ಕೂದಲು ಉದ್ದ ಬೆಳೆಯುತ್ತಿಲ್ಲ?? ಕೂಡ ಶಕ್ತಿ ಕಳೆದುಕೊಂಡಿದೆ ಅನಿಸುತ್ತಿದೆಯೇ?? ಹಾಗಿದ್ದರೆ ಈ ಹೇರ್ ಮಾಸ್ಕ್ ತಪ್ಪದೇ ಟ್ರೈ ಮಾಡಿ.
ನಮಸ್ಕಾರ ಸ್ನೇಹಿತರೇ ಇದು ಹಲವರ ಗೋಳು. ತನ್ನ ಕೂದಲು ಅದೆಷ್ಟು ಪ್ರಯತ್ನಪಟ್ಟರೂ ಉದ್ದವೇ ಆಗುತ್ತಿಲ್ಲ ಅಂತ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಬಗೆಯ ಕಂಡೀಶನರ್, ಸಿರಮ್, ಶಾಂಪೂ ಎಲವನ್ನೂ ಪ್ರಯತ್ನಿಸಿಸುತ್ತಾರೆ. ಕೂದಲಿಗೆ ಚಿಕಿತ್ಸೆಗಳನ್ನೂ ಮಾಡಿಸುತ್ತಾರೆ, ಆದಾಗ್ಯೂ ಕೂದಲು ಉದ್ದ ಬೆಳೆಯುವುದಿಲ್ಲ. ಇದಕ್ಕೆ ಕಾರಣ ನಾವಿರುವ ವಾತಾವರಣ, ನಮ್ಮ ಜೀವನಶೈಲಿ, ಆಹಾರಕ್ರಮ ಮೊದಲಾದವುಗಳು. ಹಾಗಾದರೆ ಕೂದಲು ಉದ್ದ ಬೆಳೆಯಲು ಏನು ಮಾಡಬೇಕು. ಇಲ್ಲಿದೆ ಕೆಲವು ಟಿಪ್ಸ್!
ಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಂಡು ಹೇರ್ ಮಾಸ್ಕ್ ತಯಾರಿಸಿಕೊಳ್ಳಿ. ಮೊದಲಿಗೆ ತೆಂಗಿನೆಣ್ಣೆ ಹಾಗೂ ದಾಲ್ಚಿನಿ ಹೇರ್ ಮಾಸ್ಕ್ ಬಳಸಬಹುದು. ನಿಮ ಕೂದಲು ತೆಳುವಾಗಿದ್ದರೆ ಈ ಹೇರ್ ಮಾಸ್ಕ್ ಬಳಸಿದರೆ ಕೂದಲು ಸದೃಢವಾಗಿ ಬೆಳೆಯುತ್ತದೆ. ಕೂದಲಿಗೆ ಬೇಕಾದ ಪೋಷಕಾಂಶ ದೊರೆಯುತ್ತದೆ. ತೆಂಗಿನೆಣ್ಣೆ ಹಾಗು ದಾಲ್ಚಿನಿ ನೈಸರ್ಗಿಕ ಔಷಧಿ ಗುಣಗಳನ್ನು ಹೊಂದಿವೆ. ದಾಲ್ಚಿನಿಯಲ್ಲಿರುವ ಉತ್ಕರ್ಷಣ ನಿರೋಧಕ ಗುಣ ಕೂದಲಿನಲ್ಲಿನ ತಲೆಹೊಟ್ಟು, ಕೂದಲು ಉದುರುವುದು ಇಂಥ ಸಮಸ್ಯೆಗಳನ್ನೂ ಕೂಡ ಕಡಿಮೆ ಮಾಡುತ್ತದೆ. ಇನ್ನು ಶತಮಾನಗಳಿಂದ ಬಳಸಿಕೊಂಡು ಬರುತ್ತಿರುವ ತೆಂಗಿನೆಣ್ಣೆ ಬಗ್ಗೆ ನಿಮಗೆ ಗೊತ್ತೇ ಇದೆ. ಇದು ಕೂದಲಿಗೆ ಅತ್ಯಂತ ಉತ್ತಮ ರಕ್ಷಣೆ ನೀಡಬಲ್ಲದು. ಹಾಗಾದರೆ ಬನ್ನಿ ತೆಂಗಿನೆಣ್ಣೆ ಹಾಗೂ ದಾಲ್ಚಿನಿ ಬಳಸಿ ಹೇರ್ ಮಾಸ್ಕ್ ಹೇಗೆ ತಯಾರಿಸೋದು ಅಂತ ನೋಡೋಣ.
ಹೇರ್ ಮಾಸ್ಕ್ ಮಾಡೋಕೆ ಬೇಕಾಗಿರೋ ವಸ್ತುಗಳು ಅಂದ್ರೆ: ಸ್ವಲ್ಪ ದಾಲ್ಚಿನ್ನಿ, ಸ್ವಲ್ಪ ತೆಂಗಿನ ಎಣ್ಣೆ. (ನಿಮ್ಮ ಕೂದಲಿಗೆ ಅನುಗುಣವಾಗಿ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಕೊಳ್ಳಬಹುದು) ಹೇರ್ ಪ್ಯಾಕ್ ತಾಯಾರಿಸೋದು ಹೇಗೆ? ಮೊದಲಿಗೆ ಒಂದು ಬಟ್ಟಲಿನಲ್ಲಿ ದಾಲ್ಚಿನ್ನಿ ಪುಡಿ ಮತ್ತು ತೆಂಗಿನ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣವನ್ನು ತಲೆಯ ನೆತ್ತಿಯ ಭಾಗಕ್ಕೆ ಹಚ್ಚಿ ಕೈಯಿಂದ ಮಸಾಜ್ ಮಾಡಿ. ಇಡೀ ತಲೆಗೆ ಚೆನ್ನಾಗಿ ಮಸಾಜ್ ಮಾಡಿಕೊಂಡು 30 ರಿಂದ 45 ನಿಮಿಷಗಳ ಕಾಲ ಹಾಗೆಯೇ ಬಿಡಿ, ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. ನಿಮ್ಮ ಕೂದಲಿಗೆ ಅನುಗುಣವಾಗಿ ದಾಲ್ಚಿನ್ನಿ ಮತ್ತು ಎಣ್ಣೆಯ ಪ್ರಮಾಣವನ್ನು ಸಹ ಹೆಚ್ಚಿಸಬಹುದು. ಈ ಹೇರ್ ಮಾಸ್ಕ್ ಅನ್ನು ವಾರಕ್ಕೆ ಎರಡು ಬಾರಿ ಬಳಸಬೇಕು. ನಿಯಮಿತವಾಗಿ ಈ ಹೇರ್ ಮಾಸ್ಕ್ ಹಚ್ಚುತ್ತಾ ಬಂದರೆ ಕೂದಲು ಉತ್ತಮವಾಗಿ ಬೆಳೆಯುತ್ತದೆ.
Comments are closed.