ಅಂದು ಐಪಿಎಲ್ ಬಗ್ಗೆ ಏನೇನೋ ಮಾತಾಡಿದ್ದ ಡೇಲ್ ಸ್ಟೈನ್ ಕೊನೆಗೆ ಐಪಿಎಲ್ ಗೆ ವಾಪಾಸ್, ಹೊಸ ಇನ್ನಿಂಗ್ಸ್ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಐಪಿಎಲ್ ಎಂದರೇ ಅದು ಭಾರತದ ಕ್ರಿಕೆಟ್ ಜಾತ್ರೆ. ಭರ್ತಿ ಎರಡು ತಿಂಗಳು ನಡೆಯುವ ಈ ಜಾತ್ರೆಯಲ್ಲಿ ಹೊರಡುವ, ಉದ್ಭವಿಸುವ ಉತ್ಸವ ಮೂರ್ತಿಗಳು ಅನೇಕ. ಇನ್ನು ಐಪಿಎಲ್ ನಿಂದ ಹಲವಾರು ಕ್ರಿಕೇಟಿಗರು ತಮ್ಮ ವೃತ್ತಿ ಜೀವನದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡುಕೊಂಡಿದ್ದಾರೆ. ಅದರಲ್ಲಿ ದಕ್ಷಿಣ ಆಫ್ರಿಕಾದ ಘಾತಕ ವೇಗಿ ಡೇಲ್ ಸ್ಟೈನ್ ಸಹ ಒಬ್ಬರು. ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಸ್ಟೇಯ್ನ್ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
2020ರ ನಂತರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಡೇಲ್ ಸ್ಟೈನ್ ವಿದಾಯ ಘೋಷಿಸಿದರು. ಇನ್ಮುಂದೆ ಸ್ಟೈನ್ ರನ್ನು ಐಪಿಎಲ್ ನಲ್ಲಿ ನೋಡಲು ಆಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದ ಅಭಿಮಾನಿಗಳಿಗೆ ಈಗ ಸಿಹಿ ಸುದ್ದಿ ದೊರೆತಿದೆ. ಹೌದು ಈ ಭಾರಿಯ ಐಪಿಎಲ್ ನಲ್ಲಿ ಡೇಲ್ ಸ್ಟೈನ್ ಕಾಣಿಸಿಕೊಳ್ಳಲಿದ್ದಾರೆ. ಆದರೆ ಈ ಸಮಯದಲ್ಲಿ ಐಪಿಎಲ್ ಬಗ್ಗೆ ಅಂದು ಕೆಲವೊಂದು ಟೀಕೆಗಳನ್ನು ಮಾಡಿದ್ದರು. ಆದರೆ ಇದೀಗ ಕೊನೆಗೆ ಐಪಿಎಲ್ ಗೆ ಬಂದಿದ್ದಾರೆ.
ಆದರೇ ಆಟಗಾರನಾಗಿ ಅಲ್ಲ, ಬದಲಿಗೆ ಕೋಚ್ ಆಗಿ. ಹೌದು ಸನ್ ರೈಸರ್ಸ್ ಹೈದರಾಬಾದ್ ತಂಡದ ಮುಖ್ಯ ಬೌಲಿಂಗ್ ಕೋಚ್ ಆಗಿ ಡೇಲ್ ಸ್ಟೈನ್ ಆ ತಂಡವನ್ನು ಕೂಡಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸ್ಟೇಯ್ನ್ ಭಾರತಕ್ಕೆ ಮರಳಿರುವುದು ನನಗೆ ಅತ್ಯಂತ ಹರ್ಷವಾಗಿದೆ. ಹೊಸ ಹುದ್ದೆ ನನ್ನ ಜವಾಬ್ದಾರಿಯನ್ನು ಇಮ್ಮಡಿಗೊಳಿಸಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಭಾರಿ ಉತ್ತಮ ಪ್ರದರ್ಶನ ನೀಡಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ತಂಡದಲ್ಲಿ ಭಾರತೀಯ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಉಮ್ರಾನ್ ಮಲೀಕ್, ವಾಷಿಂಗ್ಟನ್ ಸುಂದರ್, ಹೀಗೆ ಹಲವಾರು ವೇಗದ ಬೌಲರ್ ಗಳಿದ್ದಾರೆ. ಇವರನ್ನು ಸ್ಟೇಯ್ನ್ ಹೇಗೆ ತಯಾರು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.
Comments are closed.