Neer Dose Karnataka
Take a fresh look at your lifestyle.

ಕೈಯಲ್ಲಿ ಹಣ ನಿಲ್ಲುತ್ತಿಲ್ಲವೇ?? ಈ ಚಿಕ್ಕ ಚಿಕ್ಕ ಅಭ್ಯಾಸಗಳೇ ನಿಮಗೆ ತಿಳಿಯದೆ ಖರ್ಚು ಹೆಚ್ಚಾಗಲು ಕಾರಣ, ಯಾವ್ಯಾವು ಗೊತ್ತೇ??

65

ನಮಸ್ಕಾರ ಸ್ನೇಹಿತರೇ, ದುಡಿಯುವುದೇ ಖರ್ಚು ಮಾಡುವುದಕ್ಕೆ ಎನ್ನುವ ಹುಂಬತನ ಸಾಕಷ್ಟು ಜನರಿಗಿರುತ್ತದೆ. ಆದರೆ ಹಾಗೆ ದುಡಿದಿದ್ದೇಲ್ಲವನ್ನೂ ತಿಂಗಳು ಕೊನೆಗೊಳ್ಳುವುದಕ್ಕೂ ಮೊದಲೇ ಖಾಲಿ ಮಾಡಿದ್ರೆ, ನಿಮ್ಮ ಜೇಬೂ ಖಾಲಿಯಾಗುತ್ತೆ, ಜೊತೆಗೆ ಉಳಿತಾಯ ಮಾಡೋದಕ್ಕೆ ಒಂದು ರೂಪಾಯಿಯೂ ಕೈನಲ್ಲಿ ಇರುವುದಿಲ್ಲ. ಹೀಗಾ ಆಗ್ತಾ ಇದ್ರೆ ಭವಿಷ್ಯಕ್ಕೆ ಸಮಸ್ಯೆ ಆಗಬಹುದು. ಅದಕ್ಕಾಗಿ ನೀವು ನಿಮ್ಮ ಖರ್ಚು ವೆಚ್ಚಗಳ ಬಗ್ಗೆ ಮೊದಲು ಗಮನಹರಿಸಬೇಕು.

ಆನ್ ಲೈನ್ ಶಾಪಿಂಗ್: ಆನ್ ಲೈನ್ ನಷ್ಟು ಉತ್ತಮ ಶಾಪಿಂಗ್ ಬೇರೆ ಯಾವುದೂ ಇಲ್ಲ ಅಂತನೇ ಜನ ಭಾವಿಸುತ್ತಾರೆ. ಬೇಕೋ ಬೇಡ್ವೋ ಆದ್ರೆ, ಖರೀದಿಯನ್ನಂತೂ ಮಾಡುತ್ತಲೇ ಇರುತ್ತಾರೆ. ಅದರ ಬದಲು ನಿಮ್ಮ ಮೊಬೈಲ್ ನಲ್ಲಿರುವ ಶಾಪಿಂಗ್ ಆಪ್ ಗಳನ್ನ ಒಮ್ಮೆ ಡಿಲೀಟ್ ಮಾಡಿ ನೋಡಿ. ಆ ಸಮಯವನ್ನ ಓದುವುದಕ್ಕೋ ಅಥವಾ ಇನ್ಯಾವುದಾದರೂ ಆಸಕ್ತಿದಾಯಕ ವಿಚಾರಗಳಿಗೆ ಬಳಸಿ. ಆಗ ಹಣ ಹೇಗೆ ಉಳಿತಾಯವಾಗುತ್ತೆ ನೋಡಿ.

ಸೌಂದರ್ಯವರ್ಧಕಗಳು: ಸಾಮಾನ್ಯವಾಗಿ ಹುಡುಗಿಯರಿಗೆ ಬ್ಯೂಟಿ ಉತ್ಪನ್ನಗಳ ಬಗ್ಗೆ ಒಲವು ಜಾಸ್ತಿ. ಹಾಗಾಗಿ ಕಂಡ ಎಲ್ಲಾ ಬ್ಯೂಟಿ ಪ್ರಾಡೆಕ್ಟ್ ಗಳನ್ನ ಕೊಳ್ಳುತ್ತಾರೆ. ಇದರಿಂದ ಎಷ್ಟು ಹಣ ವ್ಯರ್ಥವಾಗುತ್ತೆ ಗೊತ್ತಾ? ಹಾಗಾಗಿ ಬಾಳಿಕೆ ಬರುವ ಉತ್ಪನ್ನಗಳನ್ನು ಖರೀದಿಸಿ, ದೀರ್ಘಕಾಲ ಬಳಸಿ. ಆಫರ್ ಮಸ್ತುಗಳನ್ನು ಕೊಳ್ಳಿ. ಸಾಕಷ್ಟು ಬಾರಿ ನಾವು ಯಾಉದಾದರೂ ವಸ್ತುವನ್ನು ನೋಡಿದ್ರೆ ಕೂಡಲೆ ಖರೀದಿ ಮಾಡುತ್ತೇವೆ. ಅದರ ಬದಲು ಅದಕ್ಕೆ ಆಫರ್ ಗಳು ಬಂದು, ಬೆಲೆ ಕಡಿಮೆಯಾಗುವವರೆಗೆ ಕಾಯಿರಿ. ಆಗ ಡಬ್ಬಲ್ ಬೆಲೆ ತೆರುವ ಸಂದರ್ಭ ತಪ್ಪುತ್ತೆ. ಇನು ಧೂಮಪಾನ. ಇದು ಆರೋಗ್ಯಕ್ಕೂ ಹಾನಿಕಾರಕ ಜೊತೆಗೆ ನಿಮ್ಮ ಜೇಬನೂ ಖಾಲಿ ಮಾಡುತ್ತೆ. ಯಾಕಂದ್ರೆ ಇಂದು ಒಂದು ಸಿಗರೇಟ್ ಬೆಲೆ 15 ರೂ. ದಾಟಿದೆ. ಹಾಗಾಗಿ ತಿಂಗಳಿಗೆ ನೀವು ಎಷ್ಟು ಹಣ ವ್ಯಯಿಸುತ್ತೀರಾ ನೀವೇ ಲೆಕ್ಕಾಚಾರ ಹಾಕಿನೋಡಿ. ಇನ್ನು ಆದಷ್ಟು ಹೊರಗಡೆ ತಿನ್ನುವುದನ್ನೂ ಕಡಿಮೆ ಮಾಡಿ. ಇದರಿಂದ ಆರೋಗ್ಯವೂ ಚೆನ್ನಾಗಿರುತ್ತೆ ಹಣವೂ ಉಳಿತಾಯವಾಗುತ್ತೆ.

Leave A Reply

Your email address will not be published.