ಇದ್ದಕ್ಕಿದ್ದ ಹಾಗೆ ಒಂದು ವೇಳೆ ಭೂಮಿ ತಿರುಗುವುದನ್ನು ನಿಲ್ಲಿಸಿದರೇ ಏನಾಗಬಹುದು ಗೊತ್ತೇ?? ವೈಜ್ಞಾನಿಕ ಉತ್ತರವೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಭೂಮಿಯು ತನ್ನ ಅಕ್ಷದ ಮೇಲೆ ಪ್ರತಿದಿನ ತಿರುಗುತ್ತದೆ. ಒಂದು ಅಕ್ಷದ ಸುತ್ತಿಗೆ 23 ಗಂಟೆಗಳು, 56 ನಿಮಿಷಗಳು ಮತ್ತು 4.09 ಸೆಕೆಂಡುಗಳು ಅಂದರೆ ಸುಮಾರು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಹಗಲು ರಾತ್ರಿ ಉಂಟಾಗುವುದು. ಅದೇ ರೀತಿ, ಭೂಮಿಯು ಸೂರ್ಯನ ಸುತ್ತ ಸುತ್ತಲು 365 ದಿನಗಳು, 6 ಗಂಟೆ 48 ನಿಮಿಷಗಳು ಮತ್ತು 45.51 ಸೆಕೆಂಡುಗಳನ್ನು ತೆಗೆದುಕೊಳ್ಳುತ್ತದೆ. ಈ ಕಾರಣದಿಂದ ಹವಾಮಾನಗಳು ಬದಲಾಗುತ್ತವೆ.
ಇದನ್ನೇಲ್ಲಾ ನಾವು ಸ್ಕೂಲ್ ನಲ್ಲಿಯೇ ಕಲಿತಿದ್ದೇವೆ ಈಗ ಯಾಕೆ ಹೇಳುತ್ತಿದ್ದೀರಿ ಅನ್ನಿಸಬಹುದು ನಿಮಗೆ. ಹೌದು ಇದೆಲ್ಲಾ ಗೊತ್ತಿರುವ ವಿಚಾರವೇ ಆದರೆ, ಭೂಮಿಯು ಹೀಗೆ ತಿರುಗುವುದನ್ನೇ ನಿಲ್ಲಿಸಿದರೆ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಭೂಮಿಯು ತನ್ನ ಅಕ್ಷದ ಸುತ್ತ ಗಂಟೆಗೆ 1000 ಮೈಲಿ ವೇಗದಲ್ಲಿ ಅಂದರೆ ಗಂಟೆಗೆ ಸುಮಾರು 1670 ಕಿ.ಮೀ ಸುತ್ತುತ್ತೆ. ಆದರೆ ಇದು ನಮಗೇನೂ ಪರಿಣಾಮ ಬೀರುವುದಿಲ್ಲ, ಯಾಕೆಂದ್ರೆ ನಾವೂ ಕೂಡ ಇದೇ ವೇಗದಲ್ಲಿ ಭೂಮಿಯೊಂದಿಗೆ ಚಲಿಸಿರ್ತೇವೆ.
ಆದರೆ ಭೂಮಿ ಇದ್ದಕ್ಕಿದ್ದಂತೆ ತಿರುಗುವುದನ್ನೇ ನಿಲ್ಲಿಸಿದರೆ ಏನಾಗುತ್ತದೆ? ವಿಜ್ಞಾನಿಗಳ ಪ್ರಕಾರ, ಭೂಮಿಯು ಇದ್ದಕ್ಕಿದ್ದಂತೆ ತಿರುಗುವುದನ್ನು ನಿಲ್ಲಿಸಿದರೆ ಪ್ರಳಯ ಉಂಟಾಗೋದು ಶತಃ ಸಿದ್ಧ. ಯಾಕಂದ್ರೆ ಭೂಮಿ ತಿರುಗುವುದನ್ನ ನಿಲ್ಲಿಸಿದ್ರೆ ಭೂಮಿಯ ಸಮತೋಲನ ಹದಗೆಡುತ್ತೆ. ಭೂಮಿಯ ಹಠಾತ್ ನಿಂತುಹೋದ್ರೆ ದುರಂತ ಸಭವಿಸುವುದಂತೂ ಸತ್ಯ. ಏಕೆಂದರೆ, ಸೂರ್ಯನ ಕಡೆಗೆ ಇರುವ ಭೂಮಿಯ ಭಾಗವು ನಿರಂತರವಾಗಿ ಶಾಖವನ್ನು ಅನುಭವಿಸುತ್ತೆ. ಮತ್ತೊಂದೆಡೆ, ಸೂರ್ಯನ ಕಿರಣಗಳು ತಲುಪದ ಕಾರಣ, ಆ ಭಾಗ ತುಂಬಾ ತಂಪಾಗಿರುತ್ತದೆ. ಅಂದರೆ ಒಂದು ಕಡೆ ಯಾವಾಗಲೂ ಹಗಲು ಹಾಗೂ ಮತ್ತೊಂದೆಡೆ ರಾತ್ರಿ ಎಂದಿಗೂ ಮುಗಿಯುವುದೇ ಇಲ್ಲ.
