ಮನೆಯಲ್ಲಿ ಅಪ್ಪಟ ಬಂಗಾರದಂತಹ ಹೆಂಡತಿ ಕಾಗೆ ಬಂಗಾರಕ್ಕೆ ಆಸೆ ಪಟ್ಟ, ಆಮೇಲೆ ನಡೆದ್ದದೇನು ಗೊತ್ತೇ?? ಈ ಪರಿಸ್ಥಿತಿ ಯಾವ ಹೆಣ್ಣು ಮಕ್ಕಳಿಗೂ ಬೇಡ.
ನಮಸ್ಕಾರ ಸ್ನೇಹಿತರೇ ನಾವು ಇಂದು ಹೇಳಹೊರಟಿರುವ ಕಥೆಯನ್ನುವುದು ಕಾಮ ದ್ವೇಷ ಮೋಹವನ್ನು ಒಳಗೊಂಡಂತಹ ಕಥೆಯಾಗಿದೆ. ಈ ಜಗತ್ತಿನಲ್ಲಿ ಯಾವುದೂ ಕೂಡ ಶಾಶ್ವತವಲ್ಲ ಆದರೂ ಕೂಡ ನಾವು ಅದು ಬೇಕು ಇದು ಬೇಕು ಎಂದು ಬೇರೆಯವರೊಂದಿಗೆ ಜಗಳವನ್ನು ಆಡುತ್ತಿರುತ್ತೇವೆ. ಇಂದು ನಾವು ಹೇಳು ಹೊರಟಿರುವ ಕಥೆ ಪ್ರಾರಂಭವಾಗುವುದು ಗುರ್ಗಾವ್ ನಲ್ಲಿ. ಇಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಈ ಕತೆ ಪ್ರಾರಂಭವಾಗುತ್ತದೆ. ಅಪಾರ್ಟ್ಮೆಂಟಿನ ಮೇಲಂತಸ್ತಿನ ಫ್ಲಾಟ್ ಒಂದನ್ನು ಜರ್ನಲಿಸ್ಟ್ ಆಗಿದ್ದ ಶೆಫಾಲಿ ಬನ್ಸಿಂಗ್ ತಿವಾರಿ ಮಾರಾಟಕ್ಕಿಟ್ಟಿದ್ದರು.
ಇದನ್ನು ಪತ್ರಿಕೆಯಲ್ಲಿ ಕಂಡಾತ ಇದನ್ನು ಕೊಳ್ಳಲು ಶೆಫಾಲಿ ರವರಿಗೆ ಕರೆ ಮಾಡುತ್ತಾನೆ. ಹೌದು ಆತ ರಿಯಲ್ ಎಸ್ಟೇಟ್ ನಲ್ಲಿ ಸೀನಿಯರ್ ಎಂಪ್ಲೋಯೀ ಆಗಿದ್ದ ವಿಕ್ರಮ್ ಚೌಹಾನ್. ಮುಂದಿನ ಕೆಲವೇ ದಿನಗಳಲ್ಲಿ ಅಗ್ರಿಮೆಂಟ್ ಮಾಡಿಕೊಂಡು ನಂತರ ಆ ಫ್ಲ್ಯಾಟನ್ನು ತನಗೆ ಬೇಕಾದಂತೆ ಆಲ್ಟರೇಷನ್ ಮಾಡುತ್ತಾನೆ. ಅದಕ್ಕೆ ಬೇಕಾದ ಲೋನ್ ಅನ್ನು ಕೂಡ ಬ್ಯಾಂಕಿಂದ ಪಡೆದುಕೊಳ್ಳುತ್ತಾನೆ. ಇದಾದ ಕೆಲವೇ ದಿನಗಳಲ್ಲಿ ತನ್ನ ಪತ್ನಿ ದೀಪಿಕ ಜೊತೆಗೆ ಗೃಹಪ್ರವೇಶ ವನ್ನು ಕೂಡ ಮಾಡುತ್ತಾನೆ. ಗ್ರಹಪ್ರವೇಶಕ್ಕೆ ಶೆಫಾಲಿ ಹಾಗೂ ಆಕೆಯ ಪತಿಯನ್ನು ಕೂಡ ಆಹ್ವಾನಿಸುತ್ತಾನೆ. ವಿಕ್ರಮ್ ಚೌಹಾಣನ ಪತ್ನಿ ದೀಪಿಕಾ ಬ್ಯಾಂಕೊಂದರಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿರುತ್ತಾಳೆ.
ಹೀಗಾಗಿ ಅವಳು ತನ್ನ ಕೆಲಸಕ್ಕಾಗಿ ಬೇಗನೆ ರೆಡಿಯಾಗಿ ಹೋಗುತ್ತಾಳೆ. ಇತ್ತ ವಿಕ್ರಮ್ ಬಿಸಿನೆಸ್ ಮ್ಯಾನ್ ಆಗಿರುವುದರಿಂದ ಬೆಳಗ್ಗೆ ವಾಕಿಂಗಿಗೆ ಹೋಗುತ್ತಿದ್ದ. ಈ ಸಂದರ್ಭದಲ್ಲಿ ಆತನ ಜೊತೆಗೆ ಶೆಫಾಲಿ ಕೂಡ ಹೆಜ್ಜೆ ಹಾಕುತ್ತಿದ್ದಳು. ಇವರ ಪರಿಚಯ ಎನ್ನುವುದು ಅವರ ನಡುವಿನ ಅಸಹಜ ಸಂಬಂಧಕ್ಕೆ ಮೂಲವಾಯಿತು. ದೀಪಿಕಾ ಇಲ್ಲದಿದ್ದಾಗಲೆಲ್ಲ ವಿಕ್ರಮ್ ನ ಮನೆಗೆ ಬಂದು ಅವರಿಬ್ಬರು ಏಕಾಂತವನ್ನು ಅನುಭವಿಸುತ್ತಿದ್ದರು. ಈ ಕುರಿತಂತೆ ದೀಪಿಕಾಗೆ ಅನುಮಾನ ಬರಬಾರದು ಎಂಬುದಾಗಿ ಅವಳು ಇದ್ದಾಗಲೂ ಕೂಡ ಶೆಫಾಲಿ ಮನೆಗೆ ಬಂದು ಹೋಗುತ್ತಿದ್ದಳು.
ಆದರೆ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗದೆ ಇರುತ್ತದೆಯೇ. ದೀಪಿಕಾಗೆ ಕೂಡ ಇವರಿಬ್ಬರ ನಡುವೆ ಏನಾದರೂ ಸಂಬಂಧ ಇರಬಹುದು ಎಂಬುದಾಗಿ ಕೊಂಚಮಟ್ಟಿಗೆ ಅನುಮಾನ ಬರಲು ಪ್ರಾರಂಭವಾಗುತ್ತದೆ. ಇದಕ್ಕಾಗಿ ಆಕೆ ಒಮ್ಮೆ ವಿಕ್ರಮ್ ನನ್ನು ಜೋಗಿ ಮಾಡಬೇಕಾದರೆ ಹಿಂಬಾಲಿಸಿಕೊಂಡು ಹೋದಾಗ ಆತ ಶೆಫಾಲಿ ಜೊತೆಗೆ ಕೂತ್ಕೊಂಡು ನಗುತ್ತ ಮಾತನಾಡುತ್ತಿರುವುದು ಕಂಡುಬರುತ್ತದೆ. ಒಮ್ಮೆ ಮನೆಗೆ ಬಂದಾಗಲೂ ಕೂಡ ಶೆಫಾಲಿ ಹಾಗೂ ವಿಕ್ರಮ್ ನಡುವೆ ನಡೆದಂತಹ ಕಣ್ಸನ್ನೆಯ ಆಟಗಳನ್ನು ರೂಮಿನಲ್ಲಿ ನಿಂತುಕೊಂಡು ಗಮನಿಸಿರುತ್ತಾಳೆ.
ಈ ಕುರಿತಂತೆ ದೀಪಿಕಾ ವಿಕ್ರಮ್ ನಿಗೆ ಶೆಫಾಲಿ ಇನ್ನು ಮುಂದೆ ನಮ್ಮ ಮನೆಗೆ ಬರುವುದು ಬೇಡ ಆಕೆಯ ಆಟಗಳನ್ನು ಇಲ್ಲಿ ತೋರಿಸುವುದು ಬೇಡ ಇಲ್ಲವಾದರೆ ನಾನು ಬ್ಯಾಂಕ್ ಕೆಲಸ ಬಿಟ್ಟು ಮನೆಯಲ್ಲೇ ಇರುತ್ತೇನೆ ಎಂಬುದಾಗಿ ವಾರ್ನಿಂಗ್ ನೀಡುತ್ತಾಳೆ. ಆಗ ವಿಕ್ರಮ್ ನಮ್ಮಿಬ್ಬರ ನಡುವೆ ಇರುವುದು ಸ್ನೇಹ ಮಾತ್ರ ನೀನು ತಪ್ಪಾಗಿ ಯಾಕೆ ತಿಳಿದುಕೊಳ್ಳುತ್ತೀಯಾ ಎಂಬುದಾಗಿ ಪುಸಲಾಯಿಸುತ್ತಾನೆ. ನಮ್ಮಿಬ್ಬರ ಸಂಬಂಧದ ಕುರಿತಂತೆ ದೀಪಿಕಾಗೆ ಅನುಮಾನ ಬಂದಿದೆ ಎಂಬುದಾಗಿ ವಿಕ್ರಮ್ ಶೆಫಾಲಿಗೆ ಹೇಳುತ್ತಾನೆ.
ಹೀಗಾಗಿ ಇಬ್ಬರೂ ಸ್ವಲ್ಪ ಸಮಯ ಸೇರುವುದನ್ನು ನಿಲ್ಲಿಸಿಬಿಡುತ್ತಾರೆ. ಕೆಲವೇ ಸಮಯದಲ್ಲಿ ದೀಪಿಕಾ ತನ್ನ ಎರಡನೇ ಮಗುವಿನ ಗರ್ಭವತಿಯಾಗುತ್ತಾಳೆ. ಆಗ ಹೆರಿಗೆಗಾಗಿ ವಿಕ್ರಮ್ ತನ್ನ ಪತ್ನಿ ದೀಪಿಕಾ ಹಾಗೂ ಮೊದಲನೇ ಮಗುವನ್ನು ತವರುಮನೆಗೆ ಕಳಿಸಿಕೊಡುತ್ತಾನೆ. ಈ ಕಡೆ ವಿಕ್ರಮ್ ಶೆಫಾಲಿ ಜೊತೆಗೆ ಸೇರಿಕೊಂಡು ಮನಾಲಿಗೆ ಪ್ರವಾಸಕ್ಕೆ ಹೋಗುತ್ತಾನೆ. ಇದಾದ ಕೆಲವೇ ಸಮಯಗಳಲ್ಲಿ ದೀಪಿಕಾ ಎರಡನೇ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ವಿಕ್ರಂ ಈ ಕಾರಣದಿಂದಾಗಿ ತುಂಬಾನೇ ಸಂತೋಷ ಪಡುತ್ತಾನೆ.
ಈ ಸಂದರ್ಭದಲ್ಲಿ ಶೆಫಾಲಿ ಕೂಡ ವಿಕ್ರಮ್ ನಿಂದ ಗರ್ಭಿಣಿಯಾಗುತ್ತಾಳೆ. ಆಗ ಆಕೆ ನಾನು ನನ್ನ ಗಂಡನಿಗೆ ವಿವಾಹ ವಿಚ್ಛೇದನ ನೀಡಿ ಬರುತ್ತೇನೆ ನೀನು ಕೂಡ ನಿನ್ನ ಹೆಂಡತಿಗೆ ಡೈವೋರ್ಸ್ ನೀಡಿ ಬಂದುಬಿಡು ಎಂಬುದಾಗಿ ಹೇಳುತ್ತಾಳೆ. ಈಕಡೆ ಶೆಫಾಲಿ ಪ್ರೀತಿಸಿ ಮದುವೆಯಾಗಿದ್ದಳು. ಆದರೂ ಕೂಡ ವಿಕ್ರಮ್ ನಿಗಾಗಿ ತನ್ನ ಗಂಡನಿಗೆ ವಿವಾಹ ವಿಚ್ಛೇದನವನ್ನು ನೀಡಿ ಬರುತ್ತಾಳೆ. ಈ ಕಡೆ ದೀಪಿಕಾ ಬಳಿ ವಿಕ್ರಮ್ ಈ ಕುರಿತಂತೆ ಕೇಳಿದಾಗ ಅವಳು ನನ್ನ ಮಕ್ಕಳನ್ನು ಅಪ್ಪ ಇಲ್ಲದೆ ಸಾಕುವುದು ನನಗೆ ಇಷ್ಟವಿಲ್ಲ ಎಂಬುದಾಗಿ ಹೇಳಿ ವಿವಾಹ ವಿಚ್ಛೇದನವನ್ನು ನೀಡಲು ನಿರಾಕರಿಸುತ್ತಾಳೆ.
ಇದಕ್ಕಾಗಿ ಎರಡು ಕುಟುಂಬದ ನಡುವೆ ಸಾಕಷ್ಟು ವಾಗ್ವಾದಗಳು ನಡೆಯುತ್ತದೆ. ಇದರ ಕುರಿತಂತೆ ತಿಳಿದಂತಹ ಶೆಫಾಲಿ ವಿಕ್ರಮ್ ಜೊತೆ ಸೇರಿಕೊಂಡು ದೀಪಿಕಾಳನ್ನು ಮುಗಿಸುವ ಯೋಜನೆಗೆ ಕೈ ಹಾಕುತ್ತಾಳೆ. ಮೊದಲಿಗೆ ಕುಟುಂಬದ ಜೊತೆಗೆ ಬೆಟ್ಟಕ್ಕೆ ಪಿಕ್ನಿಕ್ ಗೆ ಹೋದಾಗ ತಳ್ಳುವ ಪ್ಲಾನನ್ನು ಮಾಡಿದ್ದರು. ಆದರೆ ಅದು ವಿಫಲವಾಯಿತು. ಒಂದು ದಿನ ಕರ್ವಚೌತ್ ಹಬ್ಬ ನಡೆಯುತ್ತಿರಬೇಕಾದರೆ ದೀಪಿಕಾ ತನ್ನ ಪತಿಗಾಗಿ ನೂರು ವರ್ಷ ಆಯಸ್ಸು ಸಿಗಲೆಂದು ಉಪವಾಸವನ್ನು ಕೈಗೊಂಡಿದ್ದರು. ಆ ಸಂದರ್ಭದಲ್ಲಿ ಎರಡು ಮನೆಯ ಹಿರಿಯವರು ಬಂದಿದ್ದರು. ಇಬ್ಬರಿಗೂ ಬುದ್ಧಿ ಹೇಳಿ ಹೋಗಿದ್ದರು.
ಅವರು ಹೋಗುತ್ತಿದ್ದಂತೆ ದೀಪಿಕಾಳನ್ನು ಹೇಳಿದ್ದು ಬಾಲ್ಕನಿಗೆ ಕರೆತರುತ್ತಾನೆ ವಿಕ್ರಮ್. ನೀನು ನನಗೆ ಡಿವೋರ್ಸ್ ನೀಡದಿದ್ದರೆ ನಿನ್ನನ್ನು ಇಲ್ಲಿಂದ ತಳ್ಳುತ್ತೇನೆ ಎಂಬುದಾಗಿ ಹೆದರಿಸುತ್ತಾನೆ. ಮೊದಲೇ ಉಪವಾಸದಿಂದ ನಿತ್ರಾಣವಾಗಿದ್ದ ದೀಪಿಕಾ ಹೆದರುತ್ತಾಳೆ. ಆದರೆ ಅವನ್ನೆಲ್ಲ ಕಡೆಗಣಿಸಿದ ವಿಕ್ರಮ್.ಅವಳನ್ನು 8ನೇ ಮಹಡಿಯಿಂದ ಕೆಳಗೆ ತಳ್ಳುತ್ತಾನೆ ದೀಪಿಕಾ ಸ್ಥಳದಲ್ಲೇ ಮರಣ ವನ್ನು ಹೊಂದುತ್ತಾಳೆ. ತನಿಖೆಯಲ್ಲಿ ಈ ಪ್ರಕರಣದ ಹಿಂದಿನ ರೂವಾರಿಗಳು ವಿಕ್ರಮ್ ಹಾಗೂ ಶೆಫಾಲಿ ಎಂದು ತಿಳಿದುಬರುತ್ತದೆ. ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿ ಕೊಳ್ಳುತ್ತಾರೆ. ಅದೇನೇ ಇರಲಿ ತನ್ನ ಗಂಡನ ಆಯಸ್ಸು ವೃದ್ಧಿಗಾಗಿ ಕರ್ವಾಚೌತ್ ಪೂಜೆಗಾಗಿ ದಿನವಿಡೀ ಉಪವಾಸವಿದ್ದ ದೀಪಿಕಾ ಅದೇ ದಿವಸ ತನ್ನ ಜೀವನವನ್ನು ಗಂಡನಿಂದಲೇ ಕೊನೆಗಾಣಿಸಿ ಕೊಂಡಿದ್ದು ನಿಜಕ್ಕೂ ವಿಪರ್ಯಾಸ.
Comments are closed.