ದೇವರ ನಾಡು ಕೇರಳದಲ್ಲಿ ಕನ್ನಡ ಕಲಾವಿದರು; ಆಹಾ ಎಲ್ಲರೂ ಮಿಂಚಿಂಗೋ ಮಿಂಚಿಂಗ್. ವಿಶೇಷತೆ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಹಲವು ಹೊಸ ಹೊಸ ಕಲಾವಿದರೂ ಕೂಡ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ತಮ್ಮ ಅತ್ಯುತ್ತಮ ನಟನೆಯಿಂದಾಗಿ ಕೆಲವು ಕಲಾವಿದರು ಬಹಳ ಬೇಗ ಬಹು ಬೇಡಿಕೆಯ ನಟ/ ನಟಿ ಎನಿಸಿಕೊಳ್ಳುತ್ತಿರುವುದು ಕನ್ನಡಿಗರಿಗೂ ಹೆಮ್ಮೆಯ ವಿಚಾರವೇ. ಅದರಲ್ಲೂ ಕನ್ನಡ ಕಲಾವಿದರು ಕನ್ನಡ ಸಿರಿಯಲ್ ಗಳಲ್ಲಿ ಮಾತ್ರವಲ್ಲ, ತೆಲಗು ಇಂಡಸ್ಟ್ರಿಯಲ್ ನಲ್ಲೂ ಕೂಡ ಫೇಮಸ್ ಆಗ್ತಾ ಇದ್ದಾರೆ.
ಈಗಾಗಲೇ ಕನ್ನಡದಲ್ಲಿ ಧಾರಾವಾಹಿ ಮಾಡುತ್ತಿದ್ದ ಹಲವು ನಟ ನಟಿಯರು ತೆಲಗು ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಗಟ್ಟಿಮೇಳ ಧಾರಾವಾಹಿಯ, ಆರತಿ, ಅಮೂಲ್ಯ, ಚಂದನ್, ಅಕೂಲ್ ಬಾಲಾಜಿ ಹೀಗೆ ಇನ್ನೂ ಹಲವಾರು ನಟರನ್ನು ನೀವು ತೆಲಗು ಕಿರುತೆರೆಯಲ್ಲಿ ಕಾಣಬಹುದು. ಆದ್ರೆ ಇಷ್ಟೇಲ್ಲಾ ಕಲಾವಿದರು ತೆಲಗು ಕಿರುತೆರೆಯಲ್ಲಿದ್ರೂ ಎಲ್ಲರೂ ಒಟ್ಟಿಗೆ ಸೇರಿದ್ದು ಇಲ್ಲವೇ ಇಲ್ಲ. ಅವರವರ ಸಮಯಕ್ಕೆ ಬಂದು ನಟಿಸಿ ಹೋಗ್ತಾರೆ. ಆದರೆ ಇತ್ತೀಚಿಗೆ ಈ ಸುಸಂದರ್ಭವೂ ಒದಗಿಬಂದಿತ್ತು.
ಹೌದು, ತೆಲಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಕನ್ನಡ ಕಲಾವಿದರೆಲ್ಲರೂ ಇತ್ತೀಚಿಗೆ ದೇವರ ನಾಡು ಕೇರಳದಲ್ಲಿ ನಡೆದ ಇವೆಂಟ್ ಒಂದರಲ್ಲಿ ಒಂದೇ ಸೂರಿನಡಿ ಸೇರಿದ್ರು. ದೀಪ್ತಿ, ಅನುಷಾ ಹೆಗಡೆ, ಅಕುಲ್ ಬಾಲಾಜಿ ಚಂದು ಗೌಡ ಮೊದಲಾದ ಎಲ್ಲಾ ಕಲಾವಿದರೂ ಒಟ್ಟಿಗೆ ಸೇರಿದ್ರು. ಕೇರಳದ ಧಿರಿಸಿನಲ್ಲಿ ಮಿಂಚುತ್ತಿದ್ದ ಎಲ್ಲಾ ಕಲಾವಿದರೂ ಒಟ್ಟಿಗೆ ಕೂತು ಊಟ ಮಾಡಿ, ಒಟ್ಟಿಗೇ ಸಮಯ ಕಳೆದಿದ್ದು, ಆ ಸಮಾರಂಭಕ್ಕೇ ಕಳೆಕಟ್ಟಿತ್ತು. ಕೇರಳ ಉಡುಪಿನಲ್ಲಿ ಬಹಳ ಸುಂದರವಾಗಿ ಕಾಣುತ್ತಿದ್ದ ಕನ್ನಡದ ಕಲಾವಿದರು ತಮ್ಮ ತಮ್ಮ ಸಾಮಾಜಿಕ ಖಾತೆಗಳಲ್ಲಿ ತಮ್ಮ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಇದು ಅಭಿಮಾನಿಗಳಿಗೂ ಕೂಡ ಖುಶಿ ಕೊಟ್ಟಿದೆ.
Comments are closed.