ತಮ್ಮ ಎಂಗೇಜ್ಮೆಂಟ್ ಕುರಿತಂತೆ ಸುಳ್ಳು ಸುದ್ದಿ ಹರಡಿಸಿದವರಿಗೆ ಅದಿತಿ ರವರು ಏನೆಂದರು ಗೊತ್ತೇ?? 8 ವರ್ಷದಿಂದ ಲವ್ ಮಾಡ್ತಿದ್ದಾರೆ ಎಂದಿದ್ದಕ್ಕೆ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆ ಹಾಗೂ ಚಿತ್ರಗಳ ಆಫರ್ ಅನ್ನು ನಡೆಯುತ್ತಿರುವಂತಹ ಉದಯೋನ್ಮುಖ ನಟಿಯರಲ್ಲಿ ಅದಿತಿ ಪ್ರಭುದೇವ ಅಗ್ರಗಣ್ಯರಾಗಿ ಕಾಣಸಿಗುತ್ತಾರೆ. ಮುಂದಿನ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡೋದು ನಿಜ. ಅದಿತಿ ಪ್ರಭುದೇವ ಬೇರೆ ನಟಿಯರಂತೆ ಅಲ್ಲ. ನಮ್ಮ ಕನ್ನಡದ ಮಣ್ಣಿನ ಸೊಗಡಿಗೆ ಹೇಳಿಮಾಡಿಸಿದಂತಹ ನಟಿ ಅದಿತಿ ಪ್ರಭುದೇವ. ಕೆಲವೊಂದು ನಟಿಯರು ಸ್ವಲ್ಪ ಮಟ್ಟಿಗೆ ಯಶಸ್ಸು ಸಿಕ್ಕರೆ ಸಾಕು ಆಕಾಶದ ಮೇಲೆ ತೇಲಾಡುತ್ತಿರುತ್ತಾರೆ.
ಆದರೆ ಅಧಿತಿ ಪ್ರಭುದೇವ ಈಗಾಗಲೇ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿ ಬಹುಬೇಡಿಕೆಯ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಕೂಡ ಇಂದಿಗೂ ವಿನಮ್ರವಾಗಿ ಎಲ್ಲರೆದುರು ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಇವರನ್ನು ಕನ್ನಡ ಪ್ರೇಕ್ಷಕರು ನೆಚ್ಚಿನ ನಟಿ ಎಂದು ಕರೆಯೋದು. ಇತ್ತೀಚೆಗಷ್ಟೇ ಅದಿತಿ ಪ್ರಭುದೇವ ಯಶಸ್ ಎನ್ನುವವರನ್ನು ಎಂಗೇಜ್ಮೆಂಟ್ ಆಗಿರುವುದು ನಿಮಗೆಲ್ಲಾ ಗೊತ್ತಿದೆ. ಅವರೇ ಸ್ವತಹ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕುರಿತಂತೆ ಘೋಷಿಸಿದ್ದರು. ಇತ್ತೀಚಿಗೆ ಅಡಿತಿ ಪ್ರಭುದೇವ ಅವರ ಕುರಿತಂತೆ ಅವರು ಎಂಟು ವರ್ಷಗಳಿಂದ ಲವ್ ಮಾಡಿ ಈಗ ಮದುವೆಯಾಗುತ್ತಿದ್ದಾರೆ ಎಂಬುದಾಗಿ ಯೂಟ್ಯೂಬ್ ಸೇರಿದಂತೆ ಹಲವಾರು ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಗಳಲ್ಲಿ ಸುದ್ದಿಯಾಗುತ್ತಿತ್ತು.
ಇದಕ್ಕೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಉತ್ತರವನ್ನು ನೀಡಿದ್ದಾರೆ. ಅಷ್ಟಕ್ಕೂ ಅದಿತಿ ಪ್ರಭುದೇವ ಇದಕ್ಕೆ ಏನೆಂದು ಉತ್ತರ ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಈ ಕುರಿತಂತೆ ಮಾತನಾಡುತ್ತಾ ಇದು ಶುದ್ಧ ಸುಳ್ಳು ನಾನು ಯಶಸ್ ರವರನ್ನು ಪರಿಚಯ ಮಾಡಿಕೊಂಡಿದ್ದೇ ನಮ್ಮ ರಿಲೇಟಿವ್ ಮೂಲಕ ಎಂಬುದಾಗಿ ಹೇಳಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ರಿಲೇಟಿವ್ ಮೂಲಕ ಪರಿಚಿತರಾದ ಯಶಸ್ ರವರನ್ನು ಅವರ ಹಾಗೂ ನಮ್ಮ ಮನೆಯಲ್ಲಿ ಒಪ್ಪಿದ ನಂತರವೇ ಈಗ ನಾವು ಎಂಗೇಜ್ಮೆಂಟ್ ಮಾಡಿಕೊಂಡು ಮದುವೆಯಾಗುವುದಕ್ಕೆ ಸಿದ್ಧರಾಗಿರುವುದು ಎನ್ನುವುದಾಗಿ ಹೇಳಿದ್ದಾರೆ. ಒಟ್ಟಾರೆಯಾಗಿ ಹೇಳುವುದಾದರೆ ಇದು ಅರೆಂಜ್ ಮ್ಯಾರೇಜ್ ಆಗಿದೆ. ಆದರೆ ಅದಿತಿ ಪ್ರಭುದೇವ ರವರಿಗೆ ಇಷ್ಟವಾಗುವಂತಹ ಕೃಷಿ ಕ್ಷೇತ್ರದಲ್ಲಿ ಯಶಸ್ ರವರು ಕೂಡ ಸಕ್ರಿಯವಾಗಿರುವುದರಿಂದ ಆಗಿ ಇಬ್ಬರಿಗೂ ಒಂದೇ ಟೆಸ್ಟ್ ಇದೆ. ಹೀಗಾಗಿ ಇತ್ತೀಚಿನ ಸಮಯದಲ್ಲಿ ಅದಿತಿ ಪ್ರಭುದೇವ ರವರು ತಮ್ಮ ಭಾವಿ ಪತಿ ಯಶಸ್ ರವರನ್ನು ಇಷ್ಟಪಡುವ ಆರಂಭಿಸಿದ್ದಾರಂತೆ.
Comments are closed.