ತಮಿಳುನಾಡಿನಲ್ಲಿ ಸಿಂಗಂ ಆಟ ಶುರು, ಆದರೆ ಇದು ಸಿಂಗಲ್ ಸಿಂಹಗಳ ಆಟವಲ್ಲ, ಅವಳಿ ಸಹೋದರರ ಆತ. ವಿಷಯ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆ ತಮಿಳು ಚಿತ್ರರಂಗದ ಸೂಪರ್ ಹಿಟ್ ಸಿನಿಮಾಗಳ ಸರಿಯಾಗಿರುವ ಸಿಂಗಂ ಬಗ್ಗೆ ತಿಳಿದಿದೆ ಅಲ್ವೇ. ಹೌದು ಈ ಸಿನಿಮಾಗಳ ಸರಣಿಯ ನಾಯಕನಾಗಿರುವುದು ನಟ ಸೂರ್ಯ. ಇದು ಎಷ್ಟರ ಮಟ್ಟಿಗೆ ಜನಪ್ರಿಯತೆ ಪಡೆದುಕೊಂಡಿದೆ ಎಂದರೆ ಭಾರತ ದೇಶದಲ್ಲಿ ಎಲ್ಲೇ ದಕ್ಷ ಪೊಲೀಸ್ ಅಧಿಕಾರಿಗಳು ಬಂದರು ಕೂಡ ಅವರನ್ನು ಸಿಂಗಂ ಎಂಬುದಾಗಿ ಗೌರವಿಸುತ್ತಾರೆ.
ನಮ್ಮ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕೂಡ ಅಣ್ಣಾಮಲೈ ರವಿ ಡಿ ಚೆನ್ನಣ್ಣನವರ್ ಹೀಗೆ ಹಲವಾರು ಅಧಿಕಾರಿಗಳನ್ನು ಸಿಂಗಂ ಎಂದು ಕರೆಯಲಾಗುತ್ತಿತ್ತು. ಯಾಕೆಂದರೆ ಅವರ ದಕ್ಷ ಕಾರ್ಯವನ್ನು ಗಮನಿಸಿ ಜನರೇ ಅವರನ್ನು ಹೀರೋ ಆಗಿ ಮಾಡಿದ್ದರು. ಈಗ ಇದೇ ರೀತಿಯ ಸಿಂಗಂ ಅಧಿಕಾರಿಗಳು ಈಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಹೌದು ತಮಿಳುನಾಡಿನ ಚೆಂಗಲ್ ಪೇಟೆಯ ಪೊಲೀಸ್ ವರಿಷ್ಠಾಧಿಕಾರಿ ಯಾಗಿರುವ ಎಸ್ಪಿ ಅರವಿಂದನ್ ರವರು ತಮ್ಮ ಸಹೋದರ ನಾಗಿರುವ ಅಭಿನಂದನ್ ಅವರ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದರು. ಈಗ ಇದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡಮಟ್ಟದಲ್ಲಿ ಸಂಚಲನವನ್ನು ಸೃಷ್ಟಿಸಿ ಸಹಸ್ರಾರು ಲೈಕ್ಸ್ ಗಳನ್ನು ಕೂಡ ಪಡೆದುಕೊಂಡಿದೆ.
ಇಲ್ಲಿ ಇನ್ನೊಂದು ವಿಚಾರ ಗಮನಿಸಬೇಕಾಗಿರುವುದು ಏನೆಂದರೆ ಅರವಿಂದನ್ ರವರು ತಮಿಳುನಾಡು ಪೊಲೀಸ್ ಅಧಿಕಾರಿ ಆಗಿದ್ದರೆ, ಅವರ ಸಹೋದರ ಅಭಿನಂದನ್ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಬ್ಬರೂ ಕೂಡ ಅವಳಿ ಗಳಾಗಿದ್ದು ಇಬ್ಬರನ್ನು ಸಿಂಗಂ ಅಧಿಕಾರಿಗಳು ಎನ್ನುವುದಾಗಿ ಸೋಶಿಯಲ್ ಮೀಡಿಯಾದಲ್ಲಿ ಜನರು ನೆಟ್ಟಿಗರು ಕರೆಯುತ್ತಿದ್ದಾರೆ. ಇನ್ನು ಅರವಿಂದನ್ ರವರು ಈಗಾಗಲೇ ದಕ್ಷ ಪೊಲೀಸ್ ಅಧಿಕಾರಿಯಾಗಿ ಹಲವಾರು ಬಾರಿ ಸುದ್ದಿ ಕೂಡ ಆಗಿದ್ದಾರೆ ಎಂಬುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಒಟ್ಟಾರೆಯಾಗಿ ಕಾನೂನು-ಸುವ್ಯವಸ್ಥೆ ಕಾಪಾಡುವಂತಹ ಈ ಸಹೋದರರಿಗೆ ಎಲ್ಲ ಫಿದಾ ಆಗಿರುವುದಂತೂ ಪಕ್ಕ.
Comments are closed.