ನಮಸ್ಕಾರ ಸ್ನೇಹಿತರೇ ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಜಾತಿ ಭವಿಷ್ಯವನ್ನು ಆಧರಿಸಿ ಆ ವ್ಯಕ್ತಿಯ ಜೀವನದ ಭವಿಷ್ಯವನ್ನು ಹೇಳಲಾಗುತ್ತದೆ. ಅದೇ ರೀತಿ ಆ ವ್ಯಕ್ತಿಯ ಮೊದಲ ಅಕ್ಷರವನ್ನು ಆದರಿಸಿ ಕೂಡ ಆತನ ಭವಿಷ್ಯವನ್ನು ಹೇಳಲಾಗುತ್ತದೆ. ಇಂದಿನ ಲೇಖನಿಯಲ್ಲಿ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗುವ ಹೆಸರುಳ್ಳವರು ಅತಿ ಚಿಕ್ಕ ವಯಸ್ಸಿನಲ್ಲಿ ಶ್ರೀಮಂತರಾಗುತ್ತಾರೆ ಎನ್ನುವುದರ ಕುರಿತಂತೆ ಹೇಳಲು ಹೊರಟಿದ್ದೇವೆ. ಹಾಗಾದರೆ ಯಾರೆಲ್ಲ ಇದ್ದಾರೆ ಎನ್ನುವುದನ್ನು ತಿಳಿಯೋಣ ಬನ್ನಿ.
ಬಿ ಅಕ್ಷರ; ಬಿ ಅಕ್ಷರದಿಂದ ಪ್ರಾರಂಭವಾಗುವ ಅಂತಹ ಜನರಿಗೆ ಬಾಲ್ಯದಿಂದಲೂ ಕೂಡ ಅದೃಷ್ಟದ ಬಾಗಿಲು ತೆರೆದಿರುವುದರ ಕಾರಣದಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನೇ ಕಾಣುತ್ತಾರೆ. ಇವರು ಪರಿಶ್ರಮಿಗಳು ಕೂಡ ಆಗಿರುವುದರಿಂದ ವ್ಯವಹಾರ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸಿನ ಅದೃಷ್ಟವನ್ನು ಹೊಂದಿರುತ್ತಾರೆ.
ಡಿ ಅಕ್ಷರ; ಯಾವುದೇ ಕೆಲಸವಾಗಲಿ ಇವರು ಸಂಪೂರ್ಣ ಪರಿಶ್ರಮವಹಿಸಿ ಮಾಡುವುದರಿಂದಾಗಿ ಅದರ ಜಯ ಸಿಗುತ್ತದೆ. ಅದೃಷ್ಟವು ಕೂಡ ಇವರ ಕೆಲಸದಲ್ಲಿ ಜೊತೆ ಇರುವುದರಿಂದ ತೀಕ್ಷ್ಣ ಮತಿಗಳಾಗಿರುವುದರಿಂದ ಅತಿ ಚಿಕ್ಕ ವಯಸ್ಸಿನಲ್ಲಿಯೇ ಧನಲಾಭವನ್ನೂ ಹೊಂದುತ್ತಾರೆ.
ಎಚ್ ಅಕ್ಷರ; ಎಚ್ ಅಕ್ಷರದವರು ಕೈಹಾಕಿದ ಕೆಲಸವೆಲ್ಲ ಚಿನ್ನದಂತೆ ಯಶಸ್ವಿಯಾಗುತ್ತದೆ. ಚಿಕ್ಕ ವಯಸ್ಸಿನಲ್ಲೇ ಇವರು ಏನು ಮಾಡಬೇಕೆಂಬುದನ್ನು ನಿರ್ಧರಿಸಿರುತ್ತಾರೆ ಹೀಗಾಗಿ ಎಲ್ಲಾ ಕಾರ್ಯಗಳು ಕೂಡ ಇವರಿಗೆ ಸಿದ್ಧಿಯಾಗುತ್ತದೆ. ಅದೃಷ್ಟ ಇವರ ಕಾಲ ಬುಡದ ಬಳಿಬಂದು ಬಿದ್ದಿರುತ್ತದೆ.
ಎಲ್ ಅಕ್ಷರ; ಈ ಹೆಸರಿನವರು ಸಾಕಷ್ಟು ಪರಿಶ್ರಮವನ್ನು ಕೂಡ ಪಡುತ್ತಾರೆ ಹಾಗೂ ಬುದ್ಧಿವಂತರು ಕೂಡ ಆಗಿರುತ್ತಾರೆ. ಇವರು ಮಾಡುವ ಕೆಲಸದಲ್ಲಿ ಅದೃಷ್ಟದ ಕೂಡ ಸಾಥ್ ನೀಡುತ್ತದೆ. ಇವರು ತಮಗೆ ಬೇಕಾಗಿರುವುದನ್ನು ಕೆಲಸ ಮಾಡಿ ಪಡೆದುಕೊಳ್ಳುತ್ತಾರೆ ಇದರಿಂದಾಗಿ ಅತಿ ಚಿಕ್ಕ ವಯಸ್ಸಿನಲ್ಲಿ ಯಶಸ್ಸನ್ನು ಸಾಧಿಸಿರುತ್ತಾರೆ. ಇವರೇ ಅತಿ ಚಿಕ್ಕ ವಯಸ್ಸಿನಲ್ಲಿ ಯಶಸ್ಸನ್ನು ಪಡೆದುಕೊಳ್ಳ ಬಲ್ಲಂತ ಹೆಸರಿನವರು.
Comments are closed.