ದುಬೈ ನಲ್ಲಿ ಸುಂದರಿ ಹುಡುಗಿಯೊಂದಿಗೇ ಕ್ಯಾಮೆರಾ ಕಣ್ಣಿಗೆ ಕಂಡ ನಾಗಾರ್ಜುನ, ಕೊನೆಗೂ ಆ ಹುಡುಗಿ ಯಾರೆಂದು ತಿಳಿಯಿತು, ಯಾರಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ 80 ಹಾಗೂ 90ರ ದಶಕದಲ್ಲಿ ಕೂಡ ಯುವಜನರನ್ನು ತಮ್ಮ ಅಭಿನಯ ಹಾಗೂ ಸ್ಟೈಲ್ ವಿಭಿನ್ನ ಮ್ಯಾನರಿಸಂ ಮೂಲಕ ಗೆದ್ದುಕೊಂಡು ಬಂದವರು ನಟ ನಾಗಾರ್ಜುನ ರವರು. ಇಂದಿಗೂ ಕೂಡ ನೋಡಲು ಮೂವತ್ತರ ಹರೆಯದ ವ್ಯಕ್ತಿಯಂತೆ ಕಾಣುವ ಇವರು ಸದಾ ಎವರ್ಗ್ರೀನ್ ಎಂಬ ಖ್ಯಾತಿಗೂ ಕೂಡ ಒಳಗಾಗಿರುತ್ತಾರೆ. ಇತ್ತೀಚಿಗಷ್ಟೇ ನಿಮಗೆ ತಿಳಿದಿರುವಂತೆ ಅಕ್ಕಿನೇನಿ ನಾಗಾರ್ಜುನ ರವರ ಫ್ಯಾಮಿಲಿಯಲ್ಲಿ ನಡೆಯಬಾರದು ಅಂತಹ ಘಟನೆ ನಡೆದಿದೆ.
ಹೌದು ಅವರ ಮಗನಾಗಿರುವ ನಾಗಚೈತನ್ಯ ರವರನ್ನು ಮದುವೆಯಾಗಿದ್ದ ಸಮಂತ ರವರು ವಿವಾಹ ವಿಚ್ಛೇದನವನ್ನು ನೀಡಿ ಸಂಸಾರದಿಂದ ಹೊರ ನಡೆದಿದ್ದಾರೆ. ಈ ದುಃಖದಿಂದ ನಾಗಾರ್ಜುನ ರವರು ಹೊರಬಂದಿದ್ದು ಈಗಾಗಲೇ ಬಂಗಾರ್ ರಾಜು ಎನ್ನುವ ಸಿನಿಮಾದಲ್ಲಿ ಕೂಡ ತಮ್ಮ ಮಗ ನಾಗಚೈತನ್ಯ ರವರೊಂದಿಗೆ ನಟಿಸಿದ್ದಾರೆ. ಸಿನಿಮಾ ಬಾಕ್ಸಾಫೀಸ್ ನಲ್ಲಿ ಕೂಡ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದೆ. ಇನ್ನು ಸದ್ಯಕ್ಕೆ ನಾಗಾರ್ಜುನ ದುಬೈನಲ್ಲಿದ್ದು ಒಬ್ಬ ಹುಡುಗಿ ಜೊತೆಗೆ ಇರುವಂತಹ ಫೋಟೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನಲ್ ನ್ಯೂಸ್ ಕ್ರಿಯೇಟ್ ಮಾಡಿದ್ದು ಈ ಕುರಿತಂತೆ ಹಲವಾರು ಗುಸುಗುಸು ಮಾತುಗಳು ಕೂಡ ಎದ್ದಿವೆ. ಹಾಗಿದ್ದರೆ ಆ ಹುಡುಗಿ ಯಾರು ಎನ್ನುವುದನ್ನು ತಿಳಿಯೋಣ ಬನ್ನಿ.
ಆ ಹುಡುಗಿ ಇನ್ಯಾರು ಅಲ್ಲ ಗೆಳೆಯರೇ ನಾಗಾರ್ಜುನ ರವರ ಮುಂದಿನ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಅವರ ಹೀರೋಯಿನ್. ಹೌದು ಮೊದಲಿಗೆ ಈ ಘೋಸ್ಟ್ ಸಿನಿಮಾಗೆ ಕಾಜಲ್ ಅಗರ್ವಾಲ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಆದರೆ ಅವರು ಗರ್ಭಿಣಿಯಾದ ಹಿನ್ನೆಲೆಯಲ್ಲಿ ಸೋನಾಲ್ ಚೌಹಾಣ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಲಾಯಿತು. ಈ ಸಿನಿಮಾ ವಿಭಿನ್ನವಾಗಿ ಮೂಡಿ ಬರಲಿದ್ದು ನೆಕ್ಸ್ಟ್ ಲೇವೆಲ್ ಸಾಹಸ ದೃಶ್ಯಗಳು ಹಾಗೂ ಇಂಟಿಮೇಟೆಡ್ ರೊಮ್ಯಾಂಟಿಕ್ ದೃಶ್ಯಗಳು ಕೂಡ ಇರಲಿವೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ.
Comments are closed.