ಕೋಟಿ ಕೋಟಿ ಗಳಿಸುತ್ತಿರುವ ಪವನ್ ಸಿನಿಮಾ ತಡೆಯಲು ಕುದ್ದು ಮುಖ್ಯಮಂತ್ರಿ ಒಂದು ದಿನಕ್ಕೆ ಎಷ್ಟು ಕೋಟಿ ಖರ್ಚು ಮಾಡುತ್ತಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಅವರ ಸಿನಿಮಾ ಭೀಮ್ಲಾ ನಾಯಕ್ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದ್ದು ಮೊದಲ ದಿನವೇ ವಿಶ್ವಾದ್ಯಂತ 63 ಕೋಟಿಗೂ ಅಧಿಕ ಬಾಕ್ಸಾಫೀಸ್ ಕಲೆಕ್ಷನ್ ಮಾಡಿದೆ. ಹೌದು ಮಲಯಾಳಂ ಚಿತ್ರದ ರಿಮೇಕ್ ಆಗಿದ್ದರೂ ಕೂಡ ಕಲೆಕ್ಷನ್ ವಿಚಾರದಲ್ಲಿ ಹಿಂದೆಂದು ಕಂಡಿರದಂತಹ ಕಲೆಕ್ಷನ್ ವಿಚಿತ್ರ ಮಾಡುತ್ತಿರುವುದು ನಿಜಕ್ಕೂ ಕೂಡ ಚಿತ್ರದ ಗೆಲುವಿನ ಸಂಕೇತವಾಗಿದೆ. ಆದರೆ ಈಗ ಆಂಧ್ರಪ್ರದೇಶದಲ್ಲಿ ಚಿತ್ರದ ಸೋಲಿಗಾಗಿ ಒಬ್ಬ ವ್ಯಕ್ತಿ ಕಾಯುತ್ತಿದ್ದಾರೆ ಎಂದು ಹೇಳಬಹುದಾಗಿದೆ.
ಹೌದು ಅದು ಇನ್ಯಾರು ಅಲ್ಲ ಪವನ್ ಕಲ್ಯಾಣ್ ರವರ ರಾಜಕೀಯ ಕ್ಷೇತ್ರದ ವೈರಿ ಯಾಗಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿರುವ ಜಗನ್ಮೋಹನ ರೆಡ್ಡಿ. ಈ ಹಿಂದೆ ಪವನ್ ಕಲ್ಯಾಣ್ ನಟನೆಯ ವಕೀಲ್ ಸಾಬ್ ಚಿತ್ರ ಬಿಡುಗಡೆಯಾದಾಗಲೂ ಕೂಡ ಹಲವಾರು ರೀತಿಯ ತೊಂದರೆಯನ್ನು ಜಗನ್ಮೋಹನ್ ರೆಡ್ಡಿ ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದರು. ಈಗ ಮತ್ತೊಮ್ಮೆ ಇದೇ ರೀತಿಯ ಆಟಾಟೋಪಗಳನ್ನು ಭೀಮ್ಲಾ ನಾಯಕ್ ಚಿತ್ರದ ಕುರಿತಂತೆ ಮಾಡುತ್ತಿದ್ದಾರೆ ಎಂಬುದಾಗಿ ಖುಲಾಸೆಯಾಗಿದೆ. ಹಾಗಿದ್ದರೆ ಅಷ್ಟಕ್ಕೂ ಅವರು ಮಾಡುತ್ತಿರುವುದು ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಚಿತ್ರದ ಗೆಲುವಿಗೆ ಆಂಧ್ರಪ್ರದೇಶದ ಬಾಕ್ಸಾಫೀಸ್ ಕಲೆಕ್ಷನ್ ಕೂಡ ನಿರ್ಣಾಯಕ ಪಾತ್ರ ವಹಿಸಿದೆ. ಹೀಗಾಗಿ ಜಗನ್ಮೋಹನ ರೆಡ್ಡಿ ಆಂಧ್ರಪ್ರದೇಶದಲ್ಲಿ ಚಿತ್ರಮಂದಿರಗಳ ಮೇಲೆ ಹಲವಾರು ನಿಯಮಗಳನ್ನು ಹೇರಿದ್ದು ಚಿತ್ರಮಂದಿರಗಳನ್ನು ಸೂಕ್ಷ್ಮ ಪ್ರದೇಶ ಎಂಬುದಾಗಿ ಘೋಷಿಸಿದ್ದಾರೆ. ಚಿತ್ರದ ಕಲೆಕ್ಷನ್ ಕಡಿಮೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಟಿಕೆಟ್ ದರವನ್ನು ಕೂಡ ಕಡಿಮೆ ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಕುರಿತಂತೆ ಯಾರೂ ವಿರುದ್ಧವಾಗಿ ಧ್ವನಿ ಎತ್ತಿದರೆ ಅವರನ್ನು ಚಿತ್ರಮಂದಿರಗಳಲ್ಲಿ ನಿಯಂತ್ರಿಸಲು ಸಿಆರ್ಪಿಎಫ್ ದಳವನ್ನು ಹಾಗೂ ಪ್ರತ್ಯೇಕ ದಳವನ್ನು ಕೂಡ ನಿಯೋಜಿಸಲಾಗಿದೆ. ಇದಕ್ಕಾಗಿ ಬರೋಬ್ಬರಿ ದೈನಂದಿನ ಮೂರು ಕೋಟಿ ರೂಪಾಯಿ ಅನ್ನು ಜಗನ್ ಮೋಹನ್ ನೇತೃತ್ವದ ಸರ್ಕಾರ ಖರ್ಚು ಮಾಡುತ್ತಿದೆ. ನಿಜಕ್ಕೂ ಕೂಡ ಇದು ಒಪ್ಪಲಾಗದಂತಹ ವಿಚಾರವಾಗಿದ್ದು ಒಬ್ಬ ಮುಖ್ಯಮಂತ್ರಿಯಾಗಿ ರಾಜಕೀಯ ವೈಷಮ್ಯವನ್ನು ಈ ರೀತಿ ತೀರಿಸಿ ಕೊಳ್ಳುತ್ತಿರುವುದು ಖೇದಕರವಾಗಿದೆ.