Neer Dose Karnataka
Take a fresh look at your lifestyle.

ಕೊನೆಗೂ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ರವರ ಅಭಿಮಾನಿಗಳಿಗೆ ಸಿಹಿ ಸುದ್ದಿ, ಮತ್ತೊಂದು ಸರಿಯಾದ ನಿರ್ಧಾರ ತೆಗೆದುಕೊಂಡ ಬೊಮ್ಮಾಯಿ. ಏನಂತೀರಿ??

ನಮಸ್ಕಾರ ಸ್ನೇಹಿತರೇ, ಸಾಮಾನ್ಯವಾಗಿ ಒಂಬ ನಟನನ್ನ ಅತ್ಯದ್ಭುತವಾಗಿ ತೆರೆಯ ಮೇಲೆ ತೋರಿಸುವ ಶಕ್ತಿ ಇರುವುದು ನಿರ್ದೇಶಕನಿಗೆ. ಯಾಕಂದ್ರೆ ನಟ/ ನಟಿಗೆ ತಕ್ಕ ಹಾಗೆ ಸಿನಿಮಾಗಳಲ್ಲಿ ಪಾತ್ರಗಳನ್ನು ಸೃಷ್ಟಿಸಬಲ್ಲವರು ನಿರ್ದೇಶಕರು. ಪುಟ್ಟಣ್ಣ ಕಣಗಾಲ್ ಇಂಥ ನಿರ್ದೇಶಕರಲ್ಲಿ ಒಬ್ಬರು. ಅವರು ಇಂದು ನಮ್ಮೊಂದಿಗಿಲ್ಲವಾದರೂ ಅವರು ನಿರ್ದೇಶಿಸಿರುವ ಚಿತ್ರಗಳು ಮಾತ್ರ ಅಜರಾಮರ. ಪುಟ್ಟಣ್ಣ ಕಣಗಾಲ ಅವರ ಗಾರುಡಿಯಲ್ಲಿ ಪಳಗಿದ ತಾರೆಯರೆಷ್ಟೋ! ಡಾ.ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಕಲ್ವನಾ ಈ ಎಲ್ಲಾ ತಾರೆಯರೂ ಕಲಿತಿದ್ದು, ಬೆಳೆದಿದ್ದು ಫೇಮಸ್ ಆಗಿದ್ದು ಕಣಗಾಲ್ ನಿರ್ದೇಶನದ ಚಿತ್ರಗಳ ಮೂಲಕವೇ.

ಸಿನಿಮಾ ರಂಗದಲ್ಲಿ ನಿರ್ದೇಶಕರಾಗಿ ತನ್ನದೇ ಛಾಪು ಮೂಡಿಸಿದ ಕಣಗಾಲ್ ಅವರು ನಮ್ಮನ್ನಗಲಿ ದಶಕಗಳೇ ಕಳೆದರೂ ಅವರ ಸ್ಮರಣಾರ್ಥ ಒಂದು ಸ್ಮಾರಕವೂ ನಿರ್ಮಿಸಲಾಗಿಲ್ಲ. ಇಂಥ ಮೇರು ನಿರ್ದೇಶಕರನ್ನು ಸದಾ ಸದಾ ಕಾಲಕ್ಕೆ ಶಾಶ್ವತವಾಗಿಡಲು, ಇಇತರ ನಿರ್ದೇಶಕರಿಗೆ ಮಾದರಿಯಾಗಿಸಲು ಅವರ ಒಂದು ಸ್ಮಾರಕ ನಿರ್ಮಾಣವಾಗಬೇಕು. ಅವರು ಬಾಳಿ ಬದುಕಿದ ಮನೆಯನ್ನೇ ಸ್ಮಾರಕವಗಿಸಬೇಕು ಎನ್ನುವ ಬೇಡಿಕೆಯನ್ನು ಹಲವರು ರಾಜ್ಯ ಸರ್ಕಾರದ ಮುಂದಿಟ್ಟಿದ್ದರು. ಇದೀಗ ಆ ಕೆಲಸಕ್ಕೂ ಕಾಲ ಕೂಡಿ ಬಂದಿದೆ. ಸಿ ಎಂ ಬೊಮ್ಮಾಯಿ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಯದಲ್ಲಿ ಬೊಮ್ಮಾಯಿಯವರು ಈ ವಿಷಯವನ್ನು ಬಹಿರಂಗಪಡಿಸಿದ್ದರು. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಬಾಳಿದ ಅವರ ಪೂರ್ವಜರ ಮನೆ ಮೈಸೂರಿನ ಪಿರಿಯಾಪಟ್ಟಣದಲ್ಲಿದೆ. ಪುಟ್ಟಣ್ಣ ಅವರ ನಂತರ ಈ ಮನೆಯಲ್ಲಿ ಯಾರೂ ವಾಸಿಸದೆ ಇದೀಗ ಪಾಳು ಬಿದ್ದಿದೆ. ವಾಸಕ್ಕೆ ಯೋಗ್ಯವಾಗಿಯೂ ಇಲ್ಲ. ಹಾಗಾಗಿ ಶೀರ್ಘದಲ್ಲೇ ಪುಟ್ಟಣ್ಣ ಅವರ ಈ ಮನೆಯನ್ನು ಅವರ ಸ್ಮಾರಕವನ್ನಾಗಿಸುವುದಾಗಿ ಸಿಎಂ ಹೇಳಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಜೀರ್ಣೋದ್ಧಾರ ಮಾಡುವುದಕ್ಕೆ ಚಲನಚಿತ್ರ ಅಕಾಡೆಮಿ ಸರ್ಕಾರಕ್ಕೆ ಈ ಹಿಂದೆ ಮನವಿ ಸಲ್ಲಿಸಿತ್ತು. ಪುಟ್ಟಣ್ಣ ಅವರ ಮನೆಯನ್ನು ಸ್ಮಾರಕ ಮತ್ತು ಲೈಬ್ರರಿಯಾಗಿ ಪರಿವರ್ತಿಸಲು ಕಾರ್ಯ ಆರಂಭವಾಗಬೇಕಿದೆ. ಈ ಕೆಲಸಕ್ಕೆ ತಗುಲುವ ವೆಚ್ಚ ಸುಮಾರು 10 ಕೋಟಿ ಎಂದು ಅಂದಾಜಿಸಲಾಗಿದೆ.

Comments are closed.