ದಿವ್ಯ ಸುರೇಶ್ ರವರಿಗೆ ಖುಲಾಯಿಸಿದ ಮತ್ತೊಂದು ಅದೃಷ್ಟ; ಕೊನೆಗೂ ಅಭಿಮಾನಿಗಳಿಗೆ ಸಿಹಿಸುದ್ದಿ, ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಗೆ ಕಾಲಿಟ್ಟವರು ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಜನಪ್ರಿಯತೆ ಯಶಸ್ಸನ್ನು ಪಡೆದಿದ್ದಾರೆ ಎನ್ನುವುದು ಈಗಾಗಲೇ ಸಾಬೀತಾಗಿರುವ ವಿಚಾರ. ಈ ಸಾಲಿಗೆ ಈಗ ದಿವ್ಯ ಸುರೇಶ್ ರವರು ಕೂಡ ಭರ್ತಿಯಾಗಿದ್ದಾರೆ. ಹೌದು ಬಿಗ್ ಬಾಸ್ ಕನ್ನಡ ಸೀಸನ್ 8 ಸ್ಪರ್ಧಿ ಆಗಿರುವ ದಿವ್ಯ ಸುರೇಶ್ ರವರು ಹಲವಾರು ವಿಚಾರಗಳಿಗಾಗಿ ಸುದ್ದಿಯಾದವರು. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ಹಲವಾರು ಫೋಟೋಶೂಟ್ ಗಳಲ್ಲಿ ಕಾಣಿಸಿಕೊಂಡು ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿ ಸುದ್ದಿಯಾಗಿರುವುದು ಕೂಡ ನಾವು ನೋಡಿದ್ದೇವೆ.
ಇತ್ತೀಚಿಗಷ್ಟೇ ದಿವ್ಯ ಸುರೇಶ್ ರವರು ಮೊದಲ ಬಾರಿ ನಾಯಕಿಯಾಗಿ ಕಾಣಿಸಿಕೊಂಡಿರುವ ರೌಡಿ ಬೇಬಿ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಎಲ್ಲರೂ ಕೂಡ ಚಿತ್ರವನ್ನು ನೋಡಿ ದಿವ್ಯ ಸುರೇಶ್ ರವರ ಪಾತ್ರಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ದಿವ್ಯ ಸುರೇಶ ರವರು ಈಗ ಮತ್ತೊಮ್ಮೆ ತಮ್ಮ ಅಭಿಮಾನಿಗಳಿಗೆ ಸಂತೋಷದ ಸುದ್ದಿಯನ್ನು ನೀಡಲು ಹೊರಟಿದ್ದಾರೆ. ಗುಡ್ ನ್ಯೂಸ್ ಅಂದ ತಕ್ಷಣ ಅವರಿಗೆ ಮದುವೆ ಆಗುತ್ತಿದೆ ಎಂಬುದಾಗಿ ತಿಳಿದುಕೊಳ್ಳಬೇಡಿ. ನಿಜವಾದ ವಿಚಾರ ಬೇರೆನೆ ಇದೆ. ಹಾಗಿದ್ದರೆ ಅದು ಏನೆಂದು ಹೇಳುತ್ತೇವೆ ಬನ್ನಿ.
ಹೌದು ಗೆಳೆಯರೇ ರೌಡಿಬೇಬಿ ಸಿನಿಮಾದ ನಂತರ ದಿವ್ಯ ಸುರೇಶ ರವರು ಹಿರಣ್ಣಯ್ಯ ಸಿನಿಮಾದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ಡಿಗ್ರಿ ನಾಗರಾಜ್ ರವರ ಮಗನಾಗಿರುವ ರಾಜವರ್ಧನ್. ಇವರಿಬ್ಬರು ಮೊದಲಿನಿಂದಲೂ ಕೂಡ ಉತ್ತಮ ಸ್ನೇಹಿತರಾಗಿದ್ದು ಈಗ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಕಾಲ ಕ್ರಮೇಣವಾಗಿ ಬಿಗ್ ಬಾಸ್ ಜಾತಿಯ ದಿವ್ಯ ಸುರೇಶ್ ರವರು ಒಂದೊಂದು ಸಿನಿಮಾದಲ್ಲಿ ನಟಿಸುತ್ತಾ ಚಿತ್ರರಂಗದಲ್ಲಿ ತಮ್ಮ ನೆಲೆಯನ್ನು ಭದ್ರವಾಗಿಸಲು ಪರಿಶ್ರಮ ಪಡುತ್ತಿದ್ದಾರೆ. ಅವರಿಗೆ ಇನ್ನಷ್ಟು ಅವಕಾಶಗಳು ಸಿಗಲಿ ಎಂಬುದಾಗಿ ಹಾರೈಸೋಣ.
Comments are closed.