ರೆಬಲ್ ಸ್ಟಾರ್ ಪ್ರಭಾಸ್ ಮದುವೆಯಾಗದೇ ಇರುವುದಕ್ಕೆ ಕಾರಣ ಕೊನೆಗೂ ಗೊತ್ತಾಯ್ತು; ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡುತ್ತೀರಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ಭಾರತೀಯ ಚಿತ್ರರಂಗದ ಪರ್ಫೆಕ್ಟ್ ಪ್ಯಾನ್ ಇಂಡಿಯನ್ ಸ್ಟಾರ್ ಎಂದರೆ ಅದು ತೆಲುಗು ಚಿತ್ರರಂಗದ ಡಾರ್ಲಿಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಯಾಕೆಂದರೆ ಬಾಹುಬಲಿ ಚಿತ್ರಗಳ ಸರಣಿಯ ನಂತರ ಅವರು ಪ್ರತಿಯೊಂದು ಭಾಷೆಯಲ್ಲಿ ಕೂಡ ದೊಡ್ಡಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ. ಅದು ಸಾಹೋ ಚಿತ್ರದ ನಂತರವೂ ಕೂಡ ಸಾಬೀತಾಗಿದೆ.
ಹೌದು ಸಾಹೋ ಚಿತ್ರದ ನಂತರ ಹಿಂದಿ ಪ್ರಾಂತ್ಯದಲ್ಲಿ ಕೂಡ 150 ಕೋಟಿಗೆ ಅಧಿಕ ಕಲೆಕ್ಷನ್ ಮಾಡಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಅವರ ರಾಧೇಶ್ಯಾಮ್ ಚಿತ್ರವು ಕೂಡ ಪಂಚ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರದ ಕುರಿತಂತೆ ಈಗಾಗಲೇ ಟ್ರೈಲರ್ ಬಿಡುಗಡೆಯಾಗಿದ್ದು ಪ್ರತಿಯೊಂದು ಭಾಷೆಗಳಲ್ಲಿ ಕೂಡ ಚಿತ್ರವನ್ನು ನೋಡುವಂತಹ ತವಕ ಅಭಿಮಾನಿಗಳಲ್ಲಿ ಹಾಗೂ ಸಿನಿಮಾ ಪ್ರೇಕ್ಷಕರಲ್ಲಿ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಈ ಕುರಿತಂತೆ ಹಲವಾರು ಸಂದರ್ಶನಗಳನ್ನು ಕೂಡ ಈಗಾಗಲೇ ಪ್ರಭಾಸ್ ರವರು ಎದುರಿಸಿದ್ದಾರೆ. ಈ ಸಂದರ್ಶನದಲ್ಲಿ ಪ್ರಭಾಸ್ ರವರಿಗೆ ಮದುವೆ ಕುರಿತಂತೆ ಪ್ರಶ್ನೆಯನ್ನು ಸಂದರ್ಶಕರು ಕೇಳಿದ್ದಾರೆ. ಇನ್ನು ಕೂಡ ಯಾಕೆ ಮದುವೆ ಆಗಿಲ್ಲ ಎಂಬುದಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಸ್ವತಹ ಪ್ರಭಾಸ್ ರವರು ನೀಡಿರುವ ಉತ್ತರ ಈಗ ಎಲ್ಲರಿಗೂ ಆಶ್ಚರ್ಯವನ್ನು ತಂದಿದೆ.
ಹೌದು ಈ ಪ್ರಶ್ನೆಗೆ ಉತ್ತರಿಸುತ್ತಾ ಡಾರ್ಲಿಂಗ್ ರೆಬೆಲ್ ಸ್ಟಾರ್ ಪ್ರಭಾಸ್ ರವರು ಪ್ರೀತಿಯ ಕುರಿತಂತೆ ನನ್ನ ಲೆಕ್ಕಾಚಾರ ತಪ್ಪಾಗಿದೆ ಇದಕ್ಕಾಗಿ ನಾನು ಇನ್ನೂ ಮದುವೆಯಾಗಿಲ್ಲ ಎಂಬುದಾಗಿ ಹೇಳಿದ್ದಾರೆ. ಇನ್ನು ರೆಬಲ್ ಸ್ಟಾರ್ ಪ್ರಭಾಸ್ ಹಾಗೂ ಕನ್ನಡತಿ ಅನುಷ್ಕಾ ಶೆಟ್ಟಿ ರವರ ನಡುವಿನ ಪ್ರೇಮ ಸಂಬಂಧದ ಕುರಿತಂತೆ ಈಗಾಗಲೇ ಹಲವಾರು ಬಾರಿ ಸುದ್ದಿಯಾಗಿರುವುದು ನಿಮಗೆಲ್ಲ ಗೊತ್ತಿದೆ. ಆದರೆ ಇಬ್ಬರೂ ಕೂಡ ಇದುವರೆಗೂ ಇದರ ಕುರಿತಂತೆ ಅಧಿಕೃತವಾಗಿ ಎಲ್ಲಿ ಕೂಡ ಒಪ್ಪಿಕೊಂಡಿಲ್ಲ. 2015 ರಲ್ಲಿ ಅನುಷ್ಕಾ ಶೆಟ್ಟಿ ಮದುವೆಯಾಗಲು ನಿರ್ಧರಿಸಿದ್ದರಂತೆ. ಆ ಸಂದರ್ಭದಲ್ಲಿ ಬಾಹುಬಲಿ ಚಿತ್ರದಲ್ಲಿ ನಟಿಸುವ ಕುರಿತಂತೆ ಪ್ರಭಾಸ್ ರವರು ತಮ್ಮ ಸ್ನೇಹಿತೆ ಅನುಷ್ಕ ಶೆಟ್ಟಿ ಅವರಿಗೆ ಹೇಳಿ ಮದುವೆ ನಿಲ್ಲುವಂತೆ ಪರೋಕ್ಷವಾಗಿ ಕಾರಣವಾಗಿದ್ದಾರೆ. ಹೀಗಾಗಿ ಇಬ್ಬರೂ ಈಗ ಮದುವೆ ಆಗದೆ ಇರೋದಕ್ಕೆ ಕಾರಣಗಳು ಪ್ರೇಕ್ಷಕರಿಗೆ ತಿಳಿದಿದೆ ಎಂದು ಭಾವಿಸುತ್ತೇವೆ.
Comments are closed.