ಸಂಕಷ್ಟದಲ್ಲಿದೆ ಈ 4 ಭಾರತೀಯ ಕ್ರಿಕೆಟಿಗರ ಟೆಸ್ಟ್ ವೃತ್ತಿಜೀವನ! ಶ್ರೀಲಂಕಾ ಸರಣಿಯೆ ಲಾಸ್ಟ್, ಯಾರ್ಯಾರದ್ದೂ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಭಾರತ ಮತ್ತು ಶ್ರೀಲಂಕಾ ನಡುವಿನ 2 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಇಂದು ಆರಂಭವಾಗಿದೆ. ಟಿಮ್ ಇಂಡಿಯಾ ಟಿ 20 ಯಲ್ಲಿಯೂ ಶ್ರೀಲಂಕಾವನ್ನು ಸೋಲಿಸಿ, ದುಸ್ಪಪ್ನವಾಗಿತ್ತು. ಈ ಬಾರಿ ಟೆಸ್ಟ್ ನಲ್ಲಿಯೂ ಶ್ರೀಲಂಕಾ ನೆಲಕಚ್ಚುವುದು ಗ್ಯಾರಂಟಿ ಎನ್ನುತ್ತೆ ಸಮೀಕ್ಷೆ. ಆದರೆ ಈ ಬಾರಿಯ ಮ್ಯಾಚ್ ನಮ್ಮ ಭಾರತೀಯ 4 ಆಟಗಾರರಿಗೆ ಬಹಳ ಮುಖ್ಯವಾದ ಮ್ಯಾಚ್ ಆಗಿದೆ. ಈ ಬಾರಿಯೂ ಕಳಪೆ ಆಟ ಪ್ರದರ್ಶನ ಮಾಡಿದ್ರೆ ಇದು ಅವರ ಕೊನೆಯ ಮ್ಯಾಚ್ ಆದರೂ ಆಗಬಹುದು!
ಶ್ರೇಯಸ್ ಅಯ್ಯರ್: ಟಿ20 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅದ್ಭುತ ಬ್ಯಾಟ್ಸ್‌ಮನ್ ಆಗಿದ್ದರೂ ಕೂಡ ಟೆಸ್ಟ್ ಮ್ಯಾಚ್ ನಲ್ಲಿ ಝಿರೋ. ತಮ್ಮ ಚೊಚ್ಚಲ ಟೆಸ್ಟ್‌ನಲ್ಲಿ ಶತಕ ಗಳಿಸಿ, ನಂತರ ಆಡಿದ ಎಲ್ಲಾ ಇನ್ನಿಂಗ್ಸ್ ಗಳಲ್ಲೂ ವೈಫಲ್ಯ ಕಂಡಿದ್ದಾರೆ. ಈಗಾಗಲೇ ಸೂರ್ಯಕುಮಾರ್ ಯಾದವ್ ಅವರಂತಹ ಪ್ರತಿಭಾವಂತ ಬ್ಯಾಟ್ಸ್‌ಮನ್ ಅನ್ನು ಟೀಮ್ ಇಡಿಯಾ ಹೊಂದಿದ್ದು, ಈ ಟೆಸ್ಟ್ ಶ್ರೇಯಸ್ ಅವರ ಉಳಿವು ಅಳಿವಿನ ಪ್ರಶ್ನೆಯಾಗಿದೆ.
ಕುಲದೀಪ್ ಯಾದವ್: ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ಶ್ರೀಲಂಕಾ ವಿರುದ್ಧ ಕುಲದೀಪ್ ಯಾದವ್, ಸೂರ್ಯಕುಮಾರ್ ಯಾದವ್ ಮತ್ತು ಪ್ರಿಯಾಂಕ್ ಪಾಂಚಾಲ್ ಅವರಿಗೆ ಅವಕಾಶ ನೀಡಿದೆ. ಕುಲದೀಪ್ ಯಾದವ್ ದೀರ್ಘಕಾಲದಿಂದ ಟೆಸ್ಟ್ ನಿಂದ ಹೊರಗುಳಿಯುತ್ತಿದ್ದು ಈ ಬಾರಿ ಕೊನೆಯ ಪ್ರಯತ್ನವನ್ನು ಮಾಡಲು ರಾಹುಲ್ ದ್ರಾವಿಡ್ ನಿರ್ಧರಿಸಿದ್ದಾರೆ. 27 ವರ್ಷದ ಕುಲದೀಪ್ 7 ಟೆಸ್ಟ್ ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. ಆದರೆ ಸದ್ಯ ಶ್ರೀಲಂಕಾ ಪಂದ್ಯವೊಂದೇ ಅವರ ಕ್ರಿಕೇಟ್ ವೃತ್ತಿ ಜೀವನವನ್ನು ನಿರ್ಧರಿಸಬಲ್ಲದು.
