ಫುಲ್ ಟೈಮ್ ಎಂಜಿನಿಯರಿಂಗ್ ಆಗಿದ್ದುಕೊಂಡು ರಾತ್ರಿ ವೇಳೆ ಬಿರಿಯಾನಿ ಮಾರಿ ಇವರು ಸಂಪಾದಿಸ್ತಿರೋದು ಎಷ್ಟು ಗೊತ್ತಾ??
ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕೂಡ ಸ್ವಾವಲಂಬಿ ಜೀವನದ ಆಸೆ ಖಂಡಿತವಾಗಿ ಇದ್ದೇ ಇರುತ್ತದೆ. ಸ್ವಾವಲಂಬಿ ಜೀವನ ಎಂದರೆ ಕೆಲಸವನ್ನು ಹುಡುಕಿ ಅದರಿಂದ ಬರುವ ಸಂಭಾವನೆಯಿಂದ ಯಾರ ಹಂಗೂ ಇಲ್ಲದೆ ಜೀವನವನ್ನು ನಡೆಸುವುದು. ಅಂತಹ ಜೀವನವನ್ನು ಎಲ್ಲರೂ ಕೂಡ ಆಸೆಪಡುತ್ತಾರೆ.
ಕೆಲವರು ಕೆಲಸದ ಮೂಲಕ ತಮ್ಮ ಜೀವನವನ್ನು ನಡೆಸಿದರೆ ಇನ್ನು ಕೆಲವರು ವ್ಯವಹಾರ ವ್ಯಾಪಾರದ ಮೂಲಕ ನಡೆಸುತ್ತಾರೆ. ಬಹುತೇಕ ಎಲ್ಲರಿಗೂ ತಮ್ಮದೇ ಆದಂತಹ ವ್ಯವಹಾರವನ್ನು ಮಾಡಬೇಕೆಂಬ ಆಸೆ ಇದ್ದೇ ಇರುತ್ತದೆ. ಕೆಲವರು ತಾವು ಎಷ್ಟು ಶಿಕ್ಷಣ ಮಾಡಿದ್ದಾರೆ ಅದಕ್ಕೆ ದೊರಕುವಂತಹ ಕೆಲಸ ಮಾಡಿಕೊಂಡು ನಾರ್ಮಲ್ ಜೀವನವನ್ನು ಜೀವಿಸುತ್ತಿರುತ್ತಾರೆ. ಇನ್ನು ಕೆಲವರು ವ್ಯಾಪಾರಕ್ಕಾಗಿ ಎಲ್ಲಾ ತಯಾರಿಗಳನ್ನು ನಡೆಸಿಕೊಂಡು ರಿಸ್ಕ್ ಮೇಲೆ ವ್ಯಾಪಾರ ನಡೆಸಿ ಯಶಸ್ಸನ್ನು ಕೂಡ ಕಾಣುತ್ತಾರೆ.
ಇಂದು ನಾವು ಹೇಳ ಹೊರಟಿರುವ ಕಥೆ ಕೂಡ ಇದೇ ರೀತಿ ಸ್ಪೂರ್ತಿದಾಯಕ ವಾದದ್ದು. ಇದು ನಡೆದಿರುವುದು ಒಡಿಶಾದಲ್ಲಿ. ಸುಮಿತ್ ಹಾಗೂ ಪ್ರಿಯಂ ಎನ್ನುವ ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ ಗಳು 2021 ರಿಂದ ತಮ್ಮ ಕೆಲಸ ಮುಗಿದ ನಂತರ ರಾತ್ರಿ ವೇಳೆಗೆ ಇಂಜಿನಿಯರ್ ಬಂಡಿ ಎನ್ನುವ ಬಿರಿಯಾನಿ ಹಾಗೂ ಚಿಕನ್ ಟಿಕ್ಕಾ ದಂತಹ ರುಚಿ ಉಳ್ಳ ಖಾದ್ಯಗಳನ್ನು ಮಾರುವ ಕೆಲಸವನ್ನು ಪ್ರಾರಂಭಿಸಿದ್ದಾರೆ. ಈ ಕುರಿತಂತೆ ಹಿನ್ನೆಲೆಯನ್ನು ಕೂಡ ಮಾಧ್ಯಮದವರಿಗೆ ಹೇಳಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಕೆಲಸ ಮುಗಿಸಿಕೊಂಡು ರಾತ್ರಿ ವೇಳೆಗೆ ರಸ್ತೆಬದಿಯಲ್ಲಿ ಇಂತಹ ತಿನಿಸನ್ನು ತಿನ್ನಲು ಹೋಗಿದ್ದಾರಂತೆ.
ಅಲ್ಲಿ ತಿನ್ನುವ ಆಹಾರ ಪದಾರ್ಥಗಳ ಚೆನ್ನಾಗಿರಲಿಲ್ಲ ಹಾಗೂ ಸ್ವಚ್ಛತೆ ಕೂಡ ಇರಲಿಲ್ಲವಂತೆ. ಇದಕ್ಕೆ ಯೋಚನೆಗೆ ಬಿದ್ದ ಇಬ್ಬರು ಜನರಿಗೆ ರುಚಿಯಾದ ಗುಣಮಟ್ಟದ ಆಹಾರವನ್ನು ತಲುಪಿಸಬೇಕೆಂದು ಯೋಜನೆ ಹಾಕುತ್ತಾರೆ. ಇಬ್ಬರೂ ಕೂಡ ನಿಪುಣ ಅಡುಗೆಭಟ್ಟರೇನಲ್ಲ. ಆದರೂ ಅಮ್ಮನಿಂದ ಅಡುಗೆಯನ್ನು ಕಲಿತು ಬಿರಿಯಾನಿ ಹಾಗೂ ಚಿಕನ್ ಟಿಕ್ಕಾ ವನ್ನು ಮಾರಲು ಆರಂಭಿಸುತ್ತಾರೆ. ಇದು ಪ್ರಾರಂಭ ವಾಗಿದ್ದು 2021 ರ ಮಾರ್ಚ್ ತಿಂಗಳಿನಲ್ಲಿ. ಅದು ಕೂಡ ಅವರು ತಮ್ಮ ಎಂಜಿನಿಯರಿಂಗ್ ಕೆಲಸ ಮುಗಿಸಿ ಬಂದ ನಂತರ ರಾತ್ರಿ ವೇಳೆ ಮಾರಾಟ ಮಾಡುವುದು. ಹೌದು ಪ್ರತಿದಿನ ಸಂಜೆ ಕೆಲಸದ ನಂತರ, ಅವರು ಆಹಾರವನ್ನು ಮಾರಾಟ ಮಾಡಲು ಒಂದು ಕೈಗಾಡಿಯನ್ನು ತಮ್ಮ ಸ್ಥಳಕ್ಕೆ ತರುತ್ತಾರೆ. ಚಿಕನ್ ಬಿರಿಯಾನಿ, ಪ್ಲೇಟ್ 120 ರೂ.ಗೆ ಲಭ್ಯವಿದ್ದು, ಅರ್ಧ ಪ್ಲೇಟ್ ಬೆಲೆ 70 ರೂ. ಈ ಮೂಲಕ ದಿನಕ್ಕೆ ಸುಮಾರು 8000 ರೂ. ಅಂದರೆ ತಿಂಗಳಿಗೆ ಸುಮಾರು 2.5 ಲಕ್ಷ ರೂ. ವರೆಗೆ ಗಳಿಸುತ್ತಾರೆ.
Comments are closed.