ಫೀಲ್ ಫ್ರೀ: ಒಂದು ವೇಳೆ ಮದುವೆಯ ನಂತರ ನೀವು ಯಾರನ್ನಾದರೂ ಪ್ರೀತಿಸಿ ಆಕರ್ಷಣೆಯಾದರೆ ಏನು ಮಾಡಬೇಕು ಗೊತ್ತೇ??
ನಮಸ್ಕಾರ ಸ್ನೇಹಿತರೇ ಮದುವೆಯನ್ನು ವುದು ಎರಡು ಮನಸ್ಸುಗಳ ಸಮ್ಮಿಲನದಿಂದ ನಡೆಯುವಂತಹ ಮಂಗಳಕರ ಕಾರ್ಯವಾಗಿದೆ. ಇದನ್ನು ಪ್ರತಿಯೊಬ್ಬರು ಕೂಡ ಯೋಚಿಸಿ ಕಾರ್ಯರೂಪಕ್ಕೆ ತರುತ್ತಾರೆ. ಈ ಸಂದರ್ಭದಲ್ಲಿ ಮದುವೆಯ ನಂತರ ಕೆಲವೊಂದು ಅಚಾತುರ್ಯಗಳು ನಡೆಯುವುದರ ಮೂಲಕ ಮದುವೆಯ ಜೀವನ ಎನ್ನುವುದು ಅರ್ಧದಲ್ಲಿಯೇ ಮುಕ್ತಾಯವಾಗುತ್ತದೆ.
ಕೇವಲ ಮದುವೆ ಆಗುವುದಕ್ಕಿಂತ ಮುಂಚೆ ನಾವು ಬೇರೆಯವರ ಕುರಿತಂತೆ ಆಕರ್ಷಿತರಾಗುವ ಬೇಕು ಎಂದೇನಿಲ್ಲ. ಮದುವೆ ಆದ ಮೇಲೆ ಕೂಡ ಪರರ ಕುರಿತಂತೆ ಆಕರ್ಷಿತರಾಗಿರುತ್ತೇವೆ. ಇದನ್ನು ಸಿಂಪಲ್ ಭಾಷೆಯಲ್ಲಿ ಆಕರ್ಷಿತರಾಗುವುದು ಎಂದು ಕರೆಯುತ್ತೇವೆ ಆದರೆ ಒಳ ಅರ್ಥದಲ್ಲಿ ಇದನ್ನು ಅ’ನೈತಿಕ ಸಂಬಂಧವನ್ನು ಹೊಂದುವುದು ಅಥವಾ ಹೊಂದಲು ಪ್ರಯತ್ನಿಸುವುದು ಎಂದು ಹೇಳಲಾಗುತ್ತದೆ. ಈ ಸಂದರ್ಭದಲ್ಲಿ ನಿಮ್ಮ ವೈವಾಹಿಕ ಹಾಗೂ ಸಾಮಾಜಿಕ ಮತ್ತು ಕೆಲಸದ ಜೀವನವು ಕೂಡ ಹಾಳಾಗುವ ಸಾಧ್ಯತೆ ಇರುತ್ತದೆ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಹಲವಾರು ಜನರು ಗೊಂದಲದಲ್ಲಿರುತ್ತಾರೆ. ಇಂದಿನ ಲೇಖನದಲ್ಲಿ ಆ ಗೊಂದಲ ವನ್ನು ದೂರ ಮಾಡಲು ಹೊರಟಿದ್ದೇವೆ.
ಒಂದು ವೇಳೆ ನಿಮ್ಮ ಜೀವನದಲ್ಲಿ ಹೀಗೆ ಆಗುತ್ತಿದೆ ಎಂಬುದಾಗಿ ನಿಮಗೆ ಅನಿಸುತ್ತಿದ್ದರೆ. ತಪ್ಪದೆ ಮೊದಲಿಗೆ ನಿಮ್ಮನ್ನು ಹಿಂದಕ್ಕೆ ಇಟ್ಟುಕೊಂಡು ನಿಯಂತ್ರಣ ಮಾಡುವುದನ್ನು ಕಲಿತುಕೊಳ್ಳಿ. ಒಂದು ವೇಳೆ ನಿಮ್ಮ ಸಂಗಾತಿಯ ಜೊತೆಗಿನ ವೈಮನಸ್ಯ ದಿಂದಾಗಿ ಇಂತಹ ಕಾರ್ಯದ ಕಡೆಗೆ ಆಕರ್ಷಿತರಾಗುತ್ತಿದ್ದರೆ ಆ ಹಳೆಯ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಹಳೆಯ ಸಂಬಂಧವನ್ನು ನವೀಕರಿಸುವ ಕೆಲಸವನ್ನು ಮಾಡಿ. ಇದರ ಮೂಲಕ ನಿಮ್ಮ ಜವಾಬ್ದಾರಿಗಳನ್ನು ಅರಿತುಕೊಳ್ಳಲು ಪ್ರಯತ್ನಿಸಿ.
