೆ ಕಾಡುತ್ತಿದೆ. ತಂಡ ಗೆಲುವಿನ ಲಯಕ್ಕೆ ಮರಳಿದ್ದರು ಕೂಡ ಆಟಗಾರರು ಈ ರೀತಿಯ ಸಮಸ್ಯೆಗಳನ್ನು ಪದೇಪದೇ ಎದುರಿಸುತ್ತಿರುವುದು ತಂಡಕ್ಕೆ ಚಿಂತಾದಾಯಕವಾಗಿದೆ.
ಈಗಾಗಲೇ ಸೂರ್ಯಕುಮಾರ್ ಯಾದವ್ ಹಾಗೂ ದೀಪಕ್ ಚಹರ್ ರವರು ಗಾ’ಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಈ ಸಾಲಿಗೆ ಮತ್ತೊಬ್ಬ ಉದಯೋನ್ಮುಖ ಕ್ರಿಕೆಟ್ ಆಟಗಾರ ಸೇರಿದ್ದಾರೆ. ಹೌದು ಭರವಸೆ ಮೂಡಿಸಿರುವಂತಹ ಆರಂಭಿಕ ಆಟಗಾರನಾಗಿರುವ ರಿತುರಾಜ್ ಗಾಯಕ್ವಾಡ್ ಕೂಡ ಇದೇ ಸಮಸ್ಯೆಯಿಂದ ಈಗ ತಂಡದಿಂದ ಹೊರಗುಳಿದಿದ್ದಾರೆ. ಇನ್ನು ಈಗ ಅರಿತು ರಾಜ ಗಾಯಕ್ವಾಡ್ ರವರು ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರನಾಗಿ ತಮ್ಮ ಕರಿಯರ್ ಅನ್ನು ಪ್ರಾರಂಭಿಸುವ ಹೊತ್ತಿನಲ್ಲಿ ಇಂತಹ ಸಮಸ್ಯೆಗಳಿಂದ ತಂಡದಿಂದ ಹೊರಗುಳಿದಿರುವುದು ನಿಜಕ್ಕೂ ಕೂಡ ಬೇಸರದ ವಿಚಾರವಾಗಿದೆ.
ಆದರೆ ಈಗ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟಿ-20 ಸರಣಿಯಲ್ಲಿ ರಿತುರಾಜ್ ಗಾಯಕ್ವಾಡ್ ರವರ ಸ್ಥಾನಕ್ಕೆ ಕನ್ನಡಿಗನೊಬ್ಬ ಆಯ್ಕೆಯಾಗಿದ್ದಾರೆ. ಹೌದು ರಿತುರಾಜ್ ಗಾಯಕ್ವಾಡ ರವರ ಆಸ್ಥಾನಕ್ಕೆ ಬದಲಿ ಆಟಗಾರನಾಗಿ ಹೆಮ್ಮೆಯ ಕನ್ನಡಿಗ ಮಯಂಕ್ ಅಗರವಾಲ್ ಅವರು ಆಯ್ಕೆಯಾಗಿದ್ದಾರೆ. ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಎರಡು ಟಿ20 ಪಂದ್ಯಗಳನ್ನು ಗೆದ್ದಿದ್ದು ಕ್ಲೀನ್ ಸ್ವೀಪ್ ಮಾಡುವ ಇರಾದೆಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಇನ್ನೇನು ಮುಂದಿನ ತಿಂಗಳ ಅಂತ್ಯದಲ್ಲಿ ಐಪಿಎಲ್ ಪಂದ್ಯಗಳಿಗೂ ಕೂಡ ಕ್ರಿಕೆಟಿಗರ ಸಿದ್ಧರಾಗಬೇಕಾಗಿದೆ.
Comments are closed.