Neer Dose Karnataka
Take a fresh look at your lifestyle.

ಕಮಲಿ ಧಾರವಾಹಿ ತಂಡದ ಕುರಿತು ಅಸಮಾಧಾನ ವ್ಯಕ್ತ ಪಡಿಸಿದ ಖ್ಯಾತ ನಟಿ ಸಪ್ನಾ ದೀಕ್ಷಿತ್, ಕಲಾವಿದರಿಗೆ ಹೀಗೆ ಮಾಡುವುದು ಎಷ್ಟು ಸರಿ??

ನಮಸ್ಕಾರ ವೀಕ್ಷಕರೇ, ಕಳೆದ ಒಂದೆರಡು ವರ್ಷಗಳಿಂದ ಪ್ರಸಾರವಾಗುತ್ತಿರುವ ಕಮಲಿ ಧಾರಾವಾಹಿ ಅಪ್ಪಟ ಹಳ್ಳಿ ಹುಡುಗಿಯ ಸುತ್ತ ಹೆಣೆದ ಒಂದು ಕಥಾ ಹಂದರವನ್ನು ಹೊಂದಿದೆ. ಕಮಲಿ ಧಾರಾವಾಹಿ ತನ್ನದೇ ಆದ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದು, ಅದರಲ್ಲಿನ ಪ್ರತಿ ಪಾತ್ರಕ್ಕೂ ಪ್ರಾಮುಖ್ಯತೆಯನ್ನು ಕೊಡಲಾಗಿದೆ.

ರಿಷಿ ಹಾಗೂ ಕಮಲಿ ಪ್ರೀತಿಸಿ, ಇದೀಗ ಮದುವೆಯೂ ಆಗಿ ಬಳಿಕ ದಿನದಿಂದ ದಿನಕ್ಕೆ ಬೇರೆ ಬೇರೆ ಟ್ವಿಸ್ಟ್ ಗಳನ್ನ ಪದೇದುಕೊಳ್ಳುತ್ತಿದೆ. ಈ ನಡುವೆ ಈ ಧಾರಾವಾಹಿಗೆ ಸಂಬಂಧಪಟ್ಟಂತೆ, ಇದರಲ್ಲಿ ನಟಿಸುತ್ತಿದ್ದ ನಟಿಯೊಬ್ಬರು ಬೇಸರದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು, ರಿಷಿ ತಾಯಿ ಪಾತ್ರವನ್ನು ನಿಭಾಯಿಸುತ್ತಿದ್ದ ನಟಿ ಸಪ್ನಾ ದೀಕ್ಷಿತ್. ಇದುವರೆಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದ ಇವರು, ಕಮಲಿ ಧಾರಾವಾಹಿಯ ಆರಂಭದಿಂದಲೂ ತಮ್ಮ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ.

ಸಪ್ನಾ ದೀಕ್ಷಿತ್ ಅವರು ತಾವು ಯಾವುದೇ ಪಾತ್ರ ಮಾಡಿದರೂ ಅದಕ್ಕೆ ಸರಿಯಾದ ನ್ಯಾಯ ಒದಗಿಸುತ್ತಾರೆ. ಈ ವರೆಗೆ ಅವರ ನಟೆನೆಯಲ್ಲಿ ಯಾವ ರಿಮಾರ್ಕ್ಸ್ ಕೂಡ ಇರಲಿಲ್ಲ. ಆದರೆ ಇದೀಗ ಈ ಘಟನೆ ನಡೆದುಹೋಗಿದೆ. ಏನು ಗೊತ್ತಾ? ತನಗೆ ಗೊತ್ತಿಲ್ಲದ ಹಾಗೆ ನನ್ನ ಪಾತ್ರಕ್ಕೆ ಬೇರೆಯವರನ್ನ ತಂದು ಕೆಲವು ಎಪಿಸೋಡ್ ಗಳ ಚಿತ್ರೀಕರಣವನ್ನು ಮಾಡಲಾಗಿದೆ, ನನಗೆ ಅರಿವಿಲ್ಲದೇ ನನ್ನನ್ನು ಪಾತ್ರದಿಂದ ತೆಗೆಯಲಾಗಿದೆ ಎಂದು ನಟಿ ಸಪ್ನಾ ದೀಕ್ಷಿತ್ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ನನಗೆ ಗೊತ್ತಿಲ್ಲದೇ ಕಮಲಿ ಧಾರಾವಾಹಿಯಿಂದ ನನ್ನನ್ನು ತೆಗೆದಿದ್ದು ಮಾತ್ರವಲ್ಲದೇ ನನ್ನ ಪಾತ್ರದ ಚಿತ್ರೀಕರಣವನ್ನು ಬೇರೆಯವರ ಬಳಿ ಮಾಡಿಸಿದ್ದಾರೆ. ಹಾಗೂ ಆ ಪಾತ್ರಕ್ಕೆ ಆಯ್ಕೆ ಯಾಗಿದ್ದು ಯಾರು ಎಂಬುದೂ ನನಗೆ ಗೊತ್ತಾಗಿದೆ. ಹಾಗಾಗಿ ನಾನೇ ಖುದ್ದಾಗಿ ನಿಮಗೆ ಈ ವಿಷಯ ತಿಳಿಸಲು ಇಷ್ಟಪಡುತ್ತೇನೆ ಎಂದಿದ್ದಾರೆ. ಜೊತೆಗೆ ಇಷ್ಟು ದಿನ ನನ್ನ ಪಾತ್ರವನ್ನು ಒಪ್ಪಿಕೊಂಡು ಆಶೀರ್ವದಿಸಿದ ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು ಎಂದು ವಿಡಿಯೋದಲ್ಲಿ ಹೇಳಿದ್ದಾರೆ ಸಪ್ನಾ ದೀಕ್ಷಿತ್. ಈ ವಿಡಿಯೋವನ್ನು ನೋಡಿ ಕಮಲಿ ಧಾರಾವಾಹಿ ತಂಡ ಇನ್ನೂ ಪ್ರತಿಕ್ರಿಯೆ ನೀಡಿಲ್ಲ. ಅದೇನೇ ಇರಲಿ ಸಪ್ನಾ ದೀಕ್ಷಿತ್ ಅತ್ಯುತ್ತಮ ನಟಿ ಅವರೇ ಮುಂದುವರಿಯಬೇಕು ಎಂದು ಅಭಿಮಾನಿಗಳು ಆಶಿಸಿದ್ದಾರೆ.

Comments are closed.