ಹನುಮ ವಿಹಾರಿ ಟೀಮ್ ಇಂಡಿಯಾದ ವಿಶ್ವಾಸಾರ್ಹ ಬ್ಯಾಟ್ಸ್‌ಮನ್ ಹನುಮ ವಿಹಾರಿ ಆಗಾಗ್ಗೆ ಆಟದಿಂದ ಹೊರಗುಳಿಯುತ್ತಾರೆ. ಟೀಂ ಇಂಡಿಯಾ ಚೇತೇಶ್ವರ ಪೂಜಾರ ಬದಲಿಗೆ ಹನುಮ ವಿಹಾರಿಗೆ 3ನೇ ಕ್ರಮಾಂಕದಲ್ಲಿ ಅವಕಾಶ ನೀಡಬಹುದು. 28 ವರ್ಷದ ಹನುಮ ವಿಹಾರಿ 13 ಟೆಸ್ಟ್ ಪಂದ್ಯಗಳಲ್ಲಿ 34.20 ಸರಾಸರಿಯಲ್ಲಿ 684 ರನ್ ಗಳಿಸಿದ್ದಾರೆ. ಆದರೆ ಇವರು ಅಷ್ಟು ಪರಿಣಾಮಕಾರಿ ಬ್ಯಾಟ್ ಮೆನ್ ಎನಿಸದ ಕಾರಣ ಟೆಸ್ಟ್ ನಲ್ಲಿ ಅವರನ್ನು ಹೆಚ್ಚಾಗಿ ಆಡಿಸುವುದಿಲ್ಲ. ಈ ಬಾರಿ ಶ್ರೀಲಂಕಾ ಮ್ಯಾಚ್ ತನ್ನ ಭವಿಷ್ಯ ನಿರ್ಧರಿಸುವ ಪಂದ್ಯ ಎಂದುಕೊಂಡು ಹನುಮ ವಿಹಾರಿ ತಮ್ಮ ಆಟ ಪ್ರದರ್ಶಿಸಬೇಕಾಗಿದೆ.
ಉಮೇಶ್ ಯಾದವ್: ಅತ್ಯುತ್ತಮ ವೇಗದ ಬೌಲರ್‌ಗಳಲ್ಲಿ ಒಬ್ಬರು ಉಮೇಶ್ ಯಾದವ್. ಇದು ಅವರ ವೃತ್ತಿಜೀವನದ ಮೇಲೆ ಉತ್ತಮ ಪ್ರಭಾವ ಬೀರಿದೆ. ಭಾರತವು ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಶಾರ್ದೂಲ್ ಠಾಕೂರ್ ಅವರ ರೂಪದಲ್ಲಿ ಅತ್ಯುತ್ತಮ ಬೌಲರ್‌ಗಳನ್ನು ಹೊಂದಿದ್ದು ಉಮೇಶ್ ಯಾದವ್ ಸದ್ಯ ತಮ್ಮ ಸ್ಥಾನ ಗಟ್ಟಿಮಾಡಿಕೊಳ್ಳಬೇಕಾಗಿದೆ. 52 ಟೆಸ್ಟ್ ಪಂದ್ಯಗಳಲ್ಲಿ 158 ವಿಕೆಟ್ ಪಡೆದಿರುವ ಉಮೇಶ್ ಯಾದವ್ ಅವರಿಗೆ ನಿರಂತರವಾಗಿ ಟೆಸ್ಟ್ ನಲ್ಲಿ ಅವಕಾಶ ನೀಡಲಾಗುತ್ತಿದೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿಫಲವಾದರೆ, ನಂತರ ಅವರನ್ನು ಟೆಸ್ಟ್ ತಂಡದಿಂದ ಹೊರಹಾಕಬಹುದು.
Comments are closed.