ಮೂರನೆಯವರೊಂದಿಗೆ ಸಂಬಂಧವನ್ನು ಹೊಂದುವುದು ಯಾವುದೇ ತಪ್ಪಿಲ್ಲ ಎಂಬ ಭಾವನೆ ನಿಮ್ಮ ಮನಸ್ಸಿಗೆ ಬಂದಾಗಲೇ ಇಂತಹ ಕಾರ್ಯದತ್ತ ನೀವು ಆಕರ್ಷಿತರಾಗುವುದು. ಹೀಗಾಗಿ ನಿಮ್ಮ ಮನಸ್ಸಿನಲ್ಲಿ ಪದೇಪದೇ ಇಂತಹ ಕಾರ್ಯ ತಪ್ಪು ಇದರಿಂದಾಗಿ ದೊಡ್ಡ ಅನಾಹುತಗಳೇ ನಡೆಯಬಲ್ಲದು ಎಂಬುದನ್ನು ನಿಮ್ಮ ಮನಸ್ಸಿಗೆ ನಿರೂಪಿಸುತ್ತಲೇ ಹೋಗಿ. ಯಾಕೆಂದರೆ ಮುಂದಿನ ದಿನಗಳಲ್ಲಿ ನೀವು ಮಾಡುವಂತಹ ತಪ್ಪು ನಿಮ್ಮ ಮಕ್ಕಳ ಮೇಲೆ ಪರಿಣಾಮ ಬೀರುವುದರಲ್ಲಿ ಯಾವುದೇ ಅನುಮಾನವಿಲ್ಲ.
ನೀವು ಮೂರನೇ ಅವರೊಂದಿಗೆ ಪ್ರೇಮ ಸಂಬಂಧವನ್ನು ಹುಟ್ಟುಹಾಕಲು ಯೋಚಿಸಿದಾಗ ಅವರಿಂದಲೂ ಕೂಡ ಭಾವನೆಗಳನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಒಂದು ವಿಚಾರವನ್ನು ನೆನಪಿಟ್ಟುಕೊಳ್ಳಿ ಒಮ್ಮೆ ಈ ವಿಚಾರ ಮುಂದಕ್ಕೆ ಹೋಯಿತು ಎಂದರೆ ಖಂಡಿತವಾಗಿ ಅದು ಹಿಂದಕ್ಕೆ ಬರುವುದಿಲ್ಲ. ಒಂದು ವೇಳೆ ಹಿಂದಕ್ಕೆ ತರುವ ಪ್ರಯತ್ನ ಮಾಡಿದರೂ ಕೂಡ ಅದರಲ್ಲಿ ಹಲವಾರು ಅಹಿತಕಾರಿ ಘಟನೆಗಳು ನಡೆಯುವಂತಹ ಸಾಧ್ಯತೆ ಇರುತ್ತದೆ.
ಇದೊಂದು ಅಂಶದ ಕುರಿತಂತೆ ತಪ್ಪದೇ ಎಲ್ಲರೂ ಗಮನ ವಹಿಸಲೇಬೇಕು. ಅದೇನೆಂದರೆ ಒಂದುವೇಳೆ ಮದುವೆಯಾದ ನಂತರ ನೀವು ಮೂರನೇ ವ್ಯಕ್ತಿಯತ್ತ ಆಕರ್ಷಿತರಾಗುತ್ತಿದ್ದರೆ ಆ ಸಂದರ್ಭದಲ್ಲಿ ನೀವು ಅವರನ್ನು ಸಂಪೂರ್ಣವಾಗಿ ತಿಳಿದುಕೊಂಡಿರುವುದಿಲ್ಲ. ಕೇವಲ ಅವರ ಒಳ್ಳೆಯತನವನ್ನು ಮಾತ್ರ ನೀವು ನೋಡಿರುತ್ತೀರಿ. ಅವರ ಜೀವನದಲ್ಲಿ ನೀವು ಬೆರೆತು ಹೋದ ಮೇಲೆ ಅವರ ಕೆಟ್ಟದ್ದು ಕೂಡ ನಿಮಗೆ ಅರಿವಾಗುತ್ತದೆ. ಒಂದು ವೇಳೆ ಈ ಸಂಬಂಧದಲ್ಲಿ ಮುಂದೆ ಹೋದ ನಂತರ ವಾಸ್ತವದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಹೀಗಾಗಿ ಈ ಎಲ್ಲಾ ವಿಚಾರಗಳನ್ನು ವಿಮರ್ಶೆ ಮಾಡಿ ನಂತರ ಮುಂದುವರಿಯಬೇಕಾಗುತ್ತದೆ.
ಇಂತಹ ವಿಚಾರಗಳ ತೊಳಲಾಟ ನಿಮ್ಮ ಮನಸ್ಸಿನಲ್ಲಿ ನಡೆಯುತ್ತಿದೆಯೆಂದರೆ ನಿಮ್ಮ ಸ್ನೇಹಿತರು ಅಥವಾ ನಿಮ್ಮ ಮಾರ್ಗದರ್ಶಕರು ಸಹಾಯವನ್ನು ಪಡೆದುಕೊಂಡು ಈ ವಿಚಾರವನ್ನು ರಹಸ್ಯದಲ್ಲಿ ನಿಯಂತ್ರಿಸಲು ಪ್ರಯತ್ನಿಸಿ. ನಿಮಗೆ ಯಾವುದು ಸರಿ ಯಾವುದು ತಪ್ಪು ಎಂದು ಮಾರ್ಗದರ್ಶನ ಮಾಡುವವರು ಇದ್ದರೆ ಮಾತ್ರ ಸರಿಯಾದದ್ದು ಯಾವುದು ಎನ್ನುವ ಸ್ಪಷ್ಟತೆ ನಿಮಗೆ ಗೋಚರವಾಗುತ್ತದೆ. ಈ ವಿಚಾರಗಳನ್ನು ತಪ್ಪದೇ ಈ ಸಂದರ್ಭದಲ್ಲಿ ನೀವು ಗಮನಿಸಲೇ ಬೇಕಾಗುತ್ತದೆ.
Comments are closed.