ನೀವು ಎಂದು ನೋಡಿರದಂತಹ ಸುಧಾರಾಣಿ ಅವರ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿ ಸಂಪೂರ್ಣ ಮನೆ ತೋರಿಸುತ್ತೇವೆ ನೋಡಿ.
ನಮಸ್ಕಾರ ಸ್ನೇಹಿತರೇ 80 ಹಾಗೂ 90ರ ದಶಕದಲ್ಲಿ ಹಲವಾರು ನಟಿಯರು ನಮ್ಮ ಕನ್ನಡ ಚಿತ್ರರಂಗದಲ್ಲಿ ನಟಿಸಿ ಇಂದಿಗೂ ಕೂಡ ನಮ್ಮ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಅಂಥವರಲ್ಲಿ ಇಂದು ನಾವು ಹೇಳಹೊರಟಿರುವ ನಟಿ ಕೂಡ ಅಂದಿನ ಕಾಲದಲ್ಲಿ ಸ್ಟಾರ್ ನಟಿಯಾಗಿ ಮಿಂಚಿ ಮೆರೆದವರು. ಹೌದು ನಾವು ಮಾತನಾಡುತ್ತಿರುವುದು ನಟಿ ಸುಧಾರಾಣಿ ಅವರ ಕುರಿತಂತೆ. ಒಂದು ಕಾಲದಲ್ಲಿ ಯುವ ಸಿನಿಮಾ ರಸಿಕರಿಗೆ ಸುಧಾರಾಣಿ ಅವರು ಕೃಷ್ ಆಗಿದ್ದರು.
ನಟಿ ಸುಧಾರಾಣಿ ಯವರು ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಚೊಚ್ಚಲ ಚಿತ್ರ ಆನಂದ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪಾದರ್ಪಣೆ ಮಾಡುತ್ತಾರೆ. ಮೊದಲ ಚಿತ್ರದಲ್ಲಿ ಅಣ್ಣಾವ್ರ ಮಗನ ಜೊತೆಗೆ ನಟಿಸುವಂತಹ ಅವಕಾಶ. ಆನಂದ್ ಚಿತ್ರ ಸೂಪರ್ ಹಿಟ್ ಆದ ಮೇಲೆ ಒಂದಾದಮೇಲೊಂದರಂತೆ ಸ್ಟಾರ್ ನಟರ ಜೊತೆಗೆ ಸುಧಾರಾಣಿ ಅವರ ನಟಿಸುತ್ತಾರೆ. ಇನ್ನು ಇತ್ತೀಚಿಗಷ್ಟೆ ನಟಿಸಿರುವ ಕೊನೆಯ ಚಿತ್ರವೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರದಲ್ಲಿ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ಸುಧಾರಾಣಿ ಅವರು ತಮ್ಮ ಸಿನಿಮಾ ಜೀವನದ ಅವಧಿಯಲ್ಲಿ ಈಗಾಗಲೇ ಅದೆಷ್ಟೋ ಸಿನಿಮಾಗಳಲ್ಲಿ ನಟಿಸಿ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ಅಂತಹ ಪ್ರತಿಭಾನ್ವಿತ ನಟಿಯಾಗಿದ್ದಾರೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಯಾವುದೇ ಹಿಂಜರಿಕೆಯಿಲ್ಲದೆ ನಟಿಸುವಂತಹ ಚಾಕಚಕ್ಯತೆ ಹಾಗೂ ಅನುಭವ ಸುಧಾರಾಣಿ ಅವರಿಗಿದೆ. ಆದರೂ ಕೂಡ ಇಂದಿಗೂ ಅವರಲ್ಲಿ ಕೊಂಚವು ಕೂಡ ಜಂಬ ಅಥವಾ ಅಹಂಕಾರ ಇಲ್ಲ ಎಂದು ಹೇಳಬಹುದು. ಇನ್ನು ಇವರು ತಮ್ಮ ಸಂಬಂಧಿಕ ರಾಗಿರುವ ಗೋವರ್ಧನ್ ರವರನ್ನು ಎರಡನೇ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿರುವ ವಿಚಾರ ನಿಮಗೆ ಗೊತ್ತೇ ಇದೆ.
