ಸಿನಿಮಾ ತಯಾರಾಗುವ ಮುನ್ನವೇ ಜನಾರ್ಧನ್ ರೆಡ್ಡಿ ಮಗನ ಸಿನಿಮಾ ದಲ್ಲಿ ಟ್ವಿಸ್ಟ್, ಯುವ ನಟಿಯನ್ನು ಆಯ್ಕೆ ಮಡಿದ ಚಿತ್ರ ತಂಡ, ಯಾರು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಪ್ರತಿಭೆಗಳು ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿವೆ. ಅವುಗಳಲ್ಲಿ ಜನನಾಯಕರ ಮಕ್ಕಳು ಕೂಡ ಹೆಚ್ಚಾಗುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೆ ಜಮೀರ್ ಅಹ್ಮದ್ ಅವರ ಮಗ ಕೂಡ ಹೊಸ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದಾರೆ. ಈಗ ಅದೇ ಸಾಲಿಗೆ ಜನಾರ್ಧನ ರೆಡ್ಡಿ ರವರ ಮಗ ಕಿರೀಟಿ ಕೂಡ ಸೇರ್ಪಡೆಯಾಗಿದ್ದಾರೆ. ಹಲವಾರು ಸಮಯಗಳಿಂದ ಜನಾರ್ಧನರೆಡ್ಡಿ ಅವರ ಮಗ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಾರೆ ಎಂಬುದಾಗಿ ಕೇಳಿಬರುತ್ತಿತ್ತು.
ಆದರೆ ಅದು ಈಗ ಕೊನೆಗೂ ಸತ್ಯವಾಗಿದೆ. ಹೌದು ಕಿರೀಟೀ ಅವರು ಹೊಸ ಚಿತ್ರದ ಮೂಲಕ ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿದ್ದಾರೆ. ಚಿತ್ರದ ಮುಹೂರ್ತ ಸಮಾರಂಭ ನಾಳೆ ನಡೆಯಲಿದೆ. ಈ ಚಿತ್ರವನ್ನು ಈಗ ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ವಾರಾಹಿ ಚಲನಚಿತ್ರ ಸಂಸ್ಥೆಯು ನಿರ್ಮಾಣ ಮಾಡಲಿದೆ. ಸಿನಿಮಾದ ನಿರ್ದೇಶಕರಾಗಿ ರಾಧಾಕೃಷ್ಣ ಕುಮಾರ್ ಅವರು ಕಾಣಿಸಿಕೊಳ್ಳಲಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ರವರು ಚಿತ್ರದ ಸಂಗೀತ ನಿರ್ದೇಶಕರಾಗಿದ್ದಾರೆ.
ಒಟ್ಟಾರೆಯಾಗಿ ಜನಾರ್ಧನ ರೆಡ್ಡಿ ರವರ ಮಗನಾಗಿರುವ ಕಿರೀಟಿಗೆ ಚಿತ್ರರಂಗದಲ್ಲಿ ಅದ್ದೂರಿ ಸ್ವಾಗತ ಸಿಗಲಿದೆ ಎಂದು ಅಂದಾಜು ಹಾಕಲಾಗಿದೆ. ಸಿನಿಮಾ ಕನ್ನಡ ಹಾಗೂ ತೆಲುಗು ಎರಡೂ ಭಾಷೆಗಳಲ್ಲಿ ಕೂಡ ಬಿಡುಗಡೆಯಾಗಲಿದೆ. ಚಿತ್ರದ ನಾಯಕಿಯ ಕುರಿತಂತೆ ಕೂಡ ಹಲವಾರು ಚರ್ಚೆಗಳು ಎದ್ದಿದ್ದವು.
ಈಗ ಅವುಗಳಿಗೆ ತೆರೆಬಿದ್ದಿದ್ದು ಕಿಸ್ ಖ್ಯಾತಿಯ ಶ್ರೀಲೀಲಾ ರವರು ಚಿತ್ರದ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ತೆಲುಗಿನಲ್ಲಿ ಕೂಡ ಶ್ರೀಲೀಲಾ ರವರು ಜನಪ್ರಿಯತೆ ಪಡೆದುಕೊಂಡಿರುವುದರಿಂದ ಆಗಿ ಚಿತ್ರರಂಗಕ್ಕೆ ಇನ್ನೂ ಪ್ಲಸ್ ಪಾಯಿಂಟ್ ಎಂದು ಹೇಳಬಹುದಾಗಿದೆ. ಈಗಾಗಲೇ ಹಲವಾರು ತೆಲುಗು ಸಿನಿಮಾಗಳಲ್ಲಿ ಕೂಡ ಶ್ರೀ ಲೀಲ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜನಾರ್ಧನ್ ರೆಡ್ಡಿ ಅವರ ಪುತ್ರನ ಈ ಸಿನಿಮಾ ಯಾವ ರೇಂಜಿಗೆ ಸೌಂಡ್ ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
Comments are closed.