ಅಷ್ಟೇ ಅಲ್ಲ, ಸಮುದ್ರದ ನೀರು ಕ್ರಮೇಣ ಮೇಲಕ್ಕೆ ಚಲಿಸಲು ಪ್ರಾರಂಭಿಸುತ್ತದೆ. ಉತ್ತರ ಮತ್ತು ದಕ್ಷಿಣ ಧ್ರುವಗಳು ನೀರಿನಲ್ಲಿ ಮುಳುಗುತ್ತವೆ. ಇದರ ಪರಿಣಾಮವಾಗಿ ಕೆನಡಾವು ಉತ್ತರದಲ್ಲಿ ಸಂಪೂರ್ಣವಾಗಿ ನೀರಿನ ಅಡಿಯಲ್ಲಿರುತ್ತದೆ. ಇನ್ನೂ ವಿಸ್ತರಿಸಿ ಹೇಳುವುದಾದ್ರೆ, ಯುನೈಟೆಡ್ ಸ್ಟೇಟ್ಸ್, ಗ್ರೀನ್ಲ್ಯಾಂಡ್ ಸೈಬೀರಿಯಾ, ಏಷ್ಯಾ ಮತ್ತು ಯುರೋಪ್ ಮೊದಲಾದವುಗಳ ಉತ್ತರ ಬಯಲು ಪ್ರದೇಶಗಳು ನೀರಿನ ಅಡಿಯಲ್ಲಿರುತ್ತವೆ. ಇವೆಲ್ಲವೂ ಇದೀ ಜೀವ ಸಂಕುಲದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತೆ.
ಈ ಬಗ್ಗೆ ವಿಜ್ಞಾನಿ ನೀಲ್ ಡಿಗ್ರಾಸ್ ಟೈಸನ್ ಸಂದರ್ಶನವೊಂದರಲ್ಲಿ ಹೀಗೆ ಹೇಳುತ್ತಾರೆ. ಭೂಮಿಯು ತಿರುಗುವುದನ್ನು ನಿಲ್ಲಿಸಿದರೆ, ಭೂಮಿಯ ಮೇಲಿನ ನಮ್ಮೆಲ್ಲರ ಜೀವನವು ಕೊನೆಗೊಳ್ಳುತ್ತದೆ. ನಾವೆಲ್ಲರೂ ಪೂರ್ವದ ಭೂಮಿಯೊಂದಿಗೆ ಚಲಿಸುತ್ತಿದ್ದೇವೆ. ಭೂಮಿಯು ತಿರುಗುವುದನ್ನು ನಿಲ್ಲಿಸಿದರೆ, ನಾವೆಲ್ಲರೂ ಮುಂದೆ ಬೀಳುತ್ತೇವೆ. ಆಗ ಭೂಮಿಯ ಮೇಲಿನ ಎಲ್ಲರೂ ಸಾ’ಯು’ತ್ತಾರೆ ಎನ್ನುತ್ತಾರೆ.
ಇನ್ನು ಒಂದು ವೇಳೆ, ಭೂಮಿಯು ನಿಲ್ಲುವ ಬದಲು ವೇಗವಾಗಿ ತಿರುಗಲು ಪ್ರಾರಂಭಿಸಿದರೂ, ಅದು ಕೂಡ ಅಪಾಯಕಾರಿಯೇ. ಏಕೆಂದರೆ, 24 ಗಂಟೆಗಳಿರುವ ದಿನವು ಕಡಿಮೆಯಾಗುತ್ತದೆ. ಹಗಲು ರಾತ್ರಿಗಳು ಕಡಿಮೆಯಾಗತೊಡಗುತ್ತವೆ. ನಾವು ಕಡಿಮೆ ತೂಕವನ್ನು ಸಹ ಅನುಭವಿಸಬೇಕಾಗುತ್ತದೆ ಕಾರಣ ಕೇಂದ್ರಾಪಗಾಮಿ ಬಲವು ವೇಗವಾಗಿರುತ್ತದೆ, ಇದು ಗುರುತ್ವಾಕರ್ಷಣೆಯ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ, ಹವಾಮಾನದಲ್ಲಿಯೂ ಬದಲಾವಣೆಯಾಗುತ್ತದೆ. ಇವೆಲ್ಲವನ್ನೂ ಕೇಳಿದ್ರೆ ಎದೆ ಝಲ್ ಅನ್ನುತ್ತೆ ಅಲ್ವಾ! ಹಾಗಾಗಿ ಭೂಮಿ ಇದ್ದ ಹಾಗೇ ಇರ್ಲಿ. ಭೀಮಿಯ ಚಲನೆಯ ಬಗ್ಗೆ ನಾವು ನಮ್ಮನ್ನು ಪ್ರಶ್ನಿಸಿಕೊಳ್ಳೋದನ್ನೇ ಬಿಡೋಣ ಏನಂತೀರಿ.
Comments are closed.