ಸುಧಾರಾಣಿ ಅವರಿಗೆ ಒಬ್ಬಳು ಮಗಳು ಕೂಡ ಇದ್ದಾರೆ. ಸುಧಾರಾಣಿ ಅವರ ಮಗಳ ಹೆಸರು ನಿಧಿ. ತಾಯಿಯಂತೆ ಮಗಳು ಕೂಡ ನೋಡಲು ಸೌಂದರ್ಯವತಿ ಆಗಿದ್ದಾಳೆ. ಕಲಿಕೆಯಲ್ಲಿ ಸದಾ ಮುಂದು ಸುಧಾರಾಣಿ ಅವರ ಮಗಳು ನಿಧಿ. ಮುಂದಿನ ದಿನಗಳಲ್ಲಿ ತಾಯಿಯಂತೆ ಕನ್ನಡ ಚಿತ್ರರಂಗದಲ್ಲಿ ನಾಯಕ ನಟಿಯಾಗಿ ಪಾದಾರ್ಪಣೆ ಮಾಡುವಂತಹ ಎಲ್ಲಾ ಸಾಧ್ಯತೆಗಳು ಕೂಡ ದಟ್ಟವಾಗಿದೆ. ಒಂದುವೇಳೆ ನಿಧಿ ಅವರು ಕನ್ನಡ ಚಿತ್ರರಂಗಕ್ಕೆ ನಟಿಯಾಗಿ ಬಂದರೆ ಸ್ವಾಗತ ಎನ್ನುವುದು ಅದ್ದೂರಿಯಾಗಿ ದೊರೆಯಲಿದೆ.
ಸುಧಾರಾಣಿ ಅವರ ಬಗ್ಗೆ ನಿಮಗೆ ಗೊತ್ತಿರಬೇಕಾದ ಇನ್ನೊಂದು ವಿಚಾರವೆಂದರೆ ಅವರು ತಮ್ಮ ಮೊದಲ ಚಿತ್ರಕ್ಕಾಗಿ ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡಂತಹ ನಟಿ. ಆ ಕಾಲದಲ್ಲಿ ಅವರೇ ಎಷ್ಟರಮಟ್ಟಿಗೆ ಸಾಧನೆ ಮಾಡಿದ್ದಾರೆ ಎಂದರೆ ಈ ಕಾಲದಲ್ಲಿ ಅವರ ಮಗಳಾಗಿರುವ ನಿಧಿ ಎಲ್ಲ ತಯಾರಿಗಳನ್ನು ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದರೇ ಹೇಗೆಲ್ಲಾ ಸಾಧನೆ ಮಾಡಬಹುದು ಎಂಬುದನ್ನು ನೀವೇ ಊಹಿಸಿಕೊಳ್ಳಿ.
ಇನ್ನು ಸುಧಾರಾಣಿ ಅವರ ಮನೆ ಬೆಂಗಳೂರಿನಲ್ಲಿದ್ದು ಮಗಳು ನಿಧಿಯ ಅಭಿರುಚಿಗೆ ತಕ್ಕಂತೆ ಮನೆಯನ್ನು ಅತ್ಯುತ್ತಮ ವಿನ್ಯಾಸದಲ್ಲಿ ಕಟ್ಟಿಸಲಾಗಿದೆ. ನಿಧಿಯ ಅಭಿರುಚಿಗೆ ತಕ್ಕಂತೆ ಮನೆಯನ್ನು ಅಲಂಕಾರಿಕ ಗಿಡಗಳ ಗಾರ್ಡನ್ನಲ್ಲಿ ಕಟ್ಟಲಾಗಿದೆ. ಮನೆಯ ಸುತ್ತಲೂ ಹೂವು ಕಾಯಿ ಬಿಡುವಂತಹ ಗಿಡಮರಗಳನ್ನು ನೆಡಲಾಗಿದೆ.
ಹಸಿರಿನಿಂದ ಕೂಡಿರುವಂತಹ ಗಾರ್ಡನ್ ಅನ್ನು ಕೂಡ ಮನೆಯ ಮುಂದೆ ಬೆಳೆಸಲಾಗಿದೆ. ಸಾಕುಪ್ರಾಣಿಗಳನ್ನು ಕೂಡ ಸಾಕಲಾಗಿದ್ದು ಮನೆ ಉದ್ಯಾನವನದಲ್ಲಿ ಇರುವಂತಹ ಚಿಕ್ಕ ಅರಮನೆಯಂತೆ ಭಾಸವಾಗುತ್ತದೆ. ಒಟ್ಟಾರೆಯಾಗಿ ಸುಧಾರಾಣಿ ಅವರ ಮನೆಯ ಕುರಿತಂತೆ ಒಂದು ವಾಕ್ಯದಲ್ಲಿ ಹೇಳುವುದಾದರೆ ಹಸಿರಿನ ನಡುವೆ ಮೈದಳೆದು ಎದ್ದು ನಿಂತಂತಹ ಸೌಂದರ್ಯದಿಂದ ಕಂಗೊಳಿಸುತ್ತಿದೆ. ಸುಧಾರಾಣಿ ಅವರ ಮನೆಯ ಕುರಿತಂತೆ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮ್ಮೊಂದಿಗೆ ಹಂಚಿಕೊಳ್ಳಿ.
Comments are closed.