Best Investment Plan : ಕೇವಲ ಒಂದು ಸಾವಿರ 1000 ಹೂಡಿಕೆ ಮಾಡಿ, 2 ಕೋಟಿ ಲಾಭ ಹೇಗೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಹಣ ಎಷ್ಟೇ ದುಡಿದರೂ ಖರ್ಚಾಗಿ ಹೋಗತ್ತೆ. ಅದರಲ್ಲೂ ಇವತ್ತಿನ ದಿನಗಳಲ್ಲಿ ಖರ್ಚು ಎಲ್ಲರುಗೂ ತುಸು ಜಾಸ್ತಿಯೇ ಎಂದು ಹೇಳಬಹುದು. ಆದ್ರೆ ಇಂದು ದುಡಿದ ಹಣವನ್ನೇಲ್ಲಾ ನೀವು ಇಂದೇ ಖರ್ಚು ಮಾಡಿದ್ರೆ ಭವಿಷ್ಯಕ್ಕೇನು ಮಾಡ್ತೀರಿ! ಹಾಗಾಗಿ ಇಂದಿನಿಂದಲೇ ನಿಯಮಿತ ಹಣ ಹೂಡಿಕೆ ಅಥವಾ ಉಳಿತಾಯ ಭವಿಷ್ಯವನ್ನ ಉಜ್ವಲವಾಗಿಸುತ್ತೆ. ಇದಕ್ಕಾಗಿ ನೀವು ಇಷ್ಟು ಮಾಡಿದ್ರೆ ಸಾಕು.
ಸ್ನೇಹಿತರೆ, ಹನಿ ಹನಿ ಕೂಡಿದ್ರೆ ಹಳ್ಳ ಅಲ್ವಾ.. ಹಾಗೆನೇ ನಿಯಮಿತವಾಗಿ ಹಣ ಉಳಿಸುತ್ತಾ ಬಂದ್ರೆ ಖಂಡಿತವಾಗಿಯೂ ಭವಿಷ್ಯದಲ್ಲಿ ಒಂದು ದೊಡ್ಡ ಮೊತ್ತ ನಮ್ಮ ಕೈಲಿರತ್ತೆ. ನಮ್ಮ ದೊಡ್ಡ ಕನಸಿನ ಸಾಕಾರಕ್ಕೆ ಸಹಾಯವಾಗುತ್ತೆ. ಹೆಚ್ಚಲ್ಲ, ತಿಂಗಳಿಗೆ ಕೇವಲ ಒಂದು ಸಾವಿರ ಹೂಡಿಕೆ ಮಾಡಿದ್ರೂ ಸಾಕು. ಉತ್ತಮ ರಿಟರ್ನ್ಸ್ ನೀಡುವಂಥ ಯೋಜನೆಗಳು ಬೇರೆ ಬೇರೆ ಬ್ಯಾಂಕ್ ನಲ್ಲಿವೆ. ಮ್ಯೂಚುವಲ್ ಫಂಡ್ ಹಣ ಉಳಿತಾಯಕ್ಕೆ ಉತ್ತಮ ಆಯ್ಕೆಯಾಗಿದೆ.
ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಉಳಿತಾಯ ಮಾಡುವುದು ಅಷ್ಟು ಕಷ್ಟದ ಕೆಲಸವಲ್ಲ. ಪ್ರತಿ ತಿಂಗಳು 1000 ರೂಪಾಯಿಗಳನ್ನು ಹೂಡಿಕೆ ಮಾಡಿ, ಈ ಹಣವನ್ನು 20 ವರ್ಷಗಳವರೆಗೆ ಠೇವಣಿ ಮಾಡಿದ್ರೆ ನೀವು 20 ವರ್ಷಕ್ಕೆ ಉಳಿತಾಯ ಮಾಡುವ ಹಣ ಒಟ್ಟು 2.4 ಲಕ್ಷ ರೂಪಾಯಿ. 20 ವರ್ಷಗಳಲ್ಲಿ, ನಿಮ್ಮ ನಿಧಿಯು ವಾರ್ಷಿಕವಾಗಿ 15 ಪ್ರತಿಶತದಷ್ಟು ಲಾಭದಲ್ಲಿ 15,16,000ರೂ.ಗಳಿಗೆ ಹೆಚ್ಚಾಗುತ್ತದೆ. ಅಂದರೆ 20 ರಷ್ಟು ವಾರ್ಷಿಕ ಆದಾಯ 31.61 ಲಕ್ಷ ರೂ. ನಷ್ಟಾಗುತ್ತದೆ.
ಅದೇ ಸಾವಿರ ರೂಫಾಯಿಗಳನ್ನು ನೀವು 30 ವರ್ಷಗಳಿಗೆ ಹೂಡಿಕೆ ಮಾಡಿದ್ರೆ, 20 ಪ್ರತಿಶತದಷ್ಟು ವಾರ್ಷಿಕ ಆದಾಯದೊಂದಿಗೆ, ಪ್ರೀಮಿಯಂ ಮುಕ್ತಾಯದ ವೇಳೆ 86.27 ಲಕ್ಷ ರೂಪಾಯಿಗಳ ಕಾರ್ಪಸ್ ಅನ್ನು ಪಡೆಯುತ್ತೀರಿ. ಈ ಅವಧಿಯು 30 ವರ್ಷಗಳಾಗಿದ್ದರೆ, 20 ಪ್ರತಿಶತದಷ್ಟು ಆದಾಯದೊಂದಿಗೆ ನಿಮ್ಮಲ್ಲಿ 2 ಕೋಟಿ 33 ಲಕ್ಷ 60 ಸಾವಿರ ರೂ.ಗಳಷ್ಟು ಹಣ ಸಂಗ್ರಹವಾಗಿರುತ್ತೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದ್ರೆ ಸಂಯೋಜನೆಯ ಲಾಭವನ್ನು ಪಡೆಯಬಹುದು. ಪ್ರತಿ ತಿಂಗಳು ಹೂಡಿಕೆ ಮಾಡುತ್ತಾ ಹೋದ್ರೆ ದೊಡ್ಡ ಮೊತ್ತ ನಿಮ್ಮ ಕೈಸೇರುತ್ತೆ. ಹಾಗಾಗಿ ಇಂದೇ ಸೂಕ್ತ ಉಳಿತಾಯ ಯೋಜನೆಯನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಲು ಆರಂಭಿಸಿ.
Comments